ನವದೆಹಲಿ : Small business loan : ಕೊರೊನಾ ಅವಧಿಯಲ್ಲಿ ಅನೇಕ ಜನರ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಅನೇಕ ಜನರು ವ್ಯಾಪಾರದಲ್ಲಿಯೂ ಭಾರೀ ನಷ್ಟವನ್ನು ಅನುಭವಿಸಿದ್ದಾರೆ. ಒಂದು ಸಣ್ಣ ಉದ್ಯಮವನ್ನು ಪ್ರಾರಂಭಿಸಲು ಬಯಸಿದರೆ, ವಾಟ್ಸಾಪ್ (Whatsapp) ಮೂಲಕ 10 ಲಕ್ಷದವರೆಗೆ ತ್ವರಿತ ಸಾಲವನ್ನು (instant loan) ಪಡೆಯಬಹುದು.
ಬ್ಯಾಂಕೇತರ ಹಣಕಾಸು ಕಂಪನಿ (NBFC) IIFL ಫೈನಾನ್ಸ್ WhatsApp ನಲ್ಲಿ ತ್ವರಿತ ವ್ಯಾಪಾರ ಸಾಲದ ಸೌಲಭ್ಯವನ್ನು ಆರಂಭಿಸಿದೆ. ಇದರ ಅಡಿಯಲ್ಲಿ, ಬಳಕೆದಾರರು ಕನಿಷ್ಠ ದಾಖಲೆಗಳ ಮೂಲಕ 10 ಲಕ್ಷದವರೆಗೆ ಸಾಲವನ್ನು (loan) ತೆಗೆದುಕೊಳ್ಳಬಹುದು. ಇದು ಮಾತ್ರವಲ್ಲ, 5 ನಿಮಿಷಗಳಲ್ಲಿ ಈ ಸಾಲಕ್ಕೆ ಅನುಮೋದನೆ ಸಿಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ : SBI Alert! ನಿಮಗೂ ಕೂಡ YONO Appಗೆ ಸಂಬಂಧಿಸಿದ ಈ ಸಂದೇಶ ಬಂದಿದೆಯಾ? ಈಗಲೇ ಎಚ್ಚೆತ್ತುಕೊಳ್ಳಿ
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ?
ಈ ಯೋಜನೆಯ ಲಾಭ ಪಡೆಯಬೇಕಾದರೆ, ಅದಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ತಿಳಿದುಕೊಳ್ಳಬೇಕು. ಇದು ಭಾರತದಲ್ಲಿ ವಾಟ್ಸಾಪ್ (Whatsapp) ಬಳಕೆದಾರರಿಗೆ ಸುಲಭವಾದ ಸಾಲ ಸೌಲಭ್ಯವಾಗಿದೆ. ಅದರ ಸಹಾಯದಿಂದ, 10 ನಿಮಿಷಗಳಲ್ಲಿ ಸಾಲವನ್ನು ತೆಗೆದುಕೊಳ್ಳಬಹುದು. AI-bot ಸಹಾಯದಿಂದ, ಬಳಕೆದಾರರ ಇನ್ಪುಟ್ ಅನ್ನು ಲೋನ್ ಆಫರ್ ನೊಂದಿಗೆ ಸೇರಿಸಲಾಗುತ್ತದೆ. ಇದರ ನಂತರ, ಬಳಕೆದಾರರು ಕೆವೈಸಿ (KYC), ಬ್ಯಾಂಕ್ ಖಾತೆ ಪರಿಶೀಲನೆ ಮತ್ತು ಮ್ಯಾನ್ ಡೇಟೆಡ್ ಸೆಟ್ಟಲ್ ಅಪ್ ಮೂಲಕ ಅರ್ಜಿ ಸಲ್ಲಿಸಬಹುದು.
ಕಂಪನಿಯು ನೀಡಿದ ಮಾಹಿತಿಯ ಪ್ರಕಾರ, 'ವಾಟ್ಸಾಪ್ ಮೂಲಕ ಐಐಎಫ್ಎಲ್ ಫೈನಾನ್ಸ್ ನಿಂದ ಸಾಲ ಪಡೆಯಲು, ಬಳಕೆದಾರರು 9019702184 ಸಂಖ್ಯೆಗೆ 'Hi' ಎಂದು ಬರೆದು ಕಳುಹಿಸಬೇಕು. ಅದರ ನಂತರ ಬಳಕೆದಾರರು ಬೇಸಿಕ್ ಮಾಹಿತಿಯನ್ನು ನೀಡಬೇಕಾಗುತ್ತದೆ. ಇದರ ನಂತರ, KYC ಅನ್ನು ಪೂರ್ಣಗೊಳಿಸಬೇಕು ಮತ್ತು ನಂತರ ಬ್ಯಾಂಕ್ ವರ್ಗಾವಣೆ ವಿವರಗಳನ್ನು ಪರಿಶೀಲಿಸಬೇಕಾಗುತ್ತದೆ. ಇಷ್ಟಾಗಿ ನೋಂದಾಯಿಸಿದ ನಂತರ ಮತ್ತು ತಕ್ಷಣವೇ ನಿಮ್ಮ ಖಾತೆಗೆ ಹಣ ಬರುತ್ತದೆ.
ಇದನ್ನೂ ಓದಿ : EPF Contribution : ಪಿಂಚಣಿದಾರರಿಗೆ ಭರ್ಜರಿ ಸಿಹಿ ಸುದ್ದಿ : ಡಬಲ್ ಆಗಲಿದೆ ನಿಮ್ಮ ಪಿಂಚಣಿ!
ಎಲ್ಲಾ ಔಪಚಾರಿಕತೆಗಳನ್ನು WhatsApp ನಲ್ಲಿ ಪೂರ್ಣಗೊಳಿಸಲಾಗುತ್ತದೆ :
ಐಐಎಫ್ಎಲ್ ಫೈನಾನ್ಸ್ನ ಚೀಫ್ ರಿಸ್ಕ್ ಆಫೀಸರ್ ಸಂಜೀವ್ ಶ್ರೀವಾಸ್ತವ ಪ್ರಕಾರ, “ಸೇತು ಟೆಕ್ನೋಲೋಜಿ ಸರ್ವಿಸ್ ಪ್ರೊವೈಡರ್. ಸಾಲಕ್ಕಾಗಿ ಚಾಟ್ ಮಾಡುವುದರಿಂದ ಅರ್ಜಿ ಸಲ್ಲಿಸುವುದರಿಂದ ವಿತರಣೆ ತನಕ ಎಲ್ಲಾ ಕೆಲಸಗಳು ಬಹಳ ಸುಲಭವಾಗಿ ಮುಗಿದು ಹೋಗುತ್ತದೆ. ಸಣ್ಣ ವ್ಯಾಪಾರಿಗಳು WhatsApp ಸಂಭಾಷಣೆಯ ಮೂಲಕವೇ ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸುವ ಮೂಲಕ ಹಣವನ್ನು ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ