Bank Holidays in January: ಜನವರಿಯಲ್ಲಿ 14 ದಿನಗಳವೆಗೆ ಬ್ಯಾಂಕ್ ಬಂದ್, ರಜಾ ದಿನ ನೋಡಿಕೊಂಡು ವ್ಯವಹಾರ ನಡೆಸಿ
ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ 14 ದಿನಗಳವರೆಗೆ ಬ್ಯಾಂಕ್‌ಗಳು ಮುಚ್ಚಿರುವುದಿಲ್ಲ. ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ ಪ್ರಕಾರ, ಈ ರಜಾದಿನಗಳು ಆಯಾ ರಾಜ್ಯಗಳಿಗೆ ಸಂಬಂಧ ಪಟ್ಟದ್ದಾಗಿದೆ.
ನವದೆಹಲಿ : ಹೊಸ ವರ್ಷದ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ವರ್ಷದ ಆರಂಭದ ಮೊದಲು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಜನವರಿ 2022 ರಲ್ಲಿ ಬ್ಯಾಂಕ್ ರಜಾದಿನಗಳ (Bank holidays) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ, ಜನವರಿ 2022 ರಲ್ಲಿ ಒಟ್ಟು 14 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಈ ಕಾರಣದಿಂದಾಗಿ, ಬ್ಯಾಂಕ್ ನಲ್ಲಿ (Bank) ಯಾವುದೇ ಪ್ರಮುಖ ಕೆಲಸ ಹೊಂದಿದ್ದರೆ, ರಜಾ ದಿನವನ್ನು ಗಮನಿಸಿಕೊಂಡು ವ್ಯವಹಾರ ಇಟ್ಟುಕೊಳ್ಳುವುದು ಒಳಿತು.
14 ದಿನ ಬ್ಯಾಂಕ್ ರಜೆ :
ಜನವರಿ 2022 ರಲ್ಲಿ, ಒಟ್ಟು 14 ದಿನಗಳವರೆಗೆ ಬ್ಯಾಂಕ್ ರಜೆ (janaury bank holidays) ಇರುತ್ತದೆ. ಇದರಲ್ಲಿ 4 ಭಾನುವಾರಗಳು ಸೇರಿವೆ. ಅಲ್ಲದೆ ಕೆಲವು ರಜಾದಿನಗಳು ನಿರಂತರವಾಗಿ ಬೀಳುತ್ತವೆ. ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ 14 ದಿನಗಳವರೆಗೆ ಬ್ಯಾಂಕ್‌ಗಳು ಮುಚ್ಚಿರುವುದಿಲ್ಲ. ಆರ್‌ಬಿಐನ (RBI) ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ ಪ್ರಕಾರ, ಈ ರಜಾದಿನಗಳು ಆಯಾ ರಾಜ್ಯಗಳಿಗೆ ಸಂಬಂಧ ಪಟ್ಟದ್ದಾಗಿದೆ. ಈ ಎಲ್ಲಾ ರಜಾದಿನಗಳು ಎಲ್ಲಾ ರಾಜ್ಯಗಳಲ್ಲಿ ಅನ್ವಯಿಸುವುದಿಲ್ಲ. ಇನ್ನು ಆರ್‌ಬಿಐ (RBI Guidelines) ಮಾರ್ಗಸೂಚಿಗಳ ಪ್ರಕಾರ, ಭಾನುವಾರದ ಹೊರತಾಗಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಇದನ್ನೂ ಓದಿ : ಈ ನಗರದ ಗ್ರಾಹಕರಿಗೆ ಸಿಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ , ನಿಮ್ಮ ನಗರದ ಇದರಲ್ಲಿದೆಯೇ ನೋಡಿಕೊಳ್ಳಿ
ಈ ದಿನಗಳಲ್ಲಿ ರಜೆ ಇರುತ್ತದೆ
ದಿನಾಂಕ | ದಿನ | ಹಬ್ಬ |
1 ಜನವರಿ | ಶನಿವಾರ | ದೇಶಾದ್ಯಂತ ಹೊಸ ವರ್ಷದ ರಜೆ |
2 ಜನವರಿ | ಭಾನುವಾರ | ದೇಶದಾದ್ಯಂತ ಸಾಪ್ತಾಹಿಕ ರಜೆ |
3 ಜನವರಿ | ಸೋಮವಾರ | ಸಿಕ್ಕಿಂ ಹೊಸ ವರ್ಷ ಮತ್ತು ಲಸುಂಗ್ ರಜೆ |
4 ಜನವರಿ | ಮಂಗಳವಾರ | ಸಿಕ್ಕಿಂನಲ್ಲಿ ಲಸುಂಗ್ ಹಬ್ಬದ ರಜೆ |
9 ಜನವರಿ | ಭಾನುವಾರ | ದೇಶಾದ್ಯಂತ, ವಾರದ ರಜೆ |
11 ಜನವರಿ | ಮಂಗಳವಾರ | ಮಿಷನರಿ ಡೇ ಮಿಜೋರಾಂ |
12 ಜನವರಿ | ಬುಧವಾರ | ಸ್ವಾಮಿ ವಿವೇಕಾನಂದ ಜಯಂತಿ |
14 ಜನವರಿ | ಶುಕ್ರವಾರ | ಮಕರ ಸಂಕ್ರಾಂತಿ |
15 ಜನವರಿ | ಶನಿವಾರ | ಪೊಂಗಲ್ (ಆಂಧ್ರಪ್ರದೇಶ, ಪುದುಚೇರಿ, ತಮಿಳುನಾಡು) |
16 ಜನವರಿ | ಭಾನುವಾರ | ದೇಶದಾದ್ಯಂತ ವಾರದ ರಜೆ |
23 ಜನವರಿ | ಭಾನುವಾರ | ದೇಶಾದ್ಯಂತ ವಾರದ ರಜೆ |
25 ಜನವರಿ | ಮಂಗಳವಾರ | ರಾಜ್ಯ ಸಂಸ್ಥಾಪನಾ ದಿನ ಹಿಮಾಚಲ ಪ್ರದೇಶ |
26 ಜನವರಿ | ಬುಧವಾರ | ಗಣರಾಜ್ಯೋತ್ಸವ |
31 ಜನವರಿ | ಸೋಮವಾರ | ಅಸ್ಸಾಂನಲ್ಲಿ ರಜಾದಿನ |
ಇದನ್ನೂ ಓದಿ : eKYC ಇಲ್ಲದೆ ಖಾತೆಗೆ ಬರುವುದಿಲ್ಲ ಪಿಎಂ ಕಿಸಾನ್ 10ನೇ ಕಂತು, ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿಕೊಳ್ಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.