RBI New Guidelines for Credit Cards : ನಮಗೆ ಏನು ಬೇಕು ಎನ್ನುವುದನ್ನು ತಿನ್ನುವ ಹಕ್ಕು ನಮಗಿದೆ. ಅದರಂತೆ ನಾವು ತಿನ್ನಬೇಕು ಅಂದುಕೊಂಡಿರುವ ಆಹಾರವನ್ನು ನಾವು ನಮ್ಮ ಇಚ್ಚೆಯತೆ ಆಯ್ಕೆ ಮಾಡಿಕೊಳ್ಳುತ್ತೇವೆ. ನಮ್ಮ ಇಷ್ಟಕ್ಕೆ ಅನುಸಾರವಾಗಿ ಬಟ್ಟೆ ಧರಿಸುತ್ತೇವೆ. ಎಲ್ಲಿ ಬೇಕೋ ಹೋಗುತ್ತೇವೆ, ಏನು ಬೇಕೋ ಅದನ್ನು ಮಾಡುತ್ತೇವೆ. ಆದರೆ ಕ್ರೆಡಿಟ್ ಕಾರ್ಡ್ ವಿಷಯಕ್ಕೆ ಬಂದಾಗ, ಇಲ್ಲಿ ನಿಮ್ಮ ಇಷ್ಟ, ನಿಮ್ಮ ಆಸೆ ನಡೆಯುವುದಿಲ್ಲ. ಬ್ಯಾಂಕ್ ನಿಮಗೆ ಯಾವ ನೆಟ್‌ವರ್ಕ್ ಕ್ರೆಡಿಟ್ ಕಾರ್ಡ್ ನೀಡುತ್ತದೆ ಎನ್ನುವುದರ ಮೇಲೆ ನಿಮ್ಮ ಹಿಡಿತ ಇರುವುದಿಲ್ಲ. ಅಲ್ಲಿ ನಿಮ್ಮ ಇಷ್ಟ ಕಷ್ಟಗಳನ್ನು ಯಾರೂ ಕೇಳುವುದಿಲ್ಲ.ಬ್ಯಾಂಕ್ ನಿಮಗೆ ಮಾಸ್ಟರ್ ಕಾರ್ಡ್, ವೀಸಾ, ಅಮೇರಿಕನ್ ಎಕ್ಸ್‌ಪ್ರೆಸ್, ಡೈನರ್ಸ್ ಕ್ಲಬ್ ಅಥವಾ ರುಪೇ ಯಾವುದೇ ನೆಟ್‌ವರ್ಕ್‌ನಿಂದ ಕಾರ್ಡ್ ಅನ್ನು ನೀಡಬಹುದು. ಆದರೆ, ಇನ್ನು ಈ ವಿಚಾರದಲ್ಲಿ ಬ್ಯಾಂಕ್ ತನ್ನ ಮನ ಬಂದಂತೆ ನಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಆರ್ ಬಿಐ ಕ್ರೆಡಿಟ್ ಕಾರ್ಡ್ ಗಳ ನಿಯಮವನ್ನು ಬದಲಾಯಿಸಿದೆ. 


COMMERCIAL BREAK
SCROLL TO CONTINUE READING

ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ಕಟ್ಟುನಿಟ್ಟಿನ ಕ್ರಮ :  
ರಿಸರ್ವ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ನಿಯಮಗಳನ್ನು ಬದಲಾಯಿಸಿದೆ. ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಹೊಸ ನಿಯಮದ ಪ್ರಕಾರ, ಕ್ರೆಡಿಟ್ ಕಾರ್ಡ್ ನೆಟ್‌ವರ್ಕ್ ಆಯ್ಕೆ ಮಾಡುವಾಗ ಗ್ರಾಹಕರು ತಮ್ಮ ಇಚ್ಛೆಯ ಪ್ರಕಾರ ಕಾರ್ಡನ್ನು ಆಯ್ಕೆ ಮಾಡಬಹುದು. ಗ್ರಾಹಕರನ್ನು ಕೇಳಿದ ನಂತರವೇ   ಕ್ರೆಡಿಟ್ ಕಾರ್ಡ್ ಕಳುಹಿಸಲಾಗುತ್ತದೆ. ಮಾಸ್ಟರ್ ಕಾರ್ಡ್, ವೀಸಾ ಅಥವಾ ಯಾವುದೇ ಇತರ ನೆಟ್‌ವರ್ಕ್ ಬಗ್ಗೆ ನಿಮ್ಮ ಅನುಮತಿ ಪಡೆದ ನಂತರವೇ ಕ್ರೆಡಿಟ್ ಕಾರ್ಡ್ ಅನ್ನು ನಿಮಗೆ ಕಳುಹಿಸಲಾಗುತ್ತದೆ. ಆರ್‌ಬಿಐನ ಹೊಸ ನಿಯಮಗಳ ಪ್ರಕಾರ, ಗ್ರಾಹಕರು ತಮ್ಮ ನೆಟ್‌ವರ್ಕ್ ಪೂರೈಕೆದಾರರನ್ನು ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. 


ಇದನ್ನೂ ಓದಿ :  Gratuity ಸಂಬಂಧಿಸಿದಂತೆ ಮೋದಿ ಸರ್ಕಾರದ ಮಹತ್ವದ ನಿರ್ಧಾರ, ಈಗ ಇಷ್ಟು ಲಕ್ಷದವರೆಗೆ ಇರಲ್ಲ ತೆರಿಗೆ


ಯಾರ ಮೇಲೆ ಆರ್‌ಬಿಐನ ಹೊಸ ನಿಯಮ ಅನ್ವಯಿಸುವುದಿಲ್ಲ : 
ಆರ್‌ಬಿಐನ ಹೊಸ ನಿಯಮ ಮುಂದಿನ ಆರು ತಿಂಗಳಲ್ಲಿ ಜಾರಿಗೆ ಬರಲಿದೆ. ಹೊಸ ಕಾರ್ಡ್ ಹೊಂದಿರುವವರು ಮತ್ತು ತಮ್ಮ ಕಾರ್ಡ್‌ಗಳನ್ನು ನವೀಕರಿಸುವ ಗ್ರಾಹಕರು ಅವರ ಆಯ್ಕೆಯ ಪ್ರಕಾರ ಕ್ರೆಡಿಟ್ ಕಾರ್ಡ್‌ಗಳ ನೆಟ್‌ವರ್ಕ್ ಅನ್ನು ಪಡೆಯುತ್ತಾರೆ.ಆದರೆ, ಅವರು ನೀಡಿದ ಕಾರ್ಡ್‌ಗಳ ಸಂಖ್ಯೆ 10 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರುವ ಸಂಸ್ಥೆಗಳಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ. ವಿಶ್ವದ ಅತಿದೊಡ್ಡ ಕಂಪನಿ ವೀಸಾದ ವ್ಯವಹಾರವು 200 ಕ್ಕೂ ಹೆಚ್ಚು ದೇಶಗಳಲ್ಲಿ ಹಬ್ಬಿಕೊಂಡಿದೆ. ಕಂಪನಿಯ ಮಾರುಕಟ್ಟೆ ಕ್ಯಾಪ್ 489.50 ಮಿಲಿಯನ್ ಡಾಲರ್ ಆಗಿದೆ. ವೀಸಾ ನಂತರ, ಮಾಸ್ಟರ್ ಕಾರ್ಡ್ ವಿಶ್ವದ ಎರಡನೇ ಅತಿದೊಡ್ಡ ಕಂಪನಿಯಾಗಿದೆ.ಇದರ ವ್ಯವಹಾರವು 150 ದೇಶಗಳಿಗೆ ವಿಸ್ತರಿಸಿದೆ. ಕಂಪನಿಯ ಮಾರುಕಟ್ಟೆ 137 ಬಿಲಿಯನ್ ಡಾಲರ್ ಆಗಿದೆ. ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಏಪ್ರಿಲ್ 2023 ರ ವೇಳೆಗೆ ಅವರ ಸಂಖ್ಯೆ 8.6 ಕೋಟಿ ಆಗಿತ್ತು.  


ಹೊಸ ಕ್ರೆಡಿಟ್ ಕಾರ್ಡ್ ನಿಯಮದ ಪ್ರಯೋಜನವೇನು? : 
ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕಗಳು ಬದಲಾಗುತ್ತವೆ. ಕೆಲವು ಅಧಿಕ ಶುಲ್ಕ ವಿಧಿಸಿದರೆ ಇನ್ನು ಕೆಲವು ಕಡಿಮೆ ಶುಲ್ಕ ಹೇರುತ್ತದೆ. ಅನೇಕ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳ ವಾರ್ಷಿಕ ಶುಲ್ಕಗಳು ಹೆಚ್ಚಾಗಿರುತ್ತದೆ. ಇಲ್ಲಿಯವರೆಗೆ ಅದನ್ನು ಆಯ್ಕೆ ಮಾಡುವ ಹಕ್ಕನ್ನು ಗ್ರಾಹಕರಿಗೆ ನೀಡಿರಲಿಲ್ಲ. ಬ್ಯಾಂಕ್ ಕಳುಹಿಸಿದ ಕಾರ್ಡ್‌ಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ನೀವು ಒಂದಕ್ಕಿಂತ ಹೆಚ್ಚು ಕಾರ್ಡ್ ನೆಟ್‌ವರ್ಕ್ ಆಯ್ಕೆಯನ್ನು ಹೊಂದಿದ್ದರೆ, ನಿಮ್ಮ ಅಗತ್ಯತೆ, ಅದರ ಶುಲ್ಕಗಳು ಮತ್ತು ನೆಟ್‌ವರ್ಕ್‌ನಲ್ಲಿ ಲಭ್ಯವಿರುವ ಸೌಲಭ್ಯಗಳ ಆಧಾರದ ಮೇಲೆ ನೀವು ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡಬಹುದು.


ಇದನ್ನೂ ಓದಿ : 7th Pay Commission: ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಬಳಿಕ ಇದೀಗ ಸರ್ಕಾರಿ ನೌಕರರ ಗ್ರ್ಯಾಚ್ಯುಟಿಗೆ ಸಂಬಂಧಿಸಿದಂತೆ ಬಿಗ್ ನ್ಯೂಸ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ