ನವದೆಹಲಿ: BH-Series System - ನಿಮ್ಮ ವಾಹನದ ಮೂಲಕ ನೀವೂ ಕೂಡ ಒಂದು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಪದೇ ಪದೇ ಪ್ರಯಾಣ  ಬೆಳೆಸುತ್ತಿದ್ದಾರೆ ಇನ್ಮುಂದೆ ನೀವು ಸಂಬಂಧಪಟ್ಟ RTO (Regional transport office)ಗೆ ಹೋಗಿ ನಿಮ್ಮ ವಾಹನವನ್ನು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಹೌದು, ಭಾರತ ಸರ್ಕಾರವು ವಾಹನ ನೋಂದಣಿಗೆ ರಾಷ್ಟ್ರೀಯ ನೋಂದಣಿಗೆ ವ್ಯವಸ್ಥೆ ಮಾಡಿದೆ. ಇದರಿಂದ ಇದೀಗ ವಾಹನ ಹೊಂದಿರುವವರು ತಮ್ಮ ವಾಹನಗಳ ಮೇಲೆ 'BH-Series' ಸಂಖ್ಯೆಯನ್ನು ಹಾಕಲು ಸಾಧ್ಯವಾಗಲಿದೆ. ಈ ಸರಣಿಯ ಅಡಿಯಲ್ಲಿ ನೋಂದಾಯಿಸುವಾಗ, ವಾಹನವು ಬೇರೆ ಬೇರೆ ರಾಜ್ಯಗಳಿಗೆ ಹೋದರೆ ಅದನ್ನು ಪುನಃ ನೋಂದಾಯಿಸುವ ಅಗತ್ಯವಿಲ್ಲ.


COMMERCIAL BREAK
SCROLL TO CONTINUE READING

ಕಮರ್ಷಿಯಲ್ ವಾಹನಗಳಿಗೆ ದೊಡ್ಡ ಲಾಭ
ವಿವಿಧ ರಾಜ್ಯಗಳ ನಡುವೆ ವ್ಯಾಪಾರ ಮಾಡುವ ವಾಣಿಜ್ಯ ವಾಹನ ಚಾಲಕರಿಗೆ ಈ ಹೊಸ ವ್ಯವಸ್ಥೆಯಿಂದ ಲಾಭವಾಗಲಿದೆ. ಬಿಎಚ್ ಸರಣಿಯು ಅವರಿಗೆ ದೇಶದ ವ್ಯಾಪಾರಿ ಮಾನ್ಯತೆಯನ್ನು ಒದಗಿಸುತ್ತದೆ. ಅಲ್ಲದೆ, ಈ ವ್ಯವಸ್ಥೆಯು ಖಾಸಗಿ ವಾಹನ ಚಾಲಕರಿಗೆ ತಮ್ಮ ವಾಹನಗಳನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಬೇಕಾದರೆ ಅಥವಾ ಬಂದು ಹೋಗುತ್ತಿರುವವರಿಗೆ ಬಹಳ ಉಪಯೋಗಕಾರಿ ಸಾಬೀತಾಗಲಿದೆ. ಈ ನೋಂದಣಿಯ ನಂತರ, ವಿವಿಧ ರಾಜ್ಯಗಳಲ್ಲಿ ವಾಹನವನ್ನು ನೋಂದಾಯಿಸುವ ಅಗತ್ಯವು ಕೊನೆಗೊಳ್ಳಲಿದೆ.


ಇದನ್ನೂ ಓದಿ-Driving License ಬಗ್ಗೆ ಬಿಗ್ ನ್ಯೂಸ್ : ಈಗ ಟೆಸ್ಟ್ ನೀಡದೆ ಸಿಗಲಿದೆ 'ಡ್ರೈವಿಂಗ್ ಲೈಸನ್ಸ್' ಸರ್ಕಾರದ ಹೊಸ ನಿಯಮ!


ಏನಿದು BH-Series?
ಈ ಕುರಿತು ಈಗಾಗಲೇ ಸ್ಪಷ್ಟಪಡಿಸಿರುವ ಕೇಂದ್ರ ಸರ್ಕಾರ, BH-ಸರಣಿ ನೋಂದಣಿ ವಾಹನ ಹೊಂದಿದವರ ಇಚ್ಛೆ ಮತ್ತು ಆಯ್ಕೆಯನ್ನು ಅವಲಂಬಿಸಿದೆ ಎಂದು ಹೇಳಿದೆ. ಇದರರ್ಥ ಇದನ್ನು ಮಾಡಬೇಕು ಎಂಬುದು ಕಡ್ಡಾಯವಲ್ಲ. ಸರ್ಕಾರವು ಪರಿಚಯಿಸಿರುವ ಭಾರತ್ ಸರಣಿ ನೋಂದಣಿ ಅಂಕದ ಸ್ವರೂಪವು 'YY BH #### XX' ಆಗಿರುತ್ತದೆ. ಸರ್ಕಾರದ ಪ್ರಕಾರ, 'YY' ಮೊದಲ ನೋಂದಣಿಯ ವರ್ಷವನ್ನು ಸೂಚಿಸುತ್ತದೆ, ಆದರೆ 'BH' ಭಾರತ್ ಸರಣಿಯ ಕೋಡ್ ಆಗಿರುತ್ತದೆ. ಅದೇ ರೀತಿ, '####' 0000 ರಿಂದ 9999 ರವರೆಗಿನ ಯಾದೃಚ್ಛಿಕ ಸಂಖ್ಯೆಯಾಗಿರುತ್ತದೆ ಮತ್ತು 'XX' ಅಕ್ಷರಗಳ ನಡುವೆ ಇರುತ್ತದೆ (AA ನಿಂದ ZZ).


ಇದನ್ನೂ ಓದಿ-Driving License : ಈಗ ನೀವು RTO ಕಚೇರಿಗೆ ಹೋಗಿ ಚಾಲನಾ ಪರೀಕ್ಷೆ ನೀಡುವ ಅಗತ್ಯವಿಲ್ಲ! DL ಅನ್ನು ಕೇವಲ ಒಂದು ಕ್ಲಿಕ್‌ನಲ್ಲಿ ಪಡೆಯಬಹುದು!


ಯಾರಿಗೆ ಇದರಿಂದ ಲಾಭ?
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ಒಬ್ಬ ವ್ಯಕ್ತಿಯು (Vehicle Owner)ತನ್ನ ವಾಹನವನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆಗೆದುಕೊಂಡು ಹೋದರೆ, ನಂತರ ಆತ ತನ್ನ ವಾಹನವನ್ನು (Vehicle) 1 ವರ್ಷದೊಳಗೆ ಮರು ನೋಂದಾಯಿಸಿಕೊಳ್ಳಬೇಕು. ದೇಶದಲ್ಲಿ, ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ಜನರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರಯಾಣಿಸುತ್ತಾರೆ. ವಿಶೇಷವಾಗಿ ದೊಡ್ಡ ಮಹಾನಗರಗಳಲ್ಲಿ, ಹೊರ ರಾಜ್ಯಗಳಿಂದ ಸಾಕಷ್ಟು ಜನರು ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಸ್ಥಳೀಯ ಆರ್‌ಟಿಒನ ಕಠಿಣ ನಿಯಮಗಳಿಂದಾಗಿ ಈ ಉದ್ಯೋಗಿಗಳು ಅಥವಾ ವ್ಯಾಪಾರಿಗಳು ತಮ್ಮ ವಾಹನಗಳನ್ನು ಆ ರಾಜ್ಯಗಳಿಗೆ ತೆಗೆದುಕೊಂಡು ಹೋಗಲು ಹಿಂದೇಟು ಹಾಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, BH-Series ನ ಹೊಸ ವ್ಯವಸ್ಥೆಯು ಅಂತಹ ಜನರಿಗೆ ಹೆಚ್ಚಿನ ಉಪಯೋಗವನ್ನು ನೀಡಲಿದೆ. ಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ, ಆಗಸ್ಟ್ 26 ರಂದು, ಭಾರತ್ ಸರಣಿಯಲ್ಲಿ ಹೊಸ ವಾಹನವನ್ನು ನೋಂದಾಯಿಸಲು ಸಚಿವಾಲಯದಿಂದ ಅಧಿಸೂಚನೆ ಹೊರಡಿಸಲಾಗಿದೆ.


ಇದನ್ನೂ ಓದಿ-Driving Licence: ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದುಹೋಗಿದೆಯೇ? ಚಿಂತೆಬಿಡಿ, ಈ ರೀತಿ ಮತ್ತೆ ಪಡೆಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.