ನವದೆಹಲಿ: ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಮತ್ತೊಮ್ಮೆ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಸದ್ದು ಮಾಡಿದೆ. ಹೆಚ್ಚು ಮಾರಾಟವಾದ 10 ಕಾರುಗಳ ಪೈಕಿ 7 ಕಾರುಗಳು ಮಾರುತಿ ಸುಜುಕಿಯೊಂದರದ್ದೇ ಆಗಿವೆ. ಮಾರುತಿ ಸುಜುಕಿ ಸ್ವಿಫ್ಟ್ ಮಾರ್ಚ್ ತಿಂಗಳಲ್ಲಿ ಅತಿಹೆಚ್ಚು ಖರೀದಿಯಾಗಿದೆ. ಮೊದಲ ಸ್ಥಾನದಲ್ಲಿರುವ ಮಾರುತಿ ಸ್ವಿಫ್ಟ್ 17,559 ಯುನಿಟ್‌ಗಳ ಮಾರಾಟ ಮಾಡಿದೆ. ಸ್ವಿಫ್ಟ್ ಮಾರಾಟದಲ್ಲಿ ಶೇ.29ರಷ್ಟು ಜಿಗಿತ ಕಂಡಿದೆ.


COMMERCIAL BREAK
SCROLL TO CONTINUE READING

ಮಾರುತಿ ಬ್ರೆಜ್ಜಾ ಕೂಡ ಉತ್ತಮ ಮಾರಾಟ ಕಂಡಿದೆ. ಹೆಚ್ಚು ಮಾರಾಟವಾಗುವ SUV ಆಗಿರುವ ಮಾರುತಿ ಬ್ರೆಝಾ ತನ್ನ ಮಾರಾಟದಲ್ಲಿ ಶೇ.30ರಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ. ಈ ಮಧ್ಯೆ ಕಂಪನಿಯ 3 ವಾಹನಗಳ ಮಾರಾಟವನ್ನು ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಲಾಯಿತು. ಈ ಎಲ್ಲಾ 3 ವಾಹನಗಳು ಸಾಕಷ್ಟು ಜನಪ್ರಿಯವಾಗಿವೆ, ಆದರೆ ಅವುಗಳ ಮಾರಾಟವು ಮಾರ್ಚ್ ತಿಂಗಳಲ್ಲಿ ತೀವ್ರವಾಗಿ ಕುಸಿತ ಕಂಡಿದೆ.


1. ಮಾರುತಿ ಸುಜುಕಿ ವ್ಯಾಗನ್ಆರ್


ಮಾರುತಿ ಸುಜುಕಿ ವ್ಯಾಗನ್ಆರ್ ಮಾರ್ಚ್ ತಿಂಗಳಲ್ಲಿ 2ನೇ ಅತಿಹೆಚ್ಚು ಮಾರಾಟವಾದ ಕಾರು. ಇದರ ಹೊರತಾಗಿಯೂ ಈ ಕಾರಿನ ಮಾರಾಟದಲ್ಲಿ ಶೇ.30ರಷ್ಟು ಕುಸಿತ ಕಂಡುಬಂದಿದೆ. ಕಳೆದ ತಿಂಗಳು ಈ ಕಾರಿನ 17,305 ಯುನಿಟ್‌ಗಳು ಮಾರಾಟವಾಗಿದ್ದರೆ, ಕಳೆದ ವರ್ಷ ಮಾರ್ಚ್‌ನಲ್ಲಿ 24,634 ಯುನಿಟ್‌ಗಳು ಮಾರಾಟವಾಗಿವೆ. ಮಾರುತಿ ಸುಜುಕಿ ವ್ಯಾಗನ್ಆರ್ 2 ಎಂಜಿನ್ ಆಯ್ಕೆಗಳಲ್ಲಿ ಬರುತ್ತದೆ. ಇದು 1.0 ಲೀಟರ್ ಪೆಟ್ರೋಲ್ ಮತ್ತು 1.2 ಲೀಟರ್ ಪೆಟ್ರೋಲ್ ಎಂಜಿನ್‌ಗಳನ್ನು ಹೊಂದಿದೆ. ಇದು manualನೊಂದಿಗೆ AGS (ಸ್ವಯಂಚಾಲಿತ ಗೇರ್ ಶಿಫ್ಟ್) ಪ್ರಸರಣ ನೀಡಲಾಗಿದೆ.


ಇದನ್ನೂ ಓದಿ: ಸರ್ಕಾರಿ ನೌಕರರ ವೇತನದಲ್ಲಿ 8000 ರೂಪಾಯಿ ಹೆಚ್ಚಳ ! ಈಗ ಕೈ ಸೇರುವ ಮೊತ್ತ ಎಷ್ಟು ಇಲ್ಲಿದೆ ಲೆಕ್ಕಾಚಾರ


2. ಮಾರುತಿ ಸುಜುಕಿ ಡಿಜೈರ್


ಮಾರುತಿ ಸುಜುಕಿ ಡಿಜೈರ್ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ದೇಶದ ಏಕೈಕ ಸೆಡಾನ್ ಆಗಿದೆ. ಒಟ್ಟಾರೆ ಕಾರು ಮಾರಾಟದಲ್ಲಿ 7ನೇ ಸ್ಥಾನದಲ್ಲಿದೆ. ಇದರ ಮಾರಾಟವು ಶೇ.28ರಷ್ಟು ಕುಸಿತವನ್ನು ದಾಖಲಿಸಿದೆ. ಮಾರುತಿ ಡಿಜೈರ್ ಕಳೆದ ತಿಂಗಳು 13,394 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ 18,623 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದು ಕೇವಲ 1 ಎಂಜಿನ್ನೊಂದಿಗೆ ಬರುತ್ತದೆ, ಇದು 1.2 ಲೀಟರ್ ಪೆಟ್ರೋಲ್ ಆಗಿದೆ. ಇದರಲ್ಲಿ ಸಿಎನ್‍ಜಿ ಆಯ್ಕೆಯನ್ನೂ ನೀಡಲಾಗಿದೆ.


3. ಮಾರುತಿ ಸುಜುಕಿ ಆಲ್ಟೊ


ಮಾರುತಿ ಆಲ್ಟೊ ಮಾರ್ಚ್ ತಿಂಗಳಿನಲ್ಲಿ 14ನೇ ಸ್ಥಾನಕ್ಕೆ ಕುಸಿದಿದೆ. ಮಾರುತಿ ಆಲ್ಟೊ ಕಳೆದ ತಿಂಗಳು 9,139 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಅದರ 7,621 ಯುನಿಟ್‌ಗಳು ಮಾರಾಟವಾಗಿದ್ದವು. ಇದರ ಮಾರಾಟವು ಶೇ.20ರಷ್ಟು ಹೆಚ್ಚಾಗಿದೆ, ಆಲ್ಟೋ ಮಾರಾಟವು ಡಿಸೆಂಬರ್‌ಗೆ ಹೋಲಿಸಿದರೆ ಅರ್ಧದಷ್ಟು ಕಡಿಮೆಯಾಗಿದೆ. ಸದ್ಯಕ್ಕೆ ಆಲ್ಟೊ 2 ಮಾದರಿಗಳಲ್ಲಿ ಬರುತ್ತದೆ, ಆಲ್ಟೊ ಕೆ10 ಮತ್ತು ಆಲ್ಟೊ 800. ಆದರೆ ಈಗ ಕಂಪನಿಯು ಆಲ್ಟೊ 800 ಉತ್ಪಾದನೆಯನ್ನು ನಿಲ್ಲಿಸಿದೆ.


ಇದನ್ನೂ ಓದಿJio Recharge Plan: ಕಡಿಮೆ ಮೊತ್ತದ ಜಿಯೋ ಅದ್ಭುತ ರಿಚಾರ್ಜ್ ಪ್ಲಾನ್ ಬಗ್ಗೆ ತಿಳಿಯಿರಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.