ಇದೆ ತಿಂಗಳ ಕೊನೆಯಲ್ಲಿ ಸರ್ಕಾರಿ ನೌಕರರ ವೇತನದಲ್ಲಿ 27000 ರೂ.ಗಳ ಬಂಪರ್ ಹೆಚ್ಚಳ!
Salary Hike: ಜುಲೈ 2023 ರ ಎಐಸಿಪಿಐ ಸೂಚ್ಯಂಕದ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಬಾರಿಯೂ ಸರ್ಕಾರವು ನೌಕರರ ವೇತನವನ್ನು ಶೇಕಡಾ 4 ರಷ್ಟು ಹೆಚ್ಚಿಸಲು ಹೊರಟಿದೆ ಎಂಬುದು ಸ್ಪಷ್ಟವಾಗಿದೆ.
ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಸದ್ಯದಲ್ಲೇ ಭರ್ಜರಿ ಸುದ್ದಿ ಸಿಗಲಿದೆ. ಸರ್ಕಾರ ಶೀಘ್ರವೇ ನೌಕರರ ವೇತನ ಹೆಚ್ಚಳ ಮಾಡಲಿದೆ. ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರವು ಸೆಪ್ಟೆಂಬರ್ ತಿಂಗಳಲ್ಲಿ ತುಟ್ಟಿಭತ್ಯೆ (ಡಿಎ ಹೆಚ್ಚಳ) ಹೆಚ್ಚಳವನ್ನು ಘೋಷಿಸುವ ಸಾಧ್ಯತೆ ಇದೆ. ಈ ತಿಂಗಳ ಆರಂಭದಲ್ಲಿ ಹೊಸ ಅಂಕಿಅಂಶಗಳು ಪ್ರಕಟಗೊಂಡಿದ್ದು, ಅದರ ನಂತರ ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಬಹುದು ಎಂಬ ಸುದ್ದಿ ಇದೀಗ ಮುನ್ನೆಲೆಗೆ ಬಂದಿದೆ. ಜುಲೈ 2023 ರ AICPI ಸೂಚ್ಯಂಕ ಡೇಟಾವನ್ನು ಬಿಡುಗಡೆ ಮಾಡಲಾಗಿದೆ.
ಶೇ. 4ರಷ್ಟು ಡಿಎ ಏರಿಕೆಯಾಗಲಿದೆ
ನಮ್ಮ ಪಾಲುದಾರ ವೆಬ್‌ಸೈಟ್ Zee ಬ್ಯುಸಿನೆಸ್ ಪ್ರಕಾರ, ಕೇಂದ್ರ ನೌಕರರ ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾಗಲಿದೆ. ಜನವರಿ 2023 ರಿಂದ, ಉದ್ಯೋಗಿಗಳು ಶೇಕಡಾ 42 ರ ದರದಲ್ಲಿ ಡಿಎ ಪಡೆಯುತ್ತಿದ್ದಾರೆ. ಇದೇ ವೇಳೆ, ಈ ಶೇಕಡಾ 4 ರಷ್ಟು ಹೆಚ್ಚಳದ ನಂತರ, ಉದ್ಯೋಗಿಗಳು ಪಡೆಯುವ ಡಿಎ ಶೇಕಡಾ 46 ಕ್ಕೆ ಏರಿಕೆಯಾಗಲಿದೆ.
AICPI ಸೂಚ್ಯಂಕದಿಂದ ಸಿಕ್ಕ ಮಾಹಿತಿ
ಮಾಧ್ಯಮಗಳ ವರದಿಗಳ ಪ್ರಕಾರ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೇ. AICPI ಸೂಚ್ಯಂಕದ ಪ್ರಕಾರ, ಜೂನ್ 2023 ರ ವೇಳೆಗೆ ಒಟ್ಟು ತುಟ್ಟಿ ಭತ್ಯೆ 46.24 ಶೇಕಡಾ ತಲುಪಿದೆ. ಆದರೆ, ಸರ್ಕಾರವು ದಶಮಾಂಶಗಳನ್ನು ಲೆಕ್ಕಿಸುವುದಿಲ್ಲ. ಆದ್ದರಿಂದ ಶೇ. 46 ರಷ್ಟು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಯಾವುದೇ ಅಧಿಕೃತ ಘೋಷಣೆ ಇಲ್ಲ
ಜನವರಿ 2023 ರಿಂದ ಜೂನ್ 2023 ರವರೆಗೆ ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ಪಡೆದ ಮಾಹಿತಿಯ ಪ್ರಕಾರ, ಈ ಬಾರಿಯೂ ಉದ್ಯೋಗಿಗಳ ಡಿಎಯಲ್ಲಿ ಶೇ.4 ರಷ್ಟು ಏರಿಕೆಯಾಗಲಿದೆ. ಆದರೆ, ಸರ್ಕಾರದಿಂದ ಇನ್ನೂ ಅದನ್ನು ಅಧಿಕೃತವಾಗಿ ಘೋಷಿಸಿಲ್ಲ . ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಅನುಮೋದನೆ ಸಿಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.
ಇದನ್ನೂ ಓದಿ-ಇಂದಿನಿಂದ ಮೋದಿ ಸರ್ಕಾರ ಆರಂಭಿಸಿದೆ ಈ ಅದ್ಬುತ ಯೋಜನೆ, ತಿಂಗಳಿಗೆ 10,000 ಗಳಿಕೆ ಮಾಡುವ ಸುವರ್ಣಾವಕಾಶ!
7 ನೇ ವೇತನ ಆಯೋಗದ ಪ್ರಕಾರ, ನಿಮ್ಮ ಮೂಲ ವೇತನ 18,000 ರೂ ಆಗಿದ್ದರೆ, ನಿಮ್ಮ ಮಾಸಿಕ ಮತ್ತು ವಾರ್ಷಿಕ ವೇತನದಲ್ಲಿ ಎಷ್ಟು ಹೆಚ್ಚಳವಾಗುತ್ತದೆ?
>> ಮೂಲ ವೇತನ - ತಿಂಗಳಿಗೆ 18,000 ರೂ
>> ಹೊಸ ತುಟ್ಟಿಭತ್ಯೆ - ತಿಂಗಳಿಗೆ ರೂ 8280 (ಶೇಕಡಾ 46)
>>ಪ್ರಸ್ತುತ DA - ತಿಂಗಳಿಗೆ ರೂ 7560 (ಶೇಕಡಾ 42)
>>ಎಷ್ಟು ಹೆಚ್ಚಿದೆ - 8280-7560 - ತಿಂಗಳಿಗೆ 720 ರೂ
>> ವಾರ್ಷಿಕ ವೇತನ ಹೆಚ್ಚಳ - 720X12 - ರೂ 8640
ಇದನ್ನೂ ಓದಿ-ಈ ಚಿನ್ನದಂತಹ ಬೇಸಾಯ ಆರಂಭಿಸಿ ನೀವೂ ಕೂಡ ಕೋಟ್ಯಾಧಿಪತಿಯಾಗಬಹುದು!
7 ನೇ ವೇತನ ಆಯೋಗದ ಪ್ರಕಾರ, ನಿಮ್ಮ ಮೂಲ ವೇತನ 56,900 ರೂ ಆಗಿದ್ದರೆ, ನಿಮ್ಮ ಮಾಸಿಕ ಮತ್ತು ವಾರ್ಷಿಕ ವೇತನದಲ್ಲಿ ಎಷ್ಟು ಹೆಚ್ಚಳವಾಗುತ್ತದೆ?
>> ಮೂಲ ವೇತನ - ತಿಂಗಳಿಗೆ 56,900 ರೂ
>> ಹೊಸ ತುಟ್ಟಿಭತ್ಯೆ - ತಿಂಗಳಿಗೆ ರೂ 26,174 (ಶೇ 46)
>>ಪ್ರಸ್ತುತ DA - ತಿಂಗಳಿಗೆ ರೂ 23,898 (ಶೇಕಡಾ 42)
>> ಎಷ್ಟು ಹೆಚ್ಚಾಗಿದೆ - ರೂ 26,174-23,898 - ರೂ 2276 ಪ್ರತಿ ತಿಂಗಳು
>> ವಾರ್ಷಿಕ ವೇತನ ಹೆಚ್ಚಳ - 2276X12 - 27312 ರೂ
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ