ನವದೆಹಲಿ: ನಿಮ್ಮ ಮುಂದಿನ ಉನ್ನತ ಅಧ್ಯಯನ ಮುಂದುವರಿಸಲು ಶಿಕ್ಷಣ ಸಾಲ ತೆಗೆದುಕೊಳ್ಳುವ ಬಗ್ಗೆ ನೀವು ಯೋಚಿಸುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ. ನೀವು ಈ ಬ್ಯಾಂಕ್‌ಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಏಕೆಂದರೆ ಇಲ್ಲಿ ನೀವು ಸುಲಭವಾಗಿ 20 ಲಕ್ಷ ರೂ.ವರೆಗೆ ಸಾಲವನ್ನು ತೆಗೆದುಕೊಳ್ಳಬಹುದು. ಈ ಬ್ಯಾಂಕ್‌ಗಳು ನಿಮಗೆ ಅತ್ಯಂತ ಕಡಿಮೆ ಬಡ್ಡಿದರವನ್ನು ವಿಧಿಸುತ್ತವೆ. ಶಿಕ್ಷಣ ಸಾಲವನ್ನು ಒಟ್ಟು 7 ವರ್ಷಗಳ ಅವಧಿಗೆ ನೀಡಲಾಗುತ್ತದೆ. ಈ ಸಮಯದಲ್ಲಿ ನಿಮಗೆ ಯಾವುದೇ ರೀತಿಯ ಬಡ್ಡಿದರ ವಿಧಿಸಲಾಗುವುದಿಲ್ಲ. ನಿಮ್ಮ ಅಧ್ಯಯನ ಮುಗಿದ ನಂತರ ನೀವು ಸಾಲವನ್ನು ಮರುಪಾವತಿಸಬೇಕು. ಹಾಗಾದ್ರೆ ಶಿಕ್ಷಣಕ್ಕೆ ಸುಲಭವಾಗಿ ಸಾಲ ನೀಡುವ ಬ್ಯಾಂಕುಗಳು ಯಾವುವು ಎಂದು ತಿಳಿಯಿರಿ.       


COMMERCIAL BREAK
SCROLL TO CONTINUE READING

ಸಾಲಕ್ಕೆ ಈ ದಾಖಲೆಗಳು ಬೇಕಾಗುತ್ತವೆ


ನೀವು 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿ ಹೊಂದಿರಬೇಕು. ಇದಲ್ಲದೆ ಉತ್ತೀರ್ಣ ಪ್ರಮಾಣಪತ್ರವನ್ನು ಹೊಂದಿರುವುದು ಸಹ ಅಗತ್ಯವಾಗಿದೆ. ನೀವು ಪ್ರವೇಶ ಪಡೆದಿರುವ ಕಾಲೇಜು ಅಥವಾ ವಿಶ್ವವಿದ್ಯಾಲಯ. ಅಲ್ಲಿನ ಪ್ರವೇಶ ಪತ್ರ, ಶುಲ್ಕ ರಚನೆ ಮತ್ತು ಅರ್ಜಿದಾರರ kyc ದಾಖಲೆಗಳು ಬೇಕಾತ್ತವೆ.


ಇದನ್ನೂ ಓದಿ: Income Tax: ಈ ಜನರು ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ, ಬಜೆಟ್ ಗೂ ಮುನ್ನವೇ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ


ನೀವು ಅಗ್ಗದ ಶಿಕ್ಷಣ ಸಾಲದ ಬಗ್ಗೆ ಹುಡುಕಾಟ ನಡೆಸುತ್ತಿದ್ದರೆ, ಒಮ್ಮೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಬೇಕು. ಇಲ್ಲಿ ನೀವು 20 ಲಕ್ಷ ರೂ.ವರೆಗಿನ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.


ಪಂಜಾಬ್ ನ್ಯಾಷನಲ್ ಬ್ಯಾಂಕ್


ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಇಲ್ಲಿ ನೀವು ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಪಂಜಾಬ್ ಬ್ಯಾಂಕ್ ಶಿಕ್ಷಣ ಸಾಲಕ್ಕೆ ಶೇ.7.15 ಬಡ್ಡಿ ವಿಧಿಸುತ್ತಿದೆ. ಆದರೆ ಈ ಬಡ್ಡಿದರವು ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಈ ಬ್ಯಾಂಕಿನಿಂದ 7 ವರ್ಷಗಳವರೆಗೆ 20 ಲಕ್ಷ ರೂ. ಶಿಕ್ಷಣ ಸಾಲ ಪಡೆಯಬಹುದು.


ಇದನ್ನೂ ಓದಿ: Arecanut Today Price: ರಾಜ್ಯದ ಮಾರುಕಟ್ಟೆಯಲ್ಲಿ ಸೋಮವಾರದ ಅಡಿಕೆ ಧಾರಣೆ, ಎಲ್ಲೆಲ್ಲಿ ಎಷ್ಟೆಷ್ಟು..?


ಬ್ಯಾಂಕ್ ಆಫ್ ಬರೋಡಾ


ಬ್ಯಾಂಕ್ ಆಫ್ ಬರೋಡಾ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಕೂಡ ಆಗಿದೆ. ಈ ಬ್ಯಾಂಕಿನಲ್ಲಿಯೇ ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ವಿಲೀನಗೊಂಡಿದೆ. ಇಲ್ಲಿಂದ ನೀವು ಸುಲಭವಾಗಿ ಶಿಕ್ಷಣ ಸಾಲವನ್ನು ಪಡೆಯಬಹುದು. ಈ ಬ್ಯಾಂಕ್ ಶೇ.7.15ರಷ್ಟು ಬಡ್ಡಿಯನ್ನೂ ವಿಧಿಸುತ್ತಿದೆ. ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಬದಲಾಯಿಸಿದಾಗ ಎಲ್ಲಾ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರವನ್ನು ಸಹ ಬದಲಾಯಿಸುತ್ತವೆ. ಈ ಬ್ಯಾಂಕ್‌ಗೆ ಅರ್ಜಿ ಸಲ್ಲಿಸುವ ಮೂಲಕ ನೀವು 20 ಲಕ್ಷ ರೂ.ವರೆಗೆ ಶಿಕ್ಷಣ ಸಾಲವನ್ನು ಪಡೆಯಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.