ಪೋಸ್ಟ್ ಆಫೀಸ್ನ ಅತ್ಯುತ್ತಮ ಜೀವ ವಿಮಾ ಪಾಲಿಸಿ: ತೆರಿಗೆ ವಿನಾಯಿತಿ ಜೊತೆಗೆ ಸಿಗುತ್ತೆ ಇಷ್ಟೆಲ್ಲಾ ಲಾಭ!
Post Office Insurance: ಸುರಕ್ಷಿತ ಹಾಗೂ ಭವಿಷ್ಯದ ದೃಷ್ಟಿಯಿಂದ ಹೂಡಿಕೆಗಾಗಿ ಯೋಚಿಸುತ್ತಿದ್ದರೆ ಪೋಸ್ಟ್ ಆಫೀಸ್ನ ಅತ್ಯುತ್ತಮ ಜೀವ ವಿಮಾ ಯೋಜನೆ ಕೂಡ ನಿಮಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು.
Post Office Insurance Scheme: ಎಲ್‌ಐಸಿ ಮಾತ್ರವಲ್ಲ, ಅಂಚೆಕಚೇರಿಗಳಲ್ಲೂ ಕೂಡ "ಜೀವ ವಿಮಾ ಯೋಜನೆ"ಯನ್ನು ತೆಗೆದುಕೊಳ್ಳಬಹುದು. ಪೋಸ್ಟ್ ಆಫೀಸ್‌ನಲ್ಲಿ ಪೋಸ್ಟಲ್ ಲೈಫ್ ಇನ್ಶೂರೆನ್ಸ್ (Postal Life Insurance) ಎಂಬ ಯೋಜನೆ ಜಾರಿಯಲ್ಲಿದೆ. ಇದು ಪಾಲಿಸಿದಾರರಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾಗಿರುವ ಯೋಜನೆ:
ವಾಸ್ತವವಾಗಿ, ಪೋಸ್ಟಲ್ ಲೈಫ್ ಇನ್ಶೂರೆನ್ಸ್ (Postal Life Insurance) ಯೋಜನೆಯನ್ನು 1 ಫೆಬ್ರವರಿ 1884 ರಂದು ಬ್ರಿಟಿಷರ ಕಾಲದಲ್ಲಿ ಪ್ರಾರಂಭಿಸಲಾಯಿತು. ಆದಾಗ್ಯೂ, ಇಂದಿಗೂ ಸಹ ಈ ಪಾಲಿಸಿ ಹೆಚ್ಚು ಜನಪ್ರಿಯವಾಗಿಲ್ಲ. ಪೋಸ್ಟಲ್ ಲೈಫ್ ಇನ್ಶುರೆನ್ಸ್ ಅಡಿಯಲ್ಲಿ 6 ಯೋಜನೆಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ ಒಂದು ಸಂಪೂರ್ಣ ಜೀವ ವಿಮೆ. ಈ ಯೋಜನೆಯು ರೂ. 50 ಲಕ್ಷದವರೆಗೆ ವಿಮಾ ಮೊತ್ತವನ್ನು ನೀಡುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಇನ್ನೂ ಹಲವು ಪ್ರಯೋಜನಗಳು ಕೂಡ ಲಭ್ಯವಿರುತ್ತದೆ.
ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಪ್ರಯೋಜನಗಳು:
ಪೋಸ್ಟ್ ಆಫೀಸ್‌ನಲ್ಲಿ (Post Office) ಪೋಸ್ಟಲ್ ಲೈಫ್ ಇನ್ಶೂರೆನ್ಸ್ (Postal Life Insurance) ನಲ್ಲಿ ಪಾವತಿಸಿದ ಪ್ರೀಮಿಯಂಗೆ ಪಾಲಿಸಿದಾರರು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ವಿನಾಯಿತಿ ಪಡೆಯಬಹುದು.
ಇದನ್ನೂ ಓದಿ- Ten Rupee Coins: ನಿಮ್ಮ ಬಳಿಯೂ 10 ರೂ. ನಾಣ್ಯ ಇದ್ಯಾ? ಚಿಂತಿಸುವ ಅಗತ್ಯವೇ ಇಲ್ಲ ಆರ್‌ಬಿಐನ ಈ ನಿಯಮ ತಿಳಿಯಿರಿ
ಪ್ರೀಮಿಯಂ ಪಾವತಿ:
ಪೋಸ್ಟಲ್ ಲೈಫ್ ಇನ್ಶೂರೆನ್ಸ್ ನಲ್ಲಿ ಪಾಲಿಸಿದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕವಾಗಿ ಪ್ರೀಮಿಯಂ ಪಾವತಿ ಆಯ್ಕೆಯನ್ನು ಪಡೆಯುತ್ತಾರೆ. ಇಷ್ಟೇ ಅಲ್ಲ, ನೀವು ಬಯಸಿದರೆ, ನೀವು ಈ ಪಾಲಿಸಿಯನ್ನು 59 ವರ್ಷಗಳವರೆಗೆ ಎಂಡೋಮೆಂಟ್ ಅಶ್ಯೂರೆನ್ಸ್ ಪಾಲಿಸಿಯಾಗಿ ಪರಿವರ್ತಿಸಬಹುದು. ಆದಾಗ್ಯೂ, ಪ್ರೀಮಿಯಂ ಪಾವತಿಯ ದಿನಾಂಕ ಅಥವಾ ಮುಕ್ತಾಯದ ದಿನಾಂಕದ ಒಂದು ವರ್ಷದೊಳಗೆ ಆಗಬಾರದು ಎಂಬುದು ಗಮನಾರ್ಹ.
ಈ ಪಾಲಿಸಿಯನ್ನು ಯಾರು ಖರೀದಿಸಬಹುದು?
19 ವರ್ಷದಿಂದ 55 ವರ್ಷಗಳ ನಡುವಿನ ಯಾವುದೇ ವ್ಯಕ್ತಿ ಸಂಪೂರ್ಣ ಜೀವ ವಿಮೆ-ಸುರಕ್ಷಾ ಪಾಲಿಸಿಯನ್ನು (Whole Life Insurance-Security Policy)ಖರೀದಿಸಬಹುದು. ಈ ಯೋಜನೆಯಡಿಯಲ್ಲಿ, ಪಾಲಿಸಿದಾರರು ಬೋನಸ್‌ನೊಂದಿಗೆ ಕನಿಷ್ಠ ರೂ. 20,000 ಮತ್ತು ಗರಿಷ್ಠ ರೂ. 50 ಲಕ್ಷದ ವಿಮಾ ಮೊತ್ತವನ್ನು ಪಡೆಯುತ್ತಾರೆ. ಪಾಲಿಸಿ ಅವಧಿಗೂ ಮೊದಲೇ ಪಾಲಿಸಿದಾರರು ಮೃತಪಟ್ಟರೆ ಪಾಲಿಸಿದಾರರ ಉತ್ತರಾಧಿಕಾರಿ ಅಥವಾ ನಾಮಿನಿಗೆ ಈ ಮೊತ್ತ ದೊರೆಯಲಿದೆ.
ಸಾಲ ಸೌಲಭ್ಯ:
ಸಂಪೂರ್ಣ ಜೀವ ವಿಮೆ-ಸುರಕ್ಷಾ ಪಾಲಿಸಿಯನ್ನು ಖರೀದಿಸಿ ನಿರಂತರವಾಗಿ ನಾಲ್ಕು ವರ್ಷಗಳ ಪಾಲಿಸಿ ಹಣವನ್ನು ತುಂಬಿದ ಪಾಲಿಸಿದಾರರು ನಾಲ್ಕು ವರ್ಷಗಳ ಬಳಿಕ ತಮ್ಮ ಪಾಲಿಸಿಯ ಆಧಾರದ ಮೇಲೆ ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದು.
ಇದನ್ನೂ ಓದಿ- ಪ್ರತಿನಿತ್ಯ ರೂ.400 ಠೇವಣಿ ಮಾಡಿ ಸಾಕು..ಇದರಿಂದು ನೀವು 71 ಲಕ್ಷ ಗಳಿಸಬಹುದು..!
ಪಾಲಿಸಿ ಸರೆಂಡರ್:
ಪ್ರಮುಖ ವಿಷಯವೆಂದರೆ, ನೀವು ಈ ಪಾಲಿಸಿಯನ್ನು ದೀರ್ಘ ಸಮಯದವರೆಗೆ ಮುಂದುವರೆಸಲು ಸಾಧ್ಯವಾಗದಿದ್ದಲ್ಲಿ ಮೂರು ವರ್ಷಗಳು ಪೂರ್ಣಗೊಂಡ ನಂತರ ನೀವು ನಿಮ್ಮ ಪಾಲಿಸಿಯನ್ನು ಸರೆಂಡರ್ ಮಾಡಬಹುದು. 5 ವರ್ಷಗಳ ನಂತರ ನಿಮ್ಮ ಪಾಲಿಸಿಯನ್ನು ಸರೆಂಡರ್ ಮಾಡಿದರೆ ವಿಮಾ ಮೊತ್ತದ ಮೇಲೆ ಅನುಪಾತದ ಬೋನಸ್ ಅನ್ನು ಪಾವತಿಸಲಾಗುತ್ತದೆ. 5 ವರ್ಷಗಳ ಮೊದಲು ನಿಮ್ಮ ಪಾಲಿಸಿಯನ್ನು ಸರೆಂಡರ್ ಮಾಡಿದಲ್ಲಿ ಅದರ ಮೇಲೆ ಬೋನಸ್‌ನ ಪ್ರಯೋಜನಗಳು ಲಭ್ಯವಿರುವುದಿಲ್ಲ ಎಂಬುದನ್ನೂ ನೆನಪಿನಲ್ಲಿಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.