Salary Hike News : ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಆದಷ್ಟು ಬೇಗ ಎರಡು ದೊಡ್ಡ ಉಡುಗೊರೆ ನೀಡಲು ಮೋದಿ ಸರ್ಕಾರ ಸಜ್ಜಾಗಿದೆ. ಈ ಬಾರಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (ಡಿಎ) ಸರ್ಕಾರ ಸಾಮಾನ್ಯ ಸಮಯಕ್ಕಿಂತ ಮುಂಚಿತವಾಗಿ ಹೆಚ್ಚಿಸಬಹುದು ಎಂದು ಹೇಳಲಾಗಿದೆ. ಇದಲ್ಲದೇ ಉದ್ಯೋಗಿಗಳ ಫಿಟ್ ಮೆಂಟ್ ಅಂಶದಲ್ಲೂ ಭಾರೀ ಏರಿಕೆಯಾಗಬಹುದು ಎನ್ನಲಾಗಿದೆ. ಈ ಮಧ್ಯೆ, ಅನೇಕ ರಾಜ್ಯ ಸರ್ಕಾರಗಳು ತಮ್ಮ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸುತ್ತಿವೆ.


COMMERCIAL BREAK
SCROLL TO CONTINUE READING

2024 ರ ಹೊಸ ವರ್ಷಕ್ಕೆ ಮುಂಚಿತವಾಗಿ, ಪಂಜಾಬ್ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ನೀಡಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳವನ್ನು ಘೋಷಿಸಿದ್ದಾರೆ. ಇದಾದ ನಂತರ ಸರ್ಕಾರಿ ನೌಕರರ ವೇತನದಲ್ಲಿ ಭಾರೀ  ಏರಿಕೆಯಾಗಲಿದೆ. ಈ ಹೆಚ್ಚಳ ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ.


ಇದನ್ನೂ ಓದಿ : ಡಿಸೆಂಬರ್ 31 ಸಮೀಪಿಸುತ್ತಿದೆ, ಇಂದೇ ಈ ಐದು ಕೆಲಸಗಳನ್ನು ಪೂರ್ಣಗೊಳಿಸಿ... ಇಲ್ದಿದ್ರೆ..!


7 ನೇ ವೇತನ ಆಯೋಗದ ಅಡಿಯಲ್ಲಿ 4% ತುಟ್ಟಿಭತ್ಯೆ ಹೆಚ್ಚಳ :
7 ನೇ ವೇತನ ಆಯೋಗದ ಅಡಿಯಲ್ಲಿ ಡಿಎ ಹೆಚ್ಚಳದ ನಂತರ, ಒಟ್ಟು ಭತ್ಯೆಯು ಶೇಕಡಾ 38 ಕ್ಕೆ ಹೆಚ್ಚಾಗುತ್ತದೆ ಎಂದು ರಾಜ್ಯ ಸಚಿವ ಸೇವಾ ಒಕ್ಕೂಟದ (ಪಿಎಸ್‌ಎಂಎಸ್‌ಯು) ಅಧ್ಯಕ್ಷ ಅಮ್ರಿಕ್ ಸಿಂಗ್ ಹೇಳಿದ್ದಾರೆ. ಪಿಎಸ್‌ಎಂಎಸ್‌ಯು ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.


ನೌಕರರಿಗೆ ಮುಖ್ಯಮಂತ್ರಿ ಭಗವಂತ ಮಾನ್ ಹೊಸ ವರ್ಷದ ಉಡುಗೊರೆ : 
ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ 'X' ನಲ್ಲಿ, " ಪಂಜಾಬ್ ರಾಜ್ಯ ಸಚಿವಾಲಯದ ಅಲೈಡ್ ಸರ್ವಿಸಸ್ ಅಸೋಸಿಯೇಶನ್‌ನ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದು, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರವಾಗಿ ಚರ್ಚಿಸಿದ್ದೇವೆ. ಹೊಸ ವರ್ಷದ ಉಡುಗೊರೆಯಾಗಿ  ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಲು ಸಂತೋಷಪಡುತ್ತೇವೆ ಎಂದು ಹೇಳಿದ್ದಾರೆ.  ಉದ್ಯೋಗಿಗಳ ಡಿಎಯನ್ನು ಶೇಕಡಾ ನಾಲ್ಕು ರಷ್ಟು ಹೆಚ್ಚಿಸಲಾಗಿದ್ದು, ಡಿಸೆಂಬರ್ 1, 2023 ರಿಂದ ಜಾರಿಗೆ ಬರಲಿದೆ ಎಂದಿದ್ದಾರೆ. 


ಇದನ್ನೂ ಓದಿ : ಹೆಚ್ಚುತ್ತಿರುವ ಕೋರೋನಾ ಆತಂಕದ ನಡುವೆ 930 ಅಂಕಗಳಷ್ಟು ಕುಸಿದ ಸೆನ್ಸೆಕ್ಸ್!


ಪಂಜಾಬ್ ಸರ್ಕಾರಿ ನೌಕರರ ಮೂರು ಪ್ರಮುಖ ಬೇಡಿಕೆಗಳು : 
ಹಳೆಯ ಪಿಂಚಣಿ ಯೋಜನೆ ಜಾರಿ, ಬಾಕಿ ಉಳಿದಿರುವ 12 ಶೇಕಡಾ ಡಿಎ ಬಿಡುಗಡೆ ಮತ್ತು ಗುತ್ತಿಗೆ ನೌಕರರನ್ನು ಕಾಯಂಗೊಳಿಸುವುದು ಸೇರಿದಂತೆ ಮೂರು ಪ್ರಮುಖ ಬೇಡಿಕೆಗಳನ್ನು ಪಂಜಾಬ್ ಸರ್ಕಾರಿ ನೌಕರರು ಸರ್ಕಾರದ ಮುಂದೆ ಇಟ್ಟಿತ್ತು. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ PSMSU ನವೆಂಬರ್ 8 ರಂದು ಪ್ರಾರಂಭವಾದ ತನ್ನ ತಿಂಗಳ ಮುಷ್ಕರವನ್ನು ಭಾನುವಾರ ಹಿಂತೆಗೆದುಕೊಂಡಿದೆ. 


ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ : 
ಕೆಲವೇ ದಿನಗಳ ಹಿಂದೆ ಸರ್ಕಾರವು ಜುಲೈ 2023 ಕ್ಕೆ ಡಿಎ ಹೆಚ್ಚಳವನ್ನು ಘೋಷಿಸಿತು. ಇದು ನೌಕರರ ಸಂಬಳದಲ್ಲಿ ಗಣನೀಯ ಹೆಚ್ಚಳಕ್ಕೆ ಕಾರಣವಾಯಿತು. ಈಗ ಮುಂದಿನ ಅರ್ಧ ವರ್ಷಕ್ಕೆ ಅಂದರೆ ಜನವರಿ 2024ಕ್ಕೆ ಡಿಎ ಹೆಚ್ಚಿಸುವ ವಿಚಾರವನ್ನು ಪರಿಗಣಿಸಲಾಗುತ್ತಿದೆ. ನೌಕರರು ಮತ್ತು ಪಿಂಚಣಿದಾರರಿಗೆ ಇದರಿಂದ ಲಾಭವಾಗಲಿದೆ. ತುಟ್ಟಿಭತ್ಯೆ ಹೆಚ್ಚಿಸುವ ಬಗ್ಗೆ ಸರ್ಕಾರ ಅಧಿಕೃತವಾಗಿ ಇನ್ನೂ ಏನನ್ನೂ ಹೇಳಿಲ್ಲ. ಆದರೆ, 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಪರಿಗಣಿಸಿ ಸರ್ಕಾರ ಈ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ