ಆನ್‌ಲೈನ್ - ಆಫ್‌ಲೈನ್ ಮಾರಾಟ ಅತಿವೇಗ, ಕಿರಾಣಿ ಅಂಗಡಿಗಳಿಗೆ ಕುತ್ತು..!

Quick commerce effects : ಈ ಹಿಂದಿನ ದಿನಗಳು ಹೇಗಿದ್ದವು ಅಂದ್ರೆ, ಮನೆಯ ಪಕ್ಕದಲ್ಲಿ ಮತ್ತು ದಾರಿಗಳುದ್ದಕ್ಕೂ ನಮಗೆ ಬೇಕಾಗುವ ಸಾಮಗ್ರಿಗಳು ಕೈಗೆಟಕುವ ದರದಲ್ಲಿ ಕಿರಾಣಿ ಅಂಗಡಿಗಳಲ್ಲಿ ದೊರಕುತ್ತಿದ್ದವು. ಅಕ್ಕಿ, ಬೆಳೆ, ಎಣ್ಣೆ, ಬೆಲ್ಲ, ಹೀಗೆ ಅನೇಕ ಸಾಮಾಗ್ರಿಗಳನ್ನು ಅಲ್ಲಿಯೇ ಖರೀದಿ ಮಾಡುತ್ತಿದ್ದೇವು.. ವಾರಕ್ಕೊಮ್ಮೆ ಸಂತೆಗೆ ಹೋಗಿ ಅವಶ್ಯಕ ವಸ್ತುಗಳನ್ನ ಮನೆಗೆ ತರುತ್ತಿದ್ದ ದಿನಗಳವು.. ಆದರೆ ಇದೀಗ ಕಿರಾಣಿ ಅಂಗಡಿಗಳಿಗೆ ಕತ್ತರಿ ಬೀಳುವಂತಾಗಿದೆ. ಯಾಕೆ..? ಏನು..? ಕುತೂಹಲ ಇದ್ದಿಯಾ.? ಹಾಗಿದ್ರೆ ಮುಂದೆ ಓದಿ...

Written by - Krishna N K | Last Updated : Dec 5, 2024, 04:10 PM IST
    • ಬೇಕಾಗುವ ಸಾಮಗ್ರಿಗಳು ಕೈಗೆಟಕುವ ದರದಲ್ಲಿ ಕಿರಾಣಿ ಅಂಗಡಿಗಳಲ್ಲಿ ದೊರಕುತ್ತಿದ್ದವು.
    • ವಾರಕ್ಕೊಮ್ಮೆ ಸಂತೆಗೆ ಹೋಗಿ ಅವಶ್ಯಕ ವಸ್ತುಗಳನ್ನ ಮನೆಗೆ ತರುತ್ತಿದ್ದ ದಿನಗಳವು..
    • ಆದರೆ ಇದೀಗ ಕಿರಾಣಿ ಅಂಗಡಿಗಳಿಗೆ ಕತ್ತರಿ ಬೀಳುವಂತಾಗಿದೆ.
ಆನ್‌ಲೈನ್ - ಆಫ್‌ಲೈನ್ ಮಾರಾಟ ಅತಿವೇಗ, ಕಿರಾಣಿ ಅಂಗಡಿಗಳಿಗೆ ಕುತ್ತು..! title=

Kirana Stores : ಕಾಲಕಳೆದಂತೆಯೆ ವ್ಯಾಪಾರ ಮಾಡುವ ವಿಧಾನಗಳು ಬದಲಾಗುತ್ತಿವೆ. ಮೊದಲು ಬೀದಿ ಬದಿ, ರಸ್ತೆಗಳ ಹತ್ತಿರದ ಅಂಗಡಿಗಳಲ್ಲಿ ನಮಗೆ ಅಗತ್ಯವಿದ್ದಂತಹ ಸಾಮಾಗ್ರಿಗಳು ದೊರಕುತ್ತಿದ್ದವು, ಆದೆರೆ ಈಗಾ ಇ-ಕಾಮರ್ಸ್/ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಕಂಪನಿಗಳು ಇಂಟರ್ನೆಟ್‌ ಪ್ರವೇಶದೊಂದಿಗೆ ಅಡಿಪಾಯವನ್ನು ಇಟ್ಟಿದೆ. ಇದರಲ್ಲಿ ಬೇಕಾದಂತಹ ವಸ್ತುಗಳ ಬೇಡಿಕೆಯನ್ನು ತಿಳಿಸಿದರೆ ಮನೆಗೆ ಬಂದು ಸಾಮಾಗ್ರಿಗಳು ಕೂಡಲೇ ತಲುಪಿಸಿಕೊಡುತ್ತಿವೆ.
 
ದಿನಗಳು ಕಳೆದಂತೆ ಇವುಗಳು ಇನ್ನಷ್ಟು ಅಭಿವೃದ್ಧಿಗೊಂಡು ಕೆಲವೇ ಕೆಲವು ಕ್ಷಣಗಳಲ್ಲಿ ಅವಶ್ಯಕ ಸಾಮಗ್ರಿಗಳು ಮನೆ ಬಾಗಿಲಿಗೆ ತಲುಪಿಸುವಂತಹ ಆ್ಯಪ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. ಜನರ ಆಲೋಚನೆಗಳಿಗೆ ಅನುಗುಣವಾಗಿ ಅವರ ಅವಶ್ಯಕತೆಗಳನ್ನು ಸದುಪಯೋಗಿಸಲು ಮುಂದಾದವು. ಅತಿಬೇಗನೆ ಸರುಕುಗಳನ್ನು ರವಾನಿಸುತ್ತೇವೆ... ಎಂದು ಹೇಳಿ ತನ್ನ ವ್ಯಾಪ್ತಿಯನ್ನು ವಿಸ್ತಿರಿಸಿಕೊಳ್ಳುತ್ತಾ ಬಂದಿದೆ. 

ಇದನ್ನೂ ಓದಿ:ಶಿವಮೊಗ್ಗದಲ್ಲಿ 50 ಸಾವಿರ ಗಡಿ ದಾಟಿದ ಅಡಿಕೆ ಧಾರಣೆ; ಇಂದಿನ ದರ ಹೇಗಿದೆ?

ಇಂದು MRP ಬೆಲೆಗಳಿಕ್ಕಿಂತ ಕಡಿಮೆ ದರಕ್ಕೆ ಸಾಮಗ್ರಿಗಳು ದೊರಕುತ್ತಿದ್ದು ಜನರು ಅಧಿಕವಾಗಿ ಇವುಗಳ ಮೊರೆಹೋಗುತ್ತಿದ್ದಾರೆ. ಹಾಗೆಯೇ ಡೆಲವರಿ ಶುಲ್ಕಗಳಿಲ್ಲದೆ ವಿತರಿಸುತ್ತಿರುವುದು ಜನರಿಗೆ ಲಾಭದಾಯಕವಾಗಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳನ್ನು ಕಂಡಿದ್ದು ನಮ್ಮ ದೇಶ ಅಂತ ಹೇಳಬಹುದು.. ಏಕೆಂದರೆ ಜನಸಂಖ್ಯೆಗೆ ಹೋಲಿಸಿದರೆ 1.3 ಕೋಟಿ ಕಿರಾಣಿ ಅಂಗಡಿಗಳಿವೆ... ಒಂದು ಕೋಟಿ ಅಂಗಡಿಗಳು ಹಳ್ಳಿ ಮತ್ತು ಸಣ್ಣ ಪುಟ್ಟ ಗ್ರಾಮಗಳಲ್ಲಿವೆ.

ದೇಶದಲ್ಲಿ ಅಮೆಜಾನ್‌, ಫ್ಲಿಪ್‌ಕಾರ್ಟನಿಂದ ಹಿಡಿದು 10 ನಿಮಷಗಳಲ್ಲಿ ಜನರಿಗೆ ಬೇಕಾದಂತಹ ವಸ್ತುಗಳನ್ನು ತಲುಪಿಸುವಂತಹ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಪ್‌ಗಳಾದ ಬ್ಲಿಂಕಿಟ್‌, ಇನ್‌ಸ್ಟಾಮಾರ್ಟ್‌, ಜಿಪ್ಟೋ, ಬಿಗ್‌ಬಾಸ್ಕೆಟ್‌, ನೌ ನಂತಹ ಹಲವಾರು ಕಂಪನಿಗಳು ಕ್ಷಣಾರ್ಧದಲ್ಲಿ ವೃದ್ಧಿಯಾಗುತ್ತಿದೆ. ಇದಕ್ಕೆ ಹೋಲಿಸಿದರೆ ಕಿರಾಣಿಗಳ ಬೆಳವಣಿಗೆಯಂತೂ ತೀರಾ ಕಡಿಮೆಯಾಗಿದೆ.

ಇದನ್ನೂ ಓದಿ:ಫೆಂಗಲ್ ಚಂಡಮಾರುತದ ಎಫೆಕ್ಟ್: ಆಕಾಶದತ್ತ ಮುಖ ಮಾಡಿದ ತರಕಾರಿ ಬೆಲೆಗಳು!

ಇದೇ ಕಾರಣಕ್ಕಾಗಿ ಅನೇಕ ಅಂಗಡಿಗಳು ಗ್ರಾಹಕರು ಬರದೇ ಮುಚ್ಚುವ ಪರಿಸ್ಥಿತಿ ಎದುರಿಸುತ್ತಿವೆ. ಹೀಗಾಗಿ ಲಾಭದ ಪಾಲು ಕಡಿಮೆ ಆಗಿರುವುದರಿಂದ ಮುಚ್ಚುವ ಹಂತಕ್ಕೆ ತಲುಪಿದೆ. ಇದು ಅಲ್ಲದೆ, ಕೋವಿಡ್‌ ಆಗಮನ ಇಂದಿನವರೆಗೂ ಕಿರಾಣಿ ಅಂಗಡಿಗಳಿಗೆ ಹೊಡೆತ ಬಿದ್ದಿದೆ. ಒಂದೇ ವರ್ಷದಲ್ಲಿ 2 ಲಕ್ಷ ಅಂಗಡಿಗಳು ಬಂದ್‌ ಆಗಿವೆ. ಅಖಿಲ ಭಾರತ ಗ್ರಾಹಕ ವಸ್ತುಗಳ ಪೂರೈಕೆ ಸಂಘಟನೆ ನಡೆಸಿದ ಅಧ್ಯಯನದಿಂದ ಈ ಮಾಹಿತಿ ತಿಳಿದುಬಂದಿದೆ.

ಇಷ್ಟೆಲ್ಲಾ ಆದರೂ ಕಿರಾಣಿ ಅಂಗಡಿಗಳು ಸಂಪೂರ್ಣವಾಗಿ ಇಲ್ಲವೆಂದೆನಿಲ್ಲಾ ಯಾಕೆಂದರೆ, ಶೇಕಡಾ 85ರಷ್ಟು ವ್ಯಾಪಾರ ವಹಿವಾಟು ಇಂದಿಗೂ ನಡೆಯುಯತ್ತಿದೆ. ಮುಂದಿನ ದಿನಗಳಲ್ಲಿ ಕಿರಾಣಿ ಅಂಗಡಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚು. ಈ ಕುರಿತು ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾರಾಟದ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಎಐಸಿಪಿಡಿಎಫ್‌ ರಾಷ್ಟೀಯ ಅಧ್ಯಕ್ಷ ಧೈರ್ಯಶೀಲ್‌ ಪಾಟೀಲ್‌ ಒತ್ತಾಯಿಸಿದ್ದಾರೆ. ಅದೇ ರೀತಿಯಿಂದಾಗಿ ಆಫ್‌ಲೈನ್‌ ಮತ್ತು ಆನ್‌ಲೈನ್‌ ಮಾರಾಟದ ವ್ಯವಸ್ಥೆಯನ್ನು ರೂಪಿಸುವ ಸಲುವಾಗಿ ಮಸೂದೆಯನ್ನು ತರಲು ಇದರ ಅಂಗವಾಗಿ ಕೇಂದ್ರ ಸರ್ಕಾರವೂ ಪ್ರಯತ್ನ ನಡೆಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News