Govt Scheme: ಕೇವಲ ರೂ.456 ಕ್ಕೆ ಸಿಗಲಿದೆ 4 ಲಕ್ಷ ರೂ.ಗಳ ಲಾಭ, ಸರ್ಕಾರಿ ಬ್ಯಾಂಕುಗಳಿಗೆ ಆದೇಶ ನೀಡಿದ ಕೇಂದ್ರ ಸರ್ಕಾರ!

Central Govt. Insurance Scheme: ಸಾರ್ವಜನಿಕ ವಲಯದ ಬ್ಯಾಂಕ್‌ಗಳು (ಪಿಎಸ್‌ಬಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರ ನಡೆಸುವ ಸೂಕ್ಷ್ಮ ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಮಾರಾಟಕ್ಕೆ ಗುರಿಯನ್ನು ನಿಗದಿಪಡಿಸಿವೆ.  

Written by - Nitin Tabib | Last Updated : Apr 16, 2023, 07:28 PM IST
  • ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ,
  • ಬಹು-ವರ್ಷದ ಯೋಜನೆಗಳನ್ನು ಖರೀದಿಸಲು ಗ್ರಾಹಕರನ್ನು ಪ್ರೋತ್ಸಾಹಿಸಲು
  • ಹಣಕಾಸು ಸಚಿವಾಲಯವು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು (ಪಿಎಸ್‌ಬಿ) ಕೋರಿದೆ
Govt Scheme: ಕೇವಲ ರೂ.456 ಕ್ಕೆ ಸಿಗಲಿದೆ 4 ಲಕ್ಷ ರೂ.ಗಳ ಲಾಭ, ಸರ್ಕಾರಿ ಬ್ಯಾಂಕುಗಳಿಗೆ ಆದೇಶ ನೀಡಿದ ಕೇಂದ್ರ ಸರ್ಕಾರ! title=
ಸೂಕ್ಷ್ಮ ವಿಮಾ ಯೋಜನೆಗಳು

Central Govt. Insurance Scheme: ಸಾರ್ವಜನಿಕ ವಲಯದ ಬ್ಯಾಂಕ್‌ಗಳು (ಪಿಎಸ್‌ಬಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರ ನಡೆಸುವ ಸೂಕ್ಷ್ಮ ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಮಾರಾಟಕ್ಕೆ ಗುರಿಯನ್ನು ನಿಗದಿಪಡಿಸಿವೆ. ಇದರೊಂದಿಗೆ, ಸಾರ್ವಜನಿಕ ಬ್ಯಾಂಕ್‌ಗಳು ಮುದ್ರಾ ಯೋಜನೆ ಮತ್ತು ಸ್ಟ್ಯಾಂಡ್‌ಅಪ್ ಇಂಡಿಯಾ ಸ್ಕೀಮ್‌ನಂತಹ ಹಣಕಾಸು ಯೋಜನೆಗಳ ಸೇರ್ಪಡೆಗೆ ತಮ್ಮ ಗುರಿಗಳನ್ನು ನಿಗದಿಪಡಿಸಿವೆ.

ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಬಹು-ವರ್ಷದ ಯೋಜನೆಗಳನ್ನು ಖರೀದಿಸಲು ಗ್ರಾಹಕರನ್ನು ಪ್ರೋತ್ಸಾಹಿಸಲು ಹಣಕಾಸು ಸಚಿವಾಲಯವು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು (ಪಿಎಸ್‌ಬಿ) ಕೋರಿದೆ. ಪ್ರಸ್ತುತ, ಹೆಚ್ಚಿನ ಗ್ರಾಹಕರು ಒಂದು ವರ್ಷದ ಯೋಜನೆಯನ್ನು ಖರೀದಿಸುತ್ತಾರೆ ಮತ್ತು ನಂತರ ಅದನ್ನು ಪ್ರತಿ ವರ್ಷ ನವೀಕರಿಸುತ್ತಾರೆ.

ಈ ಎರಡು ಯೋಜನೆಗಳ ಪ್ರಯೋಜನವನ್ನು ಕೋಟ್ಯಂತರ ಜನರು ಪಡೆದುಕೊಂಡಿದ್ದಾರೆ
ಸುಮಾರು 8.3 ಕೋಟಿ ಫಲಾನುಭವಿಗಳು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದರೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಅಡಿಯಲ್ಲಿ ಸುಮಾರು 23.9 ಕೋಟಿ ಫಲಾನುಭವಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. 2015 ರಲ್ಲಿ ಈ ವಿಮಾ ಯೋಜನೆಗಳು ಪ್ರಾರಂಭವಾದಾಗಿನಿಂದ, ಮಾರ್ಚ್, 2023 ರವರೆಗೆ PMJJBY ಅಡಿಯಲ್ಲಿ ಒಟ್ಟು 15.99 ಕೋಟಿ ನೋಂದಣಿಗಳನ್ನು ಮಾಡಲಾಗಿದೆ ಮತ್ತು 33.78 ಕೋಟಿ ಜನರು PMSBY ವ್ಯಾಪ್ತಿಗೆ ಒಳಪಟ್ಟಿದ್ದಾರೆ.

ಕಳೆದ ವರ್ಷ ಪ್ರೀಮಿಯಂ ಹೆಚ್ಚಳ
ಕಳೆದ ವರ್ಷ ಜೂನ್ 1 ರಿಂದ, ಹಣಕಾಸು ಸಚಿವಾಲಯವು ಪಿಎಂಜೆಜೆಬಿವೈ ಅಡಿಯಲ್ಲಿ ಪ್ರೀಮಿಯಂ ಅನ್ನು ರೂ 330 ರಿಂದ ರೂ 436 ಕ್ಕೆ ಹೆಚ್ಚಿಸಿದ್ದರೆ, ಪಿಎಂಎಸ್‌ಬಿವೈ ಸಂದರ್ಭದಲ್ಲಿ ಅದನ್ನು ರೂ 12 ರಿಂದ ರೂ 20 ಕ್ಕೆ ಹೆಚ್ಚಿಸಲಾಯಿತು. ಈ ಸೂಕ್ಷ್ಮ ವಿಮಾ ಯೋಜನೆಗಳ ಆರ್ಥಿಕ ಕಾರ್ಯಸಾಧ್ಯತೆ ಮತ್ತು ಕ್ಲೈಮ್‌ಗಳ ಮರುಪಾವತಿಯನ್ನು ಗಮನದಲ್ಲಿಟ್ಟುಕೊಂಡು ದರಗಳನ್ನು ಪರಿಷ್ಕರಿಸಲಾಗಿದೆ.

ಇದನ್ನೂ ಓದಿ-LPG Cylinder ಬೆಲೆ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಮೋದಿ ಸರ್ಕಾರ, ಸಿಗಲಿದೆ ಅಗ್ಗದ ದರದಲ್ಲಿ ಸಿಲಿಂಡರ್!

ರೂ.456 ಕ್ಕೆ 4 ಲಕ್ಷ ರೂ.ಗಳ ಪ್ರಯೋಜನಗಳನ್ನು ಪಡೆಯಿರಿ
PMJJBY ಅಡಿಯಲ್ಲಿ, ಯಾವುದೇ ಸಂದರ್ಭದಲ್ಲಿ 18-50 ವರ್ಷ ವಯಸ್ಸಿನ ಖಾತೆದಾರರು ಮರಣಹೊಂದಿದರೆ, ಅವರ ಮುಂದಿನ ಸಂಬಂಧಿಕರಿಗೆ 2 ಲಕ್ಷ ರೂ. ಇದೇ ವೇಳೆ, PMSBY ನಲ್ಲಿ, ಆಕಸ್ಮಿಕ ಮರಣ ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ವಿಮಾದಾರರಿಗೆ ರೂ 2 ಲಕ್ಷ ಮತ್ತು ಭಾಗಶಃ ಅಂಗವೈಕಲ್ಯ ಸಂದರ್ಭದಲ್ಲಿ ರೂ 1 ಲಕ್ಷ ನೀಡುವ ನಿಬಂಧನೆ ಇದೆ.

ಇದನ್ನೂ ಓದಿ-NPS Big Update: ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ! ಮೋದಿ ಸರ್ಕಾರದ ಈ ನಿರ್ಧಾರ ನಿಮಗೂ ಸಂತಸ ನೀಡಲಿದೆ!

ಕಳೆದ ವಾರ, ಹಣಕಾಸು ಸಚಿವಾಲಯವು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗಿನ ಸಭೆಯಲ್ಲಿ ಮೈಕ್ರೋ ಇನ್ಶೂರೆನ್ಸ್ ಯೋಜನೆಗಳನ್ನು ಉತ್ತೇಜಿಸುವ ಬಗ್ಗೆ ಒತ್ತು ನೀಡಿದೆ. ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ವಿವೇಕ್ ಜೋಶಿ ಅವರು ಈ ಬ್ಯಾಂಕ್‌ಗಳಿಗೆ ನಿಗದಿತ ಗುರಿಗಳನ್ನು ಸಾಧಿಸಲು ಸಮಯ ಮಿತಿಯ ಪ್ರಯತ್ನಗಳನ್ನು ಮಾಡುವಂತೆ ಕೋರಿದ್ದಾರೆ. ಈ ವಿಮಾ ಯೋಜನೆಗಳ  ಸ್ಥಗಿತವನ್ನು ತೆಗೆದುಹಾಕಲು ಸರ್ಕಾರವು ಏಪ್ರಿಲ್ 1 ರಿಂದ ಅಭಿಯಾನವನ್ನು ಪ್ರಾರಂಭಿಸಿದೆ. 3 ತಿಂಗಳ ಅವಧಿಯ ಈ ಅಭಿಯಾನದಲ್ಲಿ ಬ್ಯಾಂಕ್‌ಗಳು ತಮ್ಮ ಬ್ಯಾಂಕಿಂಗ್ ಕರೆಸ್ಪಾಂಡೆಂಟ್‌ಗಳ ನೆಟ್‌ವರ್ಕ್‌ನ ಗರಿಷ್ಠ ಲಾಭವನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News