Bengaluru Chennai Express way : ಇನ್ನು ಕೆಲವೇ ದಿನಗಳಲ್ಲಿ ಕೇಂದ್ರ ಬಜೆಟ್ 2023 ಮಂಡನೆಯಾಗಲಿದೆ. ದೇಶದ ಜನತೆ ಸಾಮಾನ್ಯ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಲ್ಲದೆ, 2024ರ ಲೋಕಸಭೆ ಚುನಾವಣೆಗೂ ಮುನ್ನ ಮಂಡನೆಯಾಗುವ ಬಜೆಟ್ ಇದಾಗಿರಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಬಹಳ ವಿಶೇಷವಾಗಿದೆ. ಆದರೆ, ಬಜೆಟ್‌ಗೂ ಮುನ್ನ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಈ ಮೂಲಕ 2024ರ ಲೋಕಸಭೆ ಚುನಾವಣೆಗೂ ಮುನ್ನವೇ  ರಾಜ್ಯದ ಜನತೆಗೆ ಉಡುಗೊರೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ : 
ಬೆಂಗಳೂರು ಮತ್ತು ಚೆನ್ನೈ ನಡುವಿನ ಅಂತರವನ್ನು ಸುಮಾರು 300 ಕಿಲೋಮೀಟರ್ ಕಡಿಮೆ ಸಮಯದಲ್ಲಿ ಕ್ರಮಿಸಲು ಸಾಧ್ಯವಾಗುತ್ತದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಮೂಲಕ ನಗರಗಳ ನಡುವಿನ ಪ್ರಯಾಣದ ಸಮಯವನ್ನು 2-3 ಗಂಟೆಗಳವರೆಗೆ ಕಡಿಮೆಯಾಗಲಿದೆ.  ಈ ಎಕ್ಸ್‌ಪ್ರೆಸ್‌ವೇ ಮುಂದಿನ ವರ್ಷಕ್ಕೆ ಸಿದ್ಧವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 


ಇದನ್ನೂ ಓದಿ :  ಈ ಬಾರಿ ಇರಲಿದೆ 7 ಆದಾಯ ತೆರಿಗೆ ಸ್ಲ್ಯಾಬ್ .! ನಿಮಗೂ ತಿಳಿದಿರಲಿ ಈ ಪ್ರಮುಖ ಮಾಹಿತಿ


ನಿತಿನ್  ಗಡ್ಕರಿಯಿಂದ ಪರಿಶೀಲನೆ :
262 ಕಿಲೋಮೀಟರ್ ನಿರ್ಮಾಣ ಹಂತದಲ್ಲಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ  ಕರ್ನಾಟಕ ಭಾಗವನ್ನು ಗಡ್ಕರಿ ಪರಿಶೀಲಿಸಿದ್ದಾರೆ. 9,000 ಕೋಟಿ ರೂ. ಯೋಜನೆಯ ಭಾಗವಾಗಿ 52-ಕಿಮೀ ಗ್ರೀನ್‌ಫೀಲ್ಡ್ ಜೋಡಣೆ ಕೂಡಾ ಆಗಿದೆ. 16,730 ಕೋಟಿ ವೆಚ್ಚದಲ್ಲಿ ಹೊಸ ಗ್ರೀನ್‌ಫೀಲ್ಡ್ ಯೋಜನೆ - ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಮಾರ್ಚ್ 2024 ರ ವೇಳೆಗೆ ಸಿದ್ಧವಾಗಲಿದೆ ಎಂದು ಗಡ್ಕರಿ ಹೇಳಿದದ್ದಾರೆ. ಫೆಬ್ರವರಿ 2023 ರ ವೇಳೆಗೆ ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆ ಕೂಡಾ ಪೂರ್ಣಗೊಳ್ಳಲಿದೆ ಎಂಬ ಮಾಹಿತಿಯನ್ನು ಗಡ್ಕರಿ ನೀಡಿದ್ದಾರೆ. 


ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ವಿಶೇಷತೆಗಳು : 
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯು ಕರ್ನಾಟಕದಲ್ಲಿ 106 ಕಿಮೀ, ಆಂಧ್ರಪ್ರದೇಶದಲ್ಲಿ 71 ಕಿಮೀ ಮತ್ತು ತಮಿಳುನಾಡಿನಲ್ಲಿ 85 ಕಿಮೀವರೆಗೆ  ಸಾಗುತ್ತದೆ. ಇದು ಬೆಂಗಳೂರಿನ ಮಾಲೂರು, ಬಂಗಾರಪೇಟೆ, ಕೆಜಿಎಫ್ ಮತ್ತು ಕರ್ನಾಟಕದ ಬೇತಮಂಗಲದಂತಹ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.  ಈ ರಸ್ತೆಯ ಮೂಲಕ ಸಂಚರಿಸಿದರೆ ಬೆಂಗಳೂರು ಮತ್ತು ಚೆನ್ನೈ ನಡುವಿನ ರಸ್ತೆ ದೂರ 262 ಕಿಮೀಯಷ್ಟು ಕಡಿಮೆಯಾಗಲಿದೆ. ಅಂದರೆ ಈ ದೂರವನ್ನು ಕ್ರಮಿಸಲು ಪ್ರಸ್ತುತ  ಆರು ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತಿದೆ. ಆದರೆ ಇನ್ನು ಮುಂದೆ ಈ ದೂರವನ್ನು ಕೇವಲ  2.5 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ.


ಇದನ್ನೂ ಓದಿ : Budget 2023: ಈ ವರ್ಷದ ಬಜೆಟ್‍ನಲ್ಲಿ ABCD ಹೇಳಲಿದ್ದಾರೆ ನಿರ್ಮಲಾ ಸೀತಾರಾಮನ್!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.