Petrol-Diesel Price: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬಗ್ಗೆ ಕೇಂದ್ರ ಸರ್ಕಾರವು ಗಂಭೀರವಾಗಿದೆ. ಉತ್ಪನ್ನಗಳ ಬೆಲೆಗಳ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಾಜ್ಯಗಳು ಬಯಸಿದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಬಹುದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ತಿಳಿಸಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ (Petroleum Products) ಬೆಲೆ ಏರಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ನಾವು ಈ ಬಗ್ಗೆ ಸೂಕ್ಷ್ಮವಾಗಿ ಯೋಚಿಸುತ್ತಿದ್ದೇವೆ ಮತ್ತು 10 ಶೇಕಡಾ ಮಿಶ್ರಣವನ್ನು ಬದಲಾಯಿಸುವಂತಹ ಸಂಭವನೀಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ಅದನ್ನು 20 ಪ್ರತಿಶತಕ್ಕೆ ಹೆಚ್ಚಿಸಲಿದ್ದೇವೆ ಎಂದು ತಿಳಿಸಿದರು.
If state governments want, they can lower prices of petrol and diesel, as a state did so recently, says Union Petroleum and Natural Gas Minister Hardeep Singh Puri
— Press Trust of India (@PTI_News) August 18, 2021
ಇದನ್ನೂ ಓದಿ- Petrol-Diesel ಮೇಲಿನ TAX ಕಡಿಮೆಯಾಗಲ್ಲ, ವಿತ್ತ ಸಚಿವರು ಹೇಳಿದ್ದೇನು?
ಪೆಟ್ರೋಲ್ ಡೀಸೆಲ್ ದರಗಳನ್ನು (Petrol-Diesel Price) ಕಡಿಮೆ ಮಾಡುವ ನಿಟ್ಟಿನಲ್ಲಿ ನಾವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ ಸಚಿವರು, ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ವಿಧಿಸಿದರೆ, ರಾಜ್ಯಗಳು ಅವುಗಳ ಮೇಲೆ ವ್ಯಾಟ್ (VAT) ವಿಧಿಸುತ್ತವೆ ಎಂದರು.
32 ದಿನಗಳ ನಂತರ ಡೀಸೆಲ್ ಅಗ್ಗವಾಯಿತು:
ತೈಲ ಮಾರುಕಟ್ಟೆ ಕಂಪನಿಗಳು 32 ದಿನಗಳ ನಂತರ ಬುಧವಾರ ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಚಿಲ್ಲರೆ ಬೆಲೆಯನ್ನು 20 ಪೈಸೆ ಇಳಿಕೆ ಮಾಡಿವೆ. ಆದರೆ, ಪೆಟ್ರೋಲ್ ಗ್ರಾಹಕರಿಗೆ ಯಾವುದೇ ಪರಿಹಾರವಿಲ್ಲ. ತೈಲ ಕಂಪನಿಗಳು ಸತತ 32 ನೇ ದಿನವೂ ಪೆಟ್ರೋಲ್ ಬೆಲೆಯನ್ನು ಬದಲಿಸಿಲ್ಲ.
ಇದನ್ನೂ ಓದಿ- Petrol price : ತಮಿಳುನಾಡಿನಲ್ಲಿ ಪೆಟ್ರೋಲ್ ಬೆಲೆ ₹3 ಇಳಿಕೆ : ರಾಜ್ಯದಲ್ಲಿ ಇಂಧನ ಬೆಲೆ ಇಳಿಕೆ ಆಗುತ್ತಾ?
ಬೆಲೆಯಲ್ಲಿ ಇಳಿಕೆಯಾದ ನಂತರ, ಈಗ ದೆಹಲಿಯಲ್ಲಿ ಡೀಸೆಲ್ ಬೆಲೆ 89.67 ರೂ. ದೇಶಾದ್ಯಂತ ಡೀಸೆಲ್ ಬೆಲೆ ಪ್ರತಿ ಲೀಟರಿಗೆ 20-25 ಪೈಸೆಗಳ ನಡುವೆ ಇಳಿಕೆಯಾಗಿದ್ದು, ಕಳೆದ ಒಂದು ತಿಂಗಳಿನಿಂದ ಪೆಟ್ರೋಲ್ ಒಂದೇ ಮಟ್ಟದಲ್ಲಿ ಉಳಿದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ