Best Investment Plan: ಪ್ರತಿಯೊಬ್ಬರೂ ಕೂಡ ತಮ್ಮ ಬ್ಯಾಂಕ್ ಖಾತೆಯಲ್ಲಿ ಸದಾ ಹಣ ತುಂಬಿರಬೇಕು ಎಂದು ಬಯಸುತ್ತಾರೆ. ಆರ್ಥಿಕ ಜಂಜಾಟದಿಂದ ಪರಿಹಾರ ಪಡೆದು ಶ್ರೀಮಂತರಾಗಿ ಬದುಕಬೇಕು ಎಂಬುದು ಹಲವರ ಇಚ್ಛೆ ಆಗಿರುತ್ತದೆ. ಆದರೆ ಮಧ್ಯಮ ವರ್ಗದ ಜನರಿಗೆ ಇದು ಸುಲಭದ ಮಾತಲ್ಲ. ಇದಕ್ಕೆ ಮುಖ್ಯ ಕಾರಣ ಕಡಿಮೆ ಆದಾಯ ಮತ್ತು ಆಧಿಕ ವೆಚ್ಚದಿಂದಾಗಿ ಎಷ್ಟೇ ಯೋಚಿಸಿದರೂ ನಿರೀಕ್ಷಿತ ಮಟ್ಟದಲ್ಲಿ ಹಣ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ನಾವು ನಿಮಗೆ ಮಿಲಿಯನೇರ್ ಆಗುವ ಕಲ್ಪನೆಯನ್ನು ಹೇಳಲಿದ್ದೇವೆ. ಮಿಲಿಯನೇರ್ ಆಗುವ ನಿಮ್ಮ ಕನಸನ್ನು SIP  ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಈಡೇರಿಸಬಹುದು. ಇದರಲ್ಲಿ ನೀವು ದಿನಕ್ಕೆ ಕೇವಲ 50 ರೂಪಾಯಿಗಳನ್ನು ಉಳಿಸಿದರೆ, ನಿವೃತ್ತಿಯ ವೇಳೆಗೆ ನೀವು ಸುಲಭವಾಗಿ ಮಿಲಿಯನೇರ್ ಆಗಬಹುದು.


COMMERCIAL BREAK
SCROLL TO CONTINUE READING

ದೀರ್ಘಾವಧಿಯ ಹೂಡಿಕೆಗೆ ಬಹಳ ಪ್ರಯೋಜನಕಾರಿ: 
ಮ್ಯೂಚುವಲ್ ಫಂಡ್ (Mutual Fund) SIP (ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್) ಅಡಿಯಲ್ಲಿ ನೀವು ಸಣ್ಣ ಮಾಸಿಕ ಹೂಡಿಕೆಗಳೊಂದಿಗೆ ದೊಡ್ಡ ಮೊತ್ತವನ್ನು ಠೇವಣಿ ಮಾಡಬಹುದು. ಈ ಯೋಜನೆ ದೀರ್ಘಾವಧಿಗೆ ಬಹಳ ಪ್ರಯೋಜನಕಾರಿಯಾಗಿದೆ. ಮಿಲಿಯನೇರ್ ಆಗಲು, ನಿಮ್ಮ ವೃತ್ತಿಜೀವನದ ಆರಂಭದಿಂದಲೇ ನೀವು ಹೂಡಿಕೆ ಆರಂಭಿಸಬೇಕು. ನೀವು 25 ನೇ ವಯಸ್ಸಿನಿಂದ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ಅದು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.


ಇದನ್ನೂ ಓದಿ- Indian Economy: IMF ನಂತರ, ವಿಶ್ವಬ್ಯಾಂಕಿನಿಂದಲೂ ಸಿಕ್ಕಿದೆ ಉತ್ತಮ ಸಂಕೇತ!


25 ನೇ ವಯಸ್ಸಿನಲ್ಲಿ ಹೂಡಿಕೆ:
ನೀವು 25 ನೇ ವಯಸ್ಸಿನಿಂದ ಪ್ರತಿನಿತ್ಯ 50 ರೂ.ಗಳನ್ನು ಉಳಿಸಲು ಆರಂಭಿಸಿದರೆ ಮತ್ತು ಅದನ್ನು SIP ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ (Invest In Mutual Fund) ಮಾಡಿದರೆ, 60 ನೇ ವಯಸ್ಸಿಗೆ ನೀವು ಸುಲಭವಾಗಿ ಮಿಲಿಯನೇರ್ ಆಗುತ್ತೀರಿ. ಅಂದರೆ, 35 ವರ್ಷಗಳವರೆಗೆ, ನೀವು ಪ್ರತಿದಿನ ಕೇವಲ 50 ರೂಪಾಯಿಗಳನ್ನು ಉಳಿಸಬೇಕು.


ಮಿಲಿಯನೇರ್ ಆಗುವ ಲೆಕ್ಕಾಚಾರ:
ನೀವು ದಿನಕ್ಕೆ 50 ರೂಪಾಯಿ ಉಳಿಸಿದರೆ, ತಿಂಗಳಲ್ಲಿ 1500 ರೂ. ಉಳಿತಾಯವಾಗುತ್ತದೆ. ಮತ್ತೊಂದೆಡೆ, ಮ್ಯೂಚುವಲ್ ಫಂಡ್‌ಗಳು ಸರಾಸರಿ 12 ರಿಂದ 15 ಪ್ರತಿಶತದಷ್ಟು ಲಾಭವನ್ನು ನೀಡುತ್ತವೆ. ಅಂತೆಯೇ, ನೀವು 35 ವರ್ಷಗಳ ದೀರ್ಘಾವಧಿಯವರೆಗೆ ಹೂಡಿಕೆ ಮಾಡಿದರೆ, ಒಟ್ಟು 6.3 ಲಕ್ಷ ರೂ. ಹೂಡಿಕೆ ಮಾಡುತ್ತೀರಿ. 12.5 ಪ್ರತಿಶತದಷ್ಟು ಆದಾಯವನ್ನು ಪಡೆದಾಗ, ಅದರ ಮೌಲ್ಯವು 1.1 ಕೋಟಿ ರೂಪಾಯಿಗಳಾಗಿರುತ್ತದೆ.


ಇದನ್ನೂ ಓದಿ- PM Awas Yojana: ಪಿಎಂ ಅವಾಜ್ ಯೋಜನೆಯಲ್ಲಿನ ಹೊಸ ಬದಲಾವಣೆಯನ್ನು ತಿಳಿದುಕೊಳ್ಳಿ, ಇಲ್ಲವಾದರೆ ಸಿಗುವುದಿಲ್ಲ ಮನೆ


30 ನೇ ವಯಸ್ಸಿನಲ್ಲಿ ಹೂಡಿಕೆ:
ನೀವು 30 ನೇ ವಯಸ್ಸಿನಲ್ಲಿ SIP ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿಮ್ಮ ಹೂಡಿಕೆಯ ಅವಧಿ 5 ವರ್ಷಗಳು ಕಡಿಮೆಯಾಗುತ್ತದೆ ಮತ್ತು ನೀವು 30 ವರ್ಷಗಳವರೆಗೆ ಮಾತ್ರ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಇದರಲ್ಲಿ, ರೂ. 1500 ರಂತೆ 30 ವರ್ಷಗಳ ಅವಧಿಯಲ್ಲಿ ಒಟ್ಟು 5.4 ಲಕ್ಷ ರೂ. ಹೂಡಿಕೆ ಮಾಡಲಾಗುತ್ತದೆ. ಇದರ ಒಟ್ಟು ಮೌಲ್ಯ 59.2 ಲಕ್ಷ ರೂ. ಒಟ್ಟಾರೆಯಾಗಿ, 5 ವರ್ಷಗಳ ಹೂಡಿಕೆಯ ಅವಧಿಯನ್ನು ಕಡಿತಗೊಳಿಸುವುದರಿಂದ ನಿಮಗೆ ಸುಮಾರು 40 ಲಕ್ಷ ರೂಪಾಯಿ ನಷ್ಟವಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ