Salary Hike: ಈ ಬಾರಿಯ ಹೋಳಿ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರಿ (Modi Government) ನೌಕರರ ಮೇಲೆ ಹಣದ ಸುರಿಮಳೆಯಾಗಿದೆ. ತುಟ್ಟಿಭತ್ಯೆ (DA Hike) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಇನ್ಮುಂದೆ ಸರ್ಕಾರಿ ನೌಕರರು ಶೇ. 50 ರಷ್ಟು ತುಟ್ಟಿ ಭತ್ಯೆ ಪಡೆಯಲಿದ್ದಾರೆ. ಈ ತುಟ್ಟಿಭತ್ಯೆ ಜನವರಿ 1, 2024 ರಿಂದ ಅನ್ವಯಿಸಲಿದೆ. ಮಾರ್ಚ್ ನಲ್ಲಿ ಘೋಷಣೆಯಾಗಿದ್ದರೂ ಕೂಡ ಏಪ್ರಿಲ್ ವರೆಗೆ ಹಣ ಪಾವತಿಗಾಗಿ ನೌಕರರು ಕಾಯಬೇಕಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ನೌಕರರ(Central Goverument Employees) ಖಾತೆಗೆ ಮೂರು ತಿಂಗಳ ಡಿಎ ಹಣ ಬಾಕಿ ರೂಪದಲ್ಲಿ ಬರಲಿದೆ. ಅವರು ತಮ್ಮ ಏಪ್ರಿಲ್ ವೇತನದಲ್ಲಿ ಜನವರಿಯಿಂದ ಮಾರ್ಚ್ 2024 ರವರೆಗಿನ ಬಾಕಿಯನ್ನು ಹಣವನ್ನು ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಬಾಕಿ ಎಷ್ಟು? ಅದರ ಸಂಪೂರ್ಣ ಲೆಕ್ಕಾಚಾರ ತಿಳಿದುಕೊಳ್ಳೋಣ ಬನ್ನಿ,  (Business News In Kannada)


COMMERCIAL BREAK
SCROLL TO CONTINUE READING

ನೌಕರರು, ಪಿಂಚಣಿದಾರರಿಗೆ ಡಿಎ ಬಾಕಿಯ (DA Arrears) ಲಾಭ ಸಿಗಲಿದೆ
ಕೇಂದ್ರ ನೌಕರರ ತುಟ್ಟಿಭತ್ಯೆ (DA)ಯನ್ನು ಏಪ್ರಿಲ್‌ನಲ್ಲಿ ಅವರ ಖಾತೆಗೆ ಬರಲಿದೆ. ಇದು ಜನವರಿ 1 ರಿಂದ ಅನ್ವಯವಾಗುವುದರಿಂದ, ಎಲ್ಲಾ ಕೇಂದ್ರ ನೌಕರರು ಮತ್ತು ಪಿಂಚಣಿದಾರರು 3 ತಿಂಗಳ ಬಾಕಿಯನ್ನು ಪಡೆಯುತ್ತಾರೆ. ಹೊಸ ವೇತನ ಶ್ರೇಣಿಯಲ್ಲಿ, ತುಟ್ಟಿಭತ್ಯೆಯನ್ನು (DA Calculation) ಪೇ ಬ್ಯಾಂಡ್‌ಗೆ ಅನುಗುಣವಾಗಿ ಲೆಕ್ಕಹಾಕಲಾಗುತ್ತದೆ. ಲೆವೆಲ್-1ರಲ್ಲಿ ನೌಕರರ ಗ್ರೇಡ್ ಪೇ 1800 ರೂ.ಗಳಾಗಿದ್ದಾರೆ, ಮೂಲ ವೇತನ 18000 ರೂ. ಗಳಾಗಿರುತ್ತದೆ. ಇದಲ್ಲದೆ, ಪ್ರಯಾಣ ಭತ್ಯೆ (TPTA) ಸಹ ಇದಕ್ಕೆ ಸೇರಿಸಲಾಗುತ್ತದೆ. ಇದಾದ ನಂತರವೇ ಹಣಕಾಸಿನ ಬಾಕಿಯನ್ನು ನಿರ್ಧರಿಸಲಾಗುತ್ತದೆ.


ಡಿಎ ಅರಿಯರ್ ಲೆಕ್ಕಾಚಾರವನ್ನು ಅರ್ಥಮಾಡಿಕೊಳ್ಳಿ
ಹಂತ-1 ರಲ್ಲಿ ಕನಿಷ್ಠ ವೇತನ 18,000 ರೂ.ಗಳ ಲೆಕ್ಕಾಚಾರ

ಲೆವೆಲ್-1 ಗ್ರೇಡ್ ಪೇ-1800ರಲ್ಲಿ (Pay Band) ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ 18,000 ರೂ.ಗಳಾಗಿದೆ.  ಈ ನೌಕರರ ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ ಒಟ್ಟು ಡಿಎಯಲ್ಲಿ 774 ರೂಪಾಯಿ ವ್ಯತ್ಯಾಸವನ್ನು ಕಾಣಬಹುದು. ಉಳಿತಂತೆ ಬಾಕಿಯ ಲೆಕ್ಕಾಚಾರ ಈ ಕೆಳಗಿನಂತೆ ಇರಲಿದೆ.


Due & Arrears (DA 50%)

MONTH

DA

TA

DA ON TA

TOTAL

Jan-24

9000

1350

675

11025

Feb-24

9000

1350

675

11025

Mar-24

9000

1350

675

11025

Arrears

 

 

 

2322

Apr-24

9000

1350

675

11025


ಹಂತ-1 ರಲ್ಲಿ 56900 ರೂ.ಗಳ ಗರಿಷ್ಠ ಮೂಲ ವೇತನದ ಲೆಕ್ಕಾಚಾರ
ಲೆವೆಲ್-1 ಗ್ರೇಡ್ ಪೇ-1800 ರಲ್ಲಿ ಕೇಂದ್ರ ಸರ್ಕಾರಿ ನೌಕರರ ಗರಿಷ್ಠ ಮೂಲ ವೇತನ 56,900 ರೂ. ಗಳಾಗಿದೆ.  ಈ ನೌಕರರ ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ ಒಟ್ಟು ಡಿಎಯಲ್ಲಿ 2276 ರೂಪಾಯಿ ವ್ಯತ್ತ್ಯಾಸ ಕಾಣಬಹುದು. ಬಾಕಿಯ ಲೆಕ್ಕಾಚಾರ ಈ ಕೆಳಗಿನಂತಿರಲಿದೆ. 


ಇದನ್ನೂ ಓದಿ-7th Pay Commission: ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಬಳಿಕ ಇದೀಗ ಸರ್ಕಾರಿ ನೌಕರರ ಗ್ರ್ಯಾಚ್ಯುಟಿಗೆ ಸಂಬಂಧಿಸಿದಂತೆ ಬಿಗ್ ನ್ಯೂಸ್!


Due & Arrears (DA 50%)

MONTH

DA

TA

DA ON TA

TOTAL

Jan-24

28450

3600

1800

33850

Feb-24

28450

3600

1800

33850

Mar-24

28450

3600

1800

33850

Arrears

 

 

 

7260

Apr-24

28450

3600

1800

33850


56,100 ರ ಹಂತ 10 ರಲ್ಲಿ ಕನಿಷ್ಠ ವೇತನದ ಲೆಕ್ಕಾಚಾರ ಇಂತಿದೆ 
ಹಂತ-10 ರಲ್ಲಿ ಕೇಂದ್ರ ನೌಕರರ ದರ್ಜೆಯ ವೇತನ 5400 ರೂ.ಗಳಾಗಿದೆ.  ಈ ಕೇಂದ್ರ ಸರ್ಕಾರಿ ನೌಕರರ  ನೌಕರರ ಕನಿಷ್ಠ ಮೂಲ ವೇತನ 56,100 ರೂ. ಗಳಾಗಿದೆ ಈ ನೌಕರರ ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ ಒಟ್ಟು ಡಿಎಯಲ್ಲಿ 2244 ರೂಪಾಯಿ ವ್ಯತ್ಯಾಸ ಕಾಣಬಹುದು. ಬಾಕಿಯ ಲೆಕ್ಕಾಚಾರ ಈ ಕೆಳಗಿನಂತಿದೆ


ಇದನ್ನೂ ಓದಿ-HRA Hike: ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಸರ್ಕಾರಿ ನೌಕರರ ಈ ಈ ಭತ್ಯೆಯಲ್ಲಿಯೂ ಶೇ. 3 ರಷ್ಟು ಹೆಚ್ಚಳ!


Due & Arrears (DA 50%)

MONTH

DA

TA

DA ON TA

TOTAL

Jan-24

28050

7200

3600

38850

Feb-24

28050

7200

3600

38850

Mar-24

28050

7200

3600

38850

Arrears

 

 

 

7596

Apr-24

28050

7200

3600

38850


ವೇತನವನ್ನು ಪೇ ಬ್ಯಾಂಡ್ ಮೂಲಕ ನಿರ್ಧರಿಸಲಾಗುತ್ತದೆ
7 ನೇ ವೇತನ ಆಯೋಗದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಹಂತ 1 ರಿಂದ ಹಂತ 18 ರವರೆಗೆ ವಿವಿಧ ದರ್ಜೆಗಳಲ್ಲಿ ವಿಂಗಡಿಸಲಾಗಿದೆ. ಇದರಲ್ಲಿ, ತುಟ್ಟಿಭತ್ಯೆಯನ್ನು ಗ್ರೇಡ್ ಪೇ ಮತ್ತು ಪ್ರಯಾಣ ಭತ್ಯೆಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಹಂತ 1 ರಲ್ಲಿ, ಕನಿಷ್ಠ ವೇತನವು ರೂ 18,000 ರಿಂದ ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ ವೇತನವು ರೂ 56,900 ಆಗಿದೆ. ಅಂತೆಯೇ, ಹಂತ 2 ರಿಂದ 14 ರವರೆಗಿನ ದರ್ಜೆಯ ವೇತನದ ಪ್ರಕಾರ ವೇತನವು ಬದಲಾಗುತ್ತದೆ. ಆದರೆ, ಹಂತ-15, 17, 18ರಲ್ಲಿ ಗ್ರೇಡ್ ಪೇ ಇಲ್ಲ. ಇಲ್ಲಿ ಸಂಬಳವನ್ನು ನಿಗದಿಪಡಿಸಲಾಗಿದೆ. ಹಂತ-15 ರಲ್ಲಿ, ಕನಿಷ್ಠ ಮೂಲ ವೇತನವು ರೂ 182,200 ಆಗಿದ್ದರೆ, ಗರಿಷ್ಠ ವೇತನವು ರೂ 2,24,100 ಆಗಿದೆ. ಹಂತ-17 ರಲ್ಲಿ ಮೂಲ ವೇತನವನ್ನು 2,25,000 ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದೆ ವೇಳೆ, ಹಂತ-18 ರಲ್ಲಿಯೂ ಸಹ ಮೂಲ ವೇತನವನ್ನು 2,50,000 ರೂ. ಗಳಾಗಿದೆ. ಕ್ಯಾಬಿನೆಟ್ ಕಾರ್ಯದರ್ಶಿಯ ವೇತನವು ಹಂತ 18 ರಲ್ಲಿ ಬರುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ