HRA Hike: ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಸರ್ಕಾರಿ ನೌಕರರ ಈ ಈ ಭತ್ಯೆಯಲ್ಲಿಯೂ ಶೇ. 3 ರಷ್ಟು ಹೆಚ್ಚಳ!

HRA Hike: ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗುರುವಾರ ಕೇಂದ್ರ ಸರ್ಕಾರಿ ನೌಕರರಿಗೆ ಒಂದರ ಮೇಲೊಂದರಂತೆ ಗುಡ್ ನ್ಯೂಸ್ ನೀಡಿದೆ. ಹೌದು ತುಟ್ಟಿಭತ್ಯೆ ಹೆಚ್ಚಳದ ಬಳಿಕ ಸರ್ಕಾರ ಮನೆ ಬಾಡಿಗೆ ಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳವನ್ನು ಘೋಷಿಸಿದೆ. (Business News In Kananda)  

Written by - Nitin Tabib | Last Updated : Mar 7, 2024, 10:05 PM IST
  • ತುಟ್ಟಿಭತ್ಯೆ (DA Hike) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.
  • 4ರಷ್ಟು ಡಿಎ ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈಗ ನೌಕರರು 50 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆಯುತ್ತಾರೆ.
  • ಈ ತುಟ್ಟಿಭತ್ಯೆ ಜನವರಿ 1, 2024 ರಿಂದ ಅನ್ವಯವಾಗುತ್ತದೆ. ಮಾರ್ಚ್ ಅಂತ್ಯದ ವೇಳೆಗೆ ಸಂಬಳದ ಜೊತೆಗೆ ಜಮಾ ಮಾಡಲಾಗುತ್ತದೆ.
  • ಇದಕ್ಕೆ ಒಟ್ಟು ಎರಡು ತಿಂಗಳ ಬಾಕಿಯೂ ಸೇರಲಿದೆ. ಇದು ಸತತ ನಾಲ್ಕನೇ ಬಾರಿ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆಯಾಗಿದೆ.
HRA Hike: ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಸರ್ಕಾರಿ ನೌಕರರ ಈ ಈ ಭತ್ಯೆಯಲ್ಲಿಯೂ ಶೇ. 3 ರಷ್ಟು ಹೆಚ್ಚಳ! title=

HRA Hike: ಲೋಕಸಭೆ ಚುನಾವಣೆ 2024 (Lok Sabha Elections 2024) ಕ್ಕೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಹೌದು ಹೋಳಿ ಹಬ್ಬಕ್ಕೆ ಕೆಲವೇ ದಿನ ಬಾಕಿ ಇರುವಾಗ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ನೌಕರರ (Central Government Employees,) ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳವನ್ನು ಸಚಿವ ಸಂಪುಟ ಘೋಷಿಸಿದೆ. ಇದರ ಜೊತೆಗೆ ಅವರ ಮನೆ ಬಾಡಿಗೆ ಭತ್ಯೆಯನ್ನೂ  ಶೇಕಡಾ 3 ರಷ್ಟು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಇದರಿಂದ ಎಕ್ಸ್ ಶ್ರೇಣಿಯ ನಗರಗಳಲ್ಲಿ ವಾಸಿಸುವ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ  ಶೇ. 27 ರಿಂದ ಶೇ. 30ಕ್ಕೆ ಏರಿಕೆಯದಂತಾಗಿದೆ. ಮನೆ ಬಾಡಿಗೆ ಭತ್ಯೆಯಲ್ಲಿನ ಈ ಹೆಚ್ಚಳದಿಂದ ಸರ್ಕಾರದ ಮೇಲೆ 9 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಹೊರೆ ಬೀಳಲಿದೆ.  

ಯಾವ ನಗರಕ್ಕೆ ಎಷ್ಟು ಮನೆ ಬಾಡಿಗೆ ಭತ್ಯೆ ಸಿಗುತ್ತದೆ
1. X ವರ್ಗದಲ್ಲಿ- ದೆಹಲಿ, ಅಹಮದಾಬಾದ್, ಬೆಂಗಳೂರು, ಮುಂಬೈ, ಪುಣೆ, ಚೆನ್ನೈ ಮತ್ತು ಕೋಲ್ಕತ್ತಾವನ್ನು ಇರಿಸಲಾಗಿದೆ. ಇಲ್ಲಿ ಕೆಲಸ ಮಾಡುವ ನೌಕರರು ಮೂಲ ವೇತನದ ಶೇ 27ರಷ್ಟು ಎಚ್‌ಆರ್‌ಎ ಪಡೆಯುತ್ತಾರೆ. 3 ರಷ್ಟು ಹೆಚ್ಚಳದ ಬಳಿಕ ಅದು ಶೇ. 30 ರಷ್ಟು ಆಗಲಿದೆ. 

2. Y ವರ್ಗದಲ್ಲಿ-  ಪಾಟ್ನಾ, ಲಕ್ನೋ, ವಿಶಾಖಪಟ್ಟಣಂ, ಗುಂಟೂರು, ವಿಜಯವಾಡ, ಗುವಾಹಟಿ, ಚಂಡೀಗಢ, ರಾಯ್‌ಪುರ, ರಾಜ್‌ಕೋಟ್, ಜಾಮ್‌ನಗರ, ವಡೋದರಾ, ಸೂರತ್, ಫರಿದಾಬಾದ್, ಘಾಜಿಯಾಬಾದ್, ಗುರ್ಗಾಂವ್, ನೋಯ್ಡಾ, ರಾಂಚಿ, ಜಮ್ಮು, ಶ್ರೀನಗರ, ಗ್ವಾಲಿಯರ್, ಇಂದೋರ್, ಭೋಪಾಲ್, ಜಬಲ್‌ಪುರ, ಕೊಲ್ಹಾಪುರ, ಉಜ್ಜೈನ್ ಔರಂಗಾಬಾದ್, ನಾಗ್ಪುರ್, ಸಾಂಗ್ಲಿ, ಸೋಲಾಪುರ್, ನಾಸಿಕ್, ನಾಂದೇಡ್, ಭಿವಾಡಿ, ಅಮರಾವತಿ, ಕಟಕ್, ಭುವನೇಶ್ವರ್, ರೂರ್ಕೆಲಾ, ಅಮೃತಸರ, ಜಲಂಧರ್, ಲುಧಿಯಾನ, ಬಿಕಾನೇರ್, ಜೈಪುರ, ಜೋಧ್‌ಪುರ, ಕೋಟಾ, ಅಜ್ಮೀರ್, ಮೊರಾದಾಬಾದ್, ಮೀರತ್, ಬರೇಲಿ, ಅಲಿಘರ್, ಅಲಿಘರ್ ಕಾನ್ಪುರ, ಅಲಹಾಬಾದ್, ಗೋರಖ್‌ಪುರ, ಫಿರೋಜಾಬಾದ್, ಝಾನ್ಸಿ, ವಾರಣಾಸಿ, ಸಹರಾನ್‌ಪುರ ಮುಂತಾದ ನಗರಗಳು ಬರುತ್ತವೆ. ಅಲ್ಲಿ ವಾಸಿಸುವ ನೌಕರರು ಮೂಲ ವೇತನದ ಶೇ. 18 ರಷ್ಟು ಎಚ್‌ಆರ್‌ಎ (HRA Hike) ಪಡೆಯುತ್ತಾರೆ. 2 ರಷ್ಟು ಹೆಚ್ಚಳದ ಬಳಿಕ ನಂತರ ಅದು ಶೇ. 20 ಕ್ಕೆ ತಲುಪಿದೆ. 

3. Z ವರ್ಗದಲ್ಲಿ- X ಮತ್ತು Y ವರ್ಗದ ನಗರಗಳನ್ನು ಹೊರತುಪಡಿಸಿ, ಇತರ ಎಲ್ಲಾ ನಗರಗಳನ್ನು Z ವರ್ಗದಲ್ಲಿ ಇರಿಸಲಾಗಿದೆ. ಈ ನಗರಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮೂಲ ವೇತನದ ಶೇಕಡಾ 9 ರಷ್ಟು ಮನೆ ಬಾಡಿಗೆ ಭತ್ಯೆ ಪಡೆಯುತ್ತಾರೆ. 1 ರಷ್ಟು ಹೆಚ್ಚಳದ ಬಳಿಕ ಅದು ಶೇ. 10ಕ್ಕೆ ತಲುಪಿದೆ.

ಇದನ್ನೂ ಓದಿ-International Women's Day 2024: ದೇಶಾದ್ಯಂತದ 10 ಕೋಟಿ ಮಹಿಳೆಯರಿಗೆ ಮೋದಿ ಸರ್ಕಾರದ ಭರ್ಜರಿ ಉಡುಗೊರೆ!

ನೌಕರರ ಮನೆ ಬಾಡಿಗೆ ಭತ್ಯೆ ಹೇಗೆ ಹೆಚ್ಚಾಗುತ್ತದೆ?
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮನೆ ಬಾಡಿಗೆ ಭತ್ಯೆ ಪರಿಷ್ಕರಣೆಯನ್ನು ಘೋಷಿಸಲಾಗಿದೆ  ತುಟ್ಟಿಭತ್ಯೆ (Dearness Allowance Hike) ಶೇಕಡಾ 50 ಕ್ಕೆ ಹೆಚ್ಚಾದ ಬಳಿಕ,  ಪ್ರಸ್ತುತ ಮನೆ ಬಾಡಿಗೆ ದರ ಶೇ. 27 ರಿಂದ ಶೇ. 30ಕ್ಕೆ ಏರಿಕೆಯಾಗಿದೆ. ಇದು X ವರ್ಗದಲ್ಲಿ ಬೀಳುವ ಉದ್ಯೋಗಿಗಳಿಗೆ ಮಾತ್ರ ಇರಲಿದೆ. ಎರಡನೇ ವರ್ಗದಲ್ಲಿ ಅಂದರೆ Y, ಪರಿಷ್ಕರಣೆ ಶೇ. 2 ಮತ್ತು Z ವರ್ಗದಲ್ಲಿ ಶೇ. 1 ರಷ್ಟು ಇರುತ್ತದೆ. 

ಇದನ್ನೂ ಓದಿ-Salary Hike: ಬಂದೇ ಬಿಟ್ತು ಗುಡ್ ನ್ಯೂಸ್, ಸರ್ಕಾರಿ ನೌಕರ ತುಟ್ಟಿಭತ್ಯೆಯಲ್ಲಿ ಶೇ. 4 ರಷ್ಟು ಹೆಚ್ಚಳ

ಡಿಎ ಕೂಡ ಹೆಚ್ಚಿದೆ
ತುಟ್ಟಿಭತ್ಯೆ (DA Hike) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. 4ರಷ್ಟು ಡಿಎ ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈಗ ನೌಕರರು 50 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆಯುತ್ತಾರೆ. ಈ ತುಟ್ಟಿಭತ್ಯೆ ಜನವರಿ 1, 2024 ರಿಂದ ಅನ್ವಯವಾಗುತ್ತದೆ. ಮಾರ್ಚ್ ಅಂತ್ಯದ ವೇಳೆಗೆ ಸಂಬಳದ ಜೊತೆಗೆ ಜಮಾ ಮಾಡಲಾಗುತ್ತದೆ. ಇದಕ್ಕೆ ಒಟ್ಟು ಎರಡು ತಿಂಗಳ ಬಾಕಿಯೂ ಸೇರಲಿದೆ. ಇದು ಸತತ ನಾಲ್ಕನೇ ಬಾರಿ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆಯಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News