Benefits Of Buying Gold: ದುಡ್ಡನ್ನು ದುಡಿಯುವುದು ಎಷ್ಟು ಮುಖ್ಯವೋ ಅದಕ್ಕಿಂತಲೂ ಮುಖ್ಯವಾದುದು ದುಡಿದ ದುಡ್ಡಿನಲ್ಲಿ ಎಷ್ಟನ್ನು ಉಳಿಸುತ್ತೇವೆ ಎನ್ನುವುದು. ಸಾವಿರ, ಲಕ್ಷ, ಕೋಟಿ ಎಷ್ಟಾದರೂ ದುಡಿಯಿರಿ, ಅದರಲ್ಲಿ ಒಂದಿಷ್ಟು ಉಳಿಸಿದರೆ ಮಾತ್ರ ಭವಿಷ್ಯ ಭದ್ರವಾಗಿರುತ್ತದೆ. ಅದಕ್ಕಿರುವ ಬೆಸ್ಟ್ ಮೆಥೆಡ್ ಚಿನ್ನ ಖರೀದಿ.


COMMERCIAL BREAK
SCROLL TO CONTINUE READING

‘ಕೈಯಲ್ಲಿ ಎಷ್ಟೇ ದುಡ್ಡಿದ್ದರೂ ಉಳಿಯುವುದಿಲ್ಲ…’ ಎನ್ನುವುದು ಸಾಮಾನ್ಯವಾಗಿ ಎಲ್ಲರ ಕೊರಗು. ಇದು ನಿಜ ಕೂಡ. ಎಷ್ಟೇ ದುಡ್ಡು ಬಂದರೂ ಅದನ್ನು ಸೂಕ್ತ ರೀತಿಯಲ್ಲಿ ‘ವಿನಿಯೋಗ’ ಮಾಡದಿದ್ದರೆ ಖಂಡಿತಾ ಉಳಿಯುವುದಿಲ್ಲ. ಹಾಗಂತಾ ಉಳಿತಾಯ ಮಾಡಬೇಕು ಎನ್ನುವ ಕಾರಣಕ್ಕೆ ಏನೋ ಒಂದು ರೀತಿಯಲ್ಲಿ ಉಳಿಸಲು ಹೋದರೂ ಅದರಿಂದ ದೊಡ್ಡ ಪ್ರಯೋಜನ ಆಗುವುದಿಲ್ಲ. ಕೆಲವೊಮ್ಮೆ ಹಣ ಉಳಿಯುವುದೇ ಇಲ್ಲ. ಅದಕ್ಕಾಗಿ ಸರಿಯಾದ ಉಳಿತಾಯದ ಮಾರ್ಗೋಪಾಯಗಳನ್ನು ಕಂಡುಕೊಳ್ಳಲೇಬೇಕು.


ಸಾಮಾನ್ಯವಾಗಿ ಹಣ ಉಳಿತಾಯದ ಮಾರ್ಗಗಳು ಯಾವುವು?
>> ಮೊದಲನೆಯದಾಗಿ ಬ್ಯಾಂಕಿಂಗ್ ಮೂಲಕ. ಅಂದರೆ ಉಳಿತಾಯ ಖಾತೆ, ಆರ್‌ಡಿ ಖಾತೆ ಮತ್ತು ಎಫ್‌ಡಿಗಳಲ್ಲಿ ಹಣ ಇಡುವುದು (ಪೋಸ್ಟ್ ಆಫೀಸಿನಲ್ಲೂ ಆಗಬಹುದು). 
>> ಎರಡನೆಯದು ಮ್ಯುಚುಯಲ್ ಫಂಡ್ ಅಥವಾ ಸ್ಟಾಕ್ ಮಾರ್ಕೆಟ್ ಮೂಲಕ ಹಣ ಹೂಡಿಕೆ ಮಾಡುವುದು. 
>> ಮೂರನೆಯದು ಜೀವ ವಿಮೆಗಳ ಮೂಲಕ ಉಳಿತಾಯ ಮಾಡುವುದು. 
>> ನಾಲ್ಕನೆಯದು ಚಿನ್ನ ಖರೀದಿಸುವುದು. 
>> ಐದನೆಯದು ಆಸ್ತಿ ಖರೀದಿಸುವುದು. 


ಇದನ್ನೂ ಓದಿ- SCAM ALERT: SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ಯಾ! ನಿಮ್ಮ ಫೋನ್ ಗೆ ಈ ರೀತಿ ಮೆಸೇಜ್ ಬಂದ್ರೆ, ಎಚ್ಚರ!


ಮೊದಲಿನ ನಾಲ್ಕು ವಿಧಾನಗಳ ಮೂಲಕ ಹಣ ಉಳಿತಾಯ ಮಾಡಿದರೆ ಮಾತ್ರ ಆಸ್ತಿ ಖರೀದಿ ಮಾಡಬಹುದು. ಹಾಗಾಗಿ ಸಣ್ಣ ಸಣ್ಣ ಉಳಿತಾಯ ಮಾಡುವ ಮೊದಲ ನಾಲ್ಕು ವಿಧಾನಗಳ ಬಗ್ಗೆ ಮಾತ್ರ ಇಲ್ಲಿ ಗಮನಹರಿಸೋಣ. ಬ್ಯಾಂಕುಗಳಲ್ಲಿ ಉಳಿತಾಯ ಖಾತೆ, ಆರ್‌ಡಿ ಖಾತೆ ಮತ್ತು  ಎಫ್‌ಡಿಗಳಲ್ಲಿ ಹಣ ಇಡಬಹುದಾದರೂ ಅವುಗಳಿಗೆ ಹೆಚ್ಚು ಗ್ರೋಥ್ ಇರುವುದಿಲ್ಲ. ಅಂದರೆ ಹೆಚ್ಚಿನ ಪ್ರಮಾಣದ ಬಡ್ಡಿ ಸಿಗುವುದಿಲ್ಲ. ನಮ್ಮ ಹಣ ಬೇಗ ಬೆಳೆಯುವುದಿಲ್ಲ. 


ಇನ್ನು ಎರಡನೇ ವಿಧಾನವಾದ  ಮ್ಯುಚುಯಲ್ ಫಂಡ್ ಅಥವಾ ಸ್ಟಾರ್ಕ್ ಮಾರ್ಕೆಟ್ ವ್ಯವಹಾರವನ್ನು ನೋಡುವುದಾದರೆ ಕೆಲವೊಮ್ಮೆ ಹೆಚ್ಚು ಲಾಭ ತಂದುಕೊಡುತ್ತದೆ. ಕೆಲವೊಮ್ಮೆ ಬಹಳ ನಿಧಾನವಾದ ಗ್ರೋಥ್ ಇರುತ್ತದೆ. ಇನ್ನೂ ಕೆಲವೊಮ್ಮೆ ಲಾಸ್ ಆಗುವ ಸಾಧ್ಯತೆಯೂ ಇರುತ್ತದೆ. ಮೂರನೇ ವಿಧಾನವಾದ ಜೀವವಿಮೆಗಳ ವಿಷಯಕ್ಕೆ ಬಂದರೆ ಅವಂತೂ ದೀರ್ಘಕಾಲದ ಯೋಜನೆಗಳು. ಲಾಭ ಬಹಳ ಕಮ್ಮಿ.


ನಾಲ್ಕನೇ ವಿಧಾನವಾದ ಚಿನ್ನ ಖರೀದಿ ವಿಷಯಕ್ಕೆ ಬರೋಣ. ಇದು ಅತ್ಯಂತ ಬೆಸ್ಟ್ ವೇ. ಚಿನ್ನವನ್ನು ಅತ್ಯಂತ ಸುರಕ್ಷಿತ ಹೂಡಿಕೆ ಅಂತಾ ಜನಸಾಮಾನ್ಯರು, ಆರ್ಥಿಕ ತಜ್ಞರು ಮಾತ್ರವಲ್ಲ, ಸರ್ಕಾರಗಳು ಕೂಡ ಪರಿಗಣಿಸಿವೆ. ಹೇಗೆಂದರೆ ಉದಾಹರಣೆಗೆ ಸ್ಟಾಕ್ ಮಾರ್ಕೆಟ್ ಅಥವಾ ಮ್ಯುಚ್ಯುಯಲ್ ಫಂಡ್ ಏರಲೂ ಬಹುದು ಬೀಳಲೂ ಬಹುದು. ಆದರೆ ಚಿನ್ನದ ಬೆಲೆಯಲ್ಲಿ ಏರಿಕೆ ಜೊತೆಗೆ ಸ್ಥಿರತೆ ಕೂಡ ಇರುತ್ತದೆ.


ಇದನ್ನೂ ಓದಿ- ಫೆಂಗಲ್ ಚಂಡಮಾರುತದ ಎಫೆಕ್ಟ್: ಆಕಾಶದತ್ತ ಮುಖ ಮಾಡಿದ ತರಕಾರಿ ಬೆಲೆಗಳು!


ಚಿನ್ನದ ಗ್ರೋಥ್ ರೆಟ್ ವಾರ್ಷಿಕ 30-31% ಇದೆ. ಅದೇ ಸ್ಟಾಕ್ ಮಾರ್ಕೆಟ್ ಗ್ರೋಥ್ ರೆಟ್ 28 % ಇದೆ. ಅಂದರೆ ಎಲ್ಲವೂ ಚೆನ್ನಾಗಿದ್ದರೂ ಸ್ಟಾಕ್ ಮಾರ್ಕೆಟ್ ವ್ಯವಹಾರಕ್ಕಿಂತಲೂ ಚಿನ್ನದ ಖರೀದಿ ಮಾಡುವುದು ಉಳಿತಾಯ ಮಾಡುವುದೇ ಉತ್ತಮ ಎನ್ನುವುದು ಇದರಿಂದ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ. ಇನ್ನೊಂದು ವಿಷಯವನ್ನು ಗಮನದಲ್ಲಿ ಇಟ್ಟಿಕೊಳ್ಳಬೇಕು. ತಜ್ಞರ ಪ್ರಕಾರ 10ಗ್ರಾಂ ಚಿನ್ನದ ಬೆಲೆ ಒಂದು ಲಕ್ಷ ಮುಟ್ಟುವ ಸಾಧ್ಯತೆ ಇದೆ ಎಂತಲೂ ಹೇಳಲಾಗುತ್ತದೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.