Income Tax: ಈ ಜನರು ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ, ಬಜೆಟ್ ಗೂ ಮುನ್ನವೇ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ

Income Tax Slab Change: ಆದಾಯ ತೆರಿಗೆ ಕಾಯ್ದೆಯಲ್ಲಿ ಸರ್ಕಾರ ಹೊಸ ಸ್ಲಾಬ್ ಸೇರಿಸಿದೆ. 75 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಅನುಕೂಲವಾಗುವಂತೆ, ಆದಾಯ ತೆರಿಗೆ ಕಾಯಿದೆ, 1961 ರ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಹೊಸ ಸ್ಲಾಬ್  194-P ಅನ್ನು ಸೇರಿಸಲಾಗಿದೆ. ಈ ತಿದ್ದುಪಡಿ ಬಗ್ಗೆ ಬ್ಯಾಂಕ್‌ಗಳಿಗೂ ಇದೀಗ ಮಾಹಿತಿಯನ್ನು ನೀಡಲಾಗಿದೆ.  

Written by - Nitin Tabib | Last Updated : Jan 8, 2023, 08:03 PM IST
  • 75 ವರ್ಷ ಮೇಲ್ಪಟ್ಟ ಹಿರಿಯರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.
  • ಬ್ಯಾಂಕ್‌ಗಳಿಂದ ಪಿಂಚಣಿ ಅಥವಾ ಬಡ್ಡಿ ಆದಾಯ ಇರುವವರಿಗೆ ಈ ಪರಿಹಾರ ನೀಡಲಾಗುವುದು ಎನ್ನಲಾಗಿದೆ.
  • ಇದಕ್ಕಾಗಿ ಸರ್ಕಾರವು ಆದಾಯ ತೆರಿಗೆ ಕಾಯಿದೆಯಲ್ಲಿ ಹೊಸ ಸ್ಲ್ಯಾಬ್ ಸೇರಿಸಿದೆ.
Income Tax: ಈ ಜನರು  ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ, ಬಜೆಟ್ ಗೂ ಮುನ್ನವೇ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ title=
Income Tax New Slab

Income Tax Slab: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ವರ್ಷ 2023ರ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಉದ್ಯೋಗಿಗಳಿಗೆ ತೆರಿಗೆ ವಿನಾಯಿತಿ ನೀಡುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಇದೀಗ ಎಲ್ಲರ ಗಮನ ಕೇಂದ್ರೀಕರಿಸಿದೆ. ಆದರೆ ಬಜೆಟ್‌ಗೂ ಮುನ್ನ ಹಣಕಾಸು ಸಚಿವರು ಹಿರಿಯ ನಾಗರಿಕರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಇದಕ್ಕಾಗಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಹಿರಿಯ ನಾಗರಿಕರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿರುವ ಹಣಕಾಸು ಸಚಿವಾಲಯ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.

ಟ್ವೀಟ್‌ನಲ್ಲಿ ಏನು ಹೇಳಲಾಗಿದೆ
ಟ್ವೀಟ್ ಪ್ರಕಾರ, 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು, ತಮ್ಮ ಆದಾಯದ ಮೂಲವಾಗಿ ಪಿಂಚಣಿ ಮತ್ತು ಬ್ಯಾಂಕ್ ಬಡ್ಡಿಯನ್ನು ಮಾತ್ರ ಹೊಂದಿರುತ್ತಾರೆ. ಇದರ ಹೊರತಾಗಿ ಅವರು ಆದಾಯ ತೆರಿಗೆ ಸಲ್ಲಿಸುವ ಅಗತ್ಯವಿರುವುದಿಲ್ಲ. 2023ರ ಬಜೆಟ್‌ಗೂ ಮುನ್ನ ಆದಾಯ ತೆರಿಗೆಯಲ್ಲಿನ ಪರಿಹಾರದ ಕುರಿತು ಚರ್ಚೆಗಳು ನಡೆಯುತ್ತಿವೆ. ಉದ್ಯೋಗಸ್ಥರು ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಆದರೆ ಅದಕ್ಕೂ ಮುನ್ನವೇ ಹಿರಿಯ ನಾಗರಿಕರ ಪಾಲಿಗೆ ಸಿಹಿಸುದ್ದಿ ಪ್ರಕಟವಾಗಿದೆ.

ಇದನ್ನೂ ಓದಿ-Small Loan: ಹೊಸ ವರ್ಷಾರಂಭದಲ್ಲಿಯೇ ಮೋದಿ ಸರ್ಕಾರದ ಮಹತ್ವದ ಘೋಷಣೆ, ಈ ಜನರಿಗೆ ಸಿಗಲಿದೆ 5000 ರೂ.ಧನಸಹಾಯ

ತೆರಿಗೆ ವಿನಾಯಿತಿ ಸಿಗಲಿದೆ
75 ವರ್ಷ ಮೇಲ್ಪಟ್ಟ ಹಿರಿಯರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ  ಟ್ವೀಟ್‌ನಲ್ಲಿ ತಿಳಿಸಿದೆ. ಬ್ಯಾಂಕ್‌ಗಳಿಂದ ಪಿಂಚಣಿ ಅಥವಾ ಬಡ್ಡಿ ಆದಾಯ ಇರುವವರಿಗೆ ಈ ಪರಿಹಾರ ನೀಡಲಾಗುವುದು ಎನ್ನಲಾಗಿದೆ. ಇದಕ್ಕಾಗಿ ಸರ್ಕಾರವು ಆದಾಯ ತೆರಿಗೆ ಕಾಯಿದೆಯಲ್ಲಿ ಹೊಸ ಸ್ಲ್ಯಾಬ್ ಸೇರಿಸಿದೆ. 75 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಅನುಕೂಲವಾಗುವಂತೆ, ಆದಾಯ ತೆರಿಗೆ ಕಾಯಿದೆ, 1961 ರ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಹೊಸ ವಿಭಾಗ 194-P ಅನ್ನು ಸೇರಿಸಲಾಗಿದೆ. ಈ ತಿದ್ದುಪಡಿ ಬಗ್ಗೆ ಬ್ಯಾಂಕ್‌ಗಳಿಗೂ ತಿಳಿಯಪಡಿಸಲಾಗಿದೆ.

ಇದನ್ನೂ ಓದಿ-Jan Dhan Yojana: ವಾವ್..! ಜನ್-ಧನ್ ಖಾತೆಯಲ್ಲಿ 0 ಬ್ಯಾಲೆನ್ಸ್ ಇದ್ದರೂ ಸಿಗುತ್ತೆ 10,000, ಹೇಗೆ? ಇಲ್ಲಿ ತಿಳಿದುಕೊಳ್ಳಿ

ಇದಕ್ಕೆ ಸಂಬಂಧಿಸಿದ ನಮೂನೆಗಳು ಮತ್ತು ಷರತ್ತುಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ತಿಳಿಸಿದೆ. ಇದರೊಂದಿಗೆ ತೆರಿಗೆಯ ನಿಯಮ 31, ನಿಯಮ 31A, ನಮೂನೆ 16 ಮತ್ತು 24Q ನಲ್ಲಿಯೂ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ. ಹಣಕಾಸು ಸಚಿವರು 2022ರ ಬಜೆಟ್‌ ಮಂಡನೆಯ ವೇಳೆ ಈ ಕುರಿತು ಘೋಷಿಸಿದ್ದರು. ಈಗ ಯಾವ ಬ್ಯಾಂಕ್‌ನಲ್ಲಿ ವೃದ್ಧರು ಖಾತೆ ಹೊಂದುತ್ತಾರೆಯೋ ಅದೇ ಬ್ಯಾಂಕ್ ಅವರ ಆದಾಯದ ಮೇಲೆ ತೆರಿಗೆಯನ್ನು ಕಡಿತಗೊಳಿಸುತ್ತದೆ. ತೆರಿಗೆ ರಿಟರ್ನ್‌ನಲ್ಲಿ ವಿನಾಯಿತಿಗಾಗಿ, ಹಿರಿಯ ನಾಗರಿಕರು ಫಾರ್ಮ್ 12BBA ಅನ್ನು ಭರ್ತಿ ಮಾಡಬೇಕು ಮತ್ತು ಅದನ್ನು ಬ್ಯಾಂಕ್‌ಗೆ ಸಲ್ಲಿಸಬೇಕು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News