ನವದೆಹಲಿ: Bank Holidays In August- ಬ್ಯಾಂಕಿನ ಯಾವುದಾದರೂ ಪ್ರಮುಖ ಕೆಲಸವಿದ್ದರೆ, ಚೆಕ್ ಕ್ಲಿಯರ್ ಮಾಡುವುದು ಅಥವಾ ಯಾರಿಗಾದರೂ ಹಣ ವರ್ಗಾವಣೆ ಮಾಡುವುದು ಅಥವಾ ಸಂಬಳ ಮತ್ತು ಪಿಂಚಣಿಗೆ ಸಂಬಂಧಿಸಿದ ಯಾವುದೇ ಕೆಲಸಗಳು ಇದ್ದರೆ, ಈಗ ನೀವು ಮುಂದಿನ ವಾರವೇ ಆ ಕೆಲಸಗಳನ್ನು ಪೂರ್ಣಗೊಳಿಸಬಹುದು. ಏಕೆಂದರೆ ಬ್ಯಾಂಕ್ ಮುಂದಿನ  ಐದು ದಿನಗಳು ಮುಚ್ಚಿರುತ್ತದೆ. ಆರ್‌ಬಿಐ ನೀಡಿರುವ ರಜಾದಿನಗಳ ಪಟ್ಟಿಯ ಪ್ರಕಾರ, ಆಗಸ್ಟ್‌ನಲ್ಲಿ ಅರ್ಧ ತಿಂಗಳು ಬ್ಯಾಂಕುಗಳು ಮುಚ್ಚಲ್ಪಡುತ್ತವೆ.


COMMERCIAL BREAK
SCROLL TO CONTINUE READING

ಆಗಸ್ಟ್‌ನಲ್ಲಿ 15 ರಜಾದಿನಗಳು:
ಆಗಸ್ಟ್‌ನಲ್ಲಿ ಬರುವ 15 ರಜಾದಿನಗಳಲ್ಲಿ, 6 ರಜಾದಿನಗಳು ಕಳೆದಿವೆ,  9 ರಜಾದಿನಗಳು ಬಾಕಿ ಉಳಿದಿವೆ. ಕೆಲವು ಪ್ರಾದೇಶಿಕ ರಜಾದಿನಗಳು ಮತ್ತು ಕೆಲವು ಸಾಮಾನ್ಯ ರಜಾದಿನಗಳಿವೆ (General Holidays). ಪ್ರಾದೇಶಿಕ ರಜಾದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಮಾತ್ರ ಬ್ಯಾಂಕುಗಳು ಮುಚ್ಚಲ್ಪಡುತ್ತವೆ, ಇತರ ಸ್ಥಳಗಳಲ್ಲಿ ಬಂಕುಗಳು ತೆರೆದಿರುತ್ತವೆ. ಈ ಹಿಂದೆ, ಆಗಸ್ಟ್ 13 ರಿಂದ ಆಗಸ್ಟ್ 16 ರವರೆಗೆ, ಬ್ಯಾಂಕುಗಳನ್ನು ಸತತ ನಾಲ್ಕು ದಿನಗಳವರೆಗೆ ಮುಚ್ಚಲಾಗಿತ್ತು. ಇದೀಗ ಇಂದಿನಿಂದ 5 ದಿನಗಳವರೆಗೆ ಬ್ಯಾಂಕುಗಳಿಗೆ ರಜೆ ಇರಲಿದೆ. ನೀವು ಕೂಡ ಕೆಲವು ಕೆಲಸಗಳನ್ನು ಮಾಡಲು ಬಯಸಿದರೆ, ಈ ರಜಾದಿನಗಳ ಪಟ್ಟಿಯನ್ನು ಇಂದೇ ಪರಿಶೀಲಿಸಿ.


ಇದನ್ನೂ ಓದಿ- RBI New Locker Rules: ಬ್ಯಾಂಕ್ ಲಾಕರ್‌ನಲ್ಲಿ ಕಳ್ಳತನಕ್ಕೆ ಯಾರು ಹೊಣೆ? ಆರ್‌ಬಿಐನ ಹೊಸ ನಿಯಮ ತಿಳಿಯಿರಿ


ಇಂದಿನಿಂದ 5 ದಿನಗಳವರೆಗೆ ಬ್ಯಾಂಕುಗಳು ಮುಚ್ಚಿರುತ್ತವೆ:
ಇಂದು ಆಗಸ್ಟ್ 19 ರಿಂದ ಆಗಸ್ಟ್ 23 ರವರೆಗೆ ಅಂದರೆ ಸಂಪೂರ್ಣ 5 ದಿನಗಳವರೆಗೆ ಬ್ಯಾಂಕುಗಳು ಲಾಕ್ ಆಗಿರುತ್ತವೆ. ಇಂದು ಮೊಹರಂ ಕಾರಣ ಬ್ಯಾಂಕ್‌ಗಳಲ್ಲಿ ಕೆಲಸ ಇರುವುದಿಲ್ಲ. ಅಗರ್ತಲಾ, ಅಹಮದಾಬಾದ್, ಬೇಲಾಪುರ, ಭೋಪಾಲ್, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ರಾಯ್ಪುರ, ರಾಂಚಿ ಮತ್ತು ಶ್ರೀನಗರಗಳಲ್ಲಿ ಈ ದಿನ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದರ ನಂತರ, ಓಣಂ ನಿಮಿತ್ತ ಆಗಸ್ಟ್ 20 ರಂದು ಬೆಂಗಳೂರು, ಚೆನ್ನೈ, ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುವುದು (Bank Holidays). ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಆಗಸ್ಟ್ 21 ರಂದು ತಿರುವೊಣಂ ಮತ್ತು ಆಗಸ್ಟ್ 23 ರಂದು ಶ್ರೀ ನಾರಾಯಣ ಗುರು ಜಯಂತಿಯಂದು ಬ್ಯಾಂಕ್ ರಜೆ ಇರುತ್ತದೆ.


>> ಆಗಸ್ಟ್ 19 - ಮೊಹರಂ (ಅಶುರಾ) - ಅಗರ್ತಲಾ, ಅಹಮದಾಬಾದ್, ಬೇಲಾಪುರ, ಭೋಪಾಲ್, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ್, ಕೋಲ್ಕತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ರಾಯಪುರ, ರಾಂಚಿ ಮತ್ತು ಶ್ರೀನಗರ
>> ಆಗಸ್ಟ್ 20 - ಮೊಹರಂ / ಮೊದಲ ಓಣಂ - ಬೆಂಗಳೂರು, ಚೆನ್ನೈ, ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲ್ಪಡುತ್ತವೆ.
>> ಆಗಸ್ಟ್ 21- ತಿರುವೊಣಂ- ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುವುದು.
>> 22 ಆಗಸ್ಟ್ - ಭಾನುವಾರ ರಜೆ
>> 23 ಆಗಸ್ಟ್ - ಶ್ರೀ ನಾರಾಯಣ ಗುರು ಜಯಂತಿ - ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.


ಇದನ್ನೂ ಓದಿ- Petrol Diesel Price: ರಾಜ್ಯಗಳು ಬಯಸಿದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಮಾಡಬಹುದು- ಕೇಂದ್ರ ಪೆಟ್ರೋಲಿಯಂ ಸಚಿವ


ತಿಂಗಳ ಕೊನೆಯಲ್ಲಿ 4 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ:
ಇದರ ನಂತರ, ಬ್ಯಾಂಕುಗಳು ತಿಂಗಳಾಂತ್ಯದಲ್ಲಿ ನಾಲ್ಕು ದಿನಗಳವರೆಗೆ ಮುಚ್ಚಲ್ಪಡುತ್ತವೆ. ಆಗಸ್ಟ್ 28 ತಿಂಗಳ ನಾಲ್ಕನೇ ಶನಿವಾರವಾಗಿರುತ್ತದೆ, ಆದ್ದರಿಂದ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆಗಸ್ಟ್ 29 ರಂದು, ಭಾನುವಾರದ ಕಾರಣ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆಗಸ್ಟ್ 30 ರಂದು ಕೊನೆಯ ದಿನವಾದ ಜನ್ಮಾಷ್ಟಮಿ/ಕೃಷ್ಣ ಜಯಂತಿಯಿಂದಾಗಿ ಅಹಮದಾಬಾದ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಕ್, ಜೈಪುರ, ಜಮ್ಮು, ಕಾನ್ಪುರ, ಲಕ್ನೋ, ಪಾಟ್ನಾ, ರಾಯ್ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ ಮತ್ತು ಶ್ರೀನಗರಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.  ಆಗಸ್ಟ್ 31 ರಂದು ಶ್ರೀ ಕೃಷ್ಣ ಅಷ್ಟಮಿಯ ನಿಮಿತ್ತ ಹೈದರಾಬಾದ್ ನಲ್ಲಿ ಬ್ಯಾಂಕ್ ಗಳು ಮುಚ್ಚಲ್ಪಡುತ್ತವೆ.


ಆಗಸ್ಟ್ 28 - ತಿಂಗಳ ನಾಲ್ಕನೇ ಶನಿವಾರ
ಆಗಸ್ಟ್ 29 - ಭಾನುವಾರ
ಆಗಸ್ಟ್ 30 - ಜನ್ಮಾಷ್ಟಮಿ/ಕೃಷ್ಣ ಜಯಂತಿ - ಅಹಮದಾಬಾದ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್‌ಟಾಕ್, ಜೈಪುರ, ಜಮ್ಮು, ಕಾನ್ಪುರ, ಲಕ್ನೋ, ಪಾಟ್ನಾ, ರಾಯ್‌ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ ಮತ್ತು ಶ್ರೀನಗರಗಳಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗಿದೆ
ಆಗಸ್ಟ್ 31 - ಶ್ರೀ ಕೃಷ್ಣ ಅಷ್ಟಮಿ - ಹೈದರಾಬಾದ್ ನಲ್ಲಿ ಬ್ಯಾಂಕ್ ಮುಚ್ಚಲಾಗಿದೆ


ಈ ರಜಾದಿನಗಳಲ್ಲಿ ಬ್ಯಾಂಕುಗಳ ಶಾಖೆಗಳನ್ನು ಮುಚ್ಚಿದ್ದರೂ ಸಹ, ನೀವು ಹೆಚ್ಚಿನ ಕೆಲಸವನ್ನು ಆನ್‌ಲೈನ್ ಬ್ಯಾಂಕಿಂಗ್ ಮೂಲಕ ನಿಭಾಯಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ