Uber: ಉಬರ್ ತನ್ನ ಗ್ರಾಹಕರಿಗಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ್ದು ಇದಕ್ಕೆ ಉಬರ್ 'ರೌಂಡ್ ಟ್ರಿಪ್' ಎಂದು ಹೆಸರಿಸಿದೆ. ಉಬರ್ 'ರೌಂಡ್ ಟ್ರಿಪ್' ವೈಶಿಷ್ಟ್ಯವನ್ನು ಬಳಸಿಕೊಂಡು ಗ್ರಾಹಕರು ಈಗ 5 ದಿನಗಳವರೆಗೆ ಒಟ್ಟಿಗೆ ಕ್ಯಾಬ್ ಬುಕ್ ಮಾಡಲು ಸಾಧ್ಯವಾಗುತ್ತದೆ. ಅರ್ಥಾತ್, ನೀವು ಒಂದು ನಗರದಿಂದ ಇನ್ನೊಂದು ನಗರಕ್ಕೆ ಪ್ರಯಾಣಿಸಲು ಬಯಸಿದರೆ ಇದಕ್ಕಾಗಿ ಉಬರ್ 'ರೌಂಡ್ ಟ್ರಿಪ್' ನಿಮಗೆ ಸಹಾಯಕವಾಗಲಿದೆ.
ಹೌದು, ಉಬರ್ ಇತ್ತೀಚೆಗೆ (18 ಡಿಸೆಂಬರ್ 2023) ತನ್ನ ಇತ್ತೀಚಿನ 'ರೌಂಡ್ ಟ್ರಿಪ್' ವೈಶಿಷ್ಟ್ಯವನ್ನು ಅನಾವರಣಗೊಳಿಸಿತು. ಇಂಟರ್‌ಸಿಟಿ ಪ್ರಯಾಣಕ್ಕಾಗಿ ಉಬರ್ 'ರೌಂಡ್ ಟ್ರಿಪ್' ತುಂಬಾ ಪ್ರಯೋಜನಕಾರಿ ಆಗಿದ್ದು ಇದು ಒಂದೇ ಕಾರು ಮತ್ತು ಡ್ರೈವರ್‌ನೊಂದಿಗೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಗಮನಾರ್ಹವಾಗಿ, ಗರಿಷ್ಠ 5 ದಿನಗಳವರೆಗೆ ಪ್ರಯಾಣವನ್ನು ಬುಕ್ ಮಾಡಲು ನಿಮಗೆ ಅನುಮತಿಸುತ್ತದೆ.
ಇದನ್ನೂ ಓದಿ- ಆಧಾರ್ ಕಾರ್ಡ್ ಜನನ ಪ್ರಮಾಣಪತ್ರದ ಪುರಾವೆಯಲ್ಲ: ಯುಐಡಿಎಐ ಹೊಸ ನಿಯಮ
ಉಬರ್ ರೌಂಡ್ ಟ್ರಿಪ್ ವೈಶಿಷ್ಟ್ಯವು ಪ್ರಸ್ತುತ ಎಲ್ಲ ನಗರಗಳಲ್ಲೂ ಲಭ್ಯವಾಗಲಿದ್ದು ಬಿಸಿನೆಸ್ ಮತ್ತು ವಿರಾಮ ಪ್ರಯಾಣಗಳಿಗಾಗಿ ಯೋಜಿಸುತ್ತಿರುವವರಿಗೆ ಇದು ತುಂಬಾ ಹೆಚ್ಚಿನ ನಮ್ಯತೆ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ.
ಉಬರ್ ರೌಂಡ್ ಟ್ರಿಪ್ ಅನ್ನು ಎಷ್ಟು ದಿನ ಮುಂಚಿತವಾಗಿ ಬುಕ್ ಮಾಡಬಹುದು:
ಲಭ್ಯವಿರುವ ಮಾಹಿತಿಗಳ ಪ್ರಕಾರ, ಉಬರ್ ರೌಂಡ್ ಟ್ರಿಪ್‌ಗಳನ್ನು 90 ದಿನಗಳ ಮುಂಚಿತವಾಗಿ ಬುಕ್ ಮಾಡಬಹುದು. ಮುಂಚಿತವಾಗಿ ಕ್ಯಾಬ್ ಕಾಯ್ದಿರಿಸುವುದರಿಂದ ದೂರದ ಪ್ರಯಾಣಕ್ಕಾಗಿ ಕಾರು ಮತ್ತು ಚಾಲಕನ ಖಾತರಿಯನ್ನು ಬಯಸುವ ಪ್ರಯಾಣಿಕರಿಗೆ ಇದು ಉಪಯುಕ್ತವಾಗಿದೆ. ಅಷ್ಟೇ ಅಲ್ಲ, ಇದು ಟ್ರಿಪ್ ಯೋಜನೆಯನ್ನು ಸುಗಮಗೊಳಿಸುತ್ತದೆ.
ಇದನ್ನೂ ಓದಿ- ಉಚಿತ ನೀರು ಕೊಟ್ಟು ಹಣಗಳಿಕೆ ಮಾಡುತ್ತಿದೆ ಈ ತಂಪು ಪಾನೀಯ ಕಂಪನಿ, ಪ್ರಾಫಿಟ್ ಎಲ್ಲಿಂದ ಸಿಗುತ್ತದೆ?
ಈ ಬಗ್ಗೆ ಮಾತನಾಡಿರುವ ಉಬರ್‌ನ ನ್ಯೂ ಮೊಬಿಲಿಟಿಯ ಮುಖ್ಯಸ್ಥೆ ಶ್ವೇತಾ ಮಂತ್ರಿ, ಈಗಾಗಲೇ ಅಸಂಘಟಿತ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಈ ಸೌಲಭ್ಯವು ಸಂಘಟಿತ ಪರಿಹಾರವನ್ನು ಒದಗಿಸುತ್ತದೆ. ಈ ಹೊಸ ವೈಶಿಷ್ಟ್ಯವು ದೂರದ ಪ್ರಯಾಣ ಮಾಡುವಾಗ ಹೆಚ್ಚು ನಮ್ಯತೆ ಮತ್ತು ಅನುಕೂಲವನ್ನು ಬಯಸುವ ಪ್ರಯಾಣಿಕರಿಗೆ ಉತ್ತಮ ಆಯ್ಕೆಯಾಗಿದೆ. ಮಾತ್ರವಲ್ಲ, ಪ್ರಯಾಣಿಕರು ತಮ್ಮ ಪ್ರಯಾಣದ ಉದ್ದಕ್ಕೂ ಬೆಂಗಾವಲು ಮಾಡಲು ವಿಶ್ವಾಸಾರ್ಹ ವಾಹನ ಮತ್ತು ಚಾಲಕವನ್ನು ಹೊಂದಿದ್ದಾರೆ ಎಂದು ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.