Driving Licence: ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದುಹೋಗಿದೆಯೇ? ಚಿಂತೆಬಿಡಿ, ಈ ರೀತಿ ಮತ್ತೆ ಪಡೆಯಿರಿ

ನಿಮ್ಮ ಒರಿಜಿನಲ್ ಡ್ರೈವಿಂಗ್ ಲೈಸೆನ್ಸ್ ಕಳೆದುಹೋದರೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅಪ್ಲೈ ಮಾಡುವ ಮೂಲಕ ನಿಮ್ಮ ನಕಲಿ ಪರವಾನಗಿಯನ್ನು ನೀವು ಪಡೆಯಬಹುದು.

Written by - Yashaswini V | Last Updated : Jun 17, 2021, 09:17 AM IST
  • ಡ್ರೈವಿಂಗ್ ಲೈಸೆನ್ಸ್ ಕೂಡ ಒಂದು ಪ್ರಮುಖ ದಾಖಲೆಯಾಗಿದೆ
  • ಡಿಎಲ್ ಇಲ್ಲದೆ ವಾಹನ ಚಲಾಯಿಸಲು ಸಾಧ್ಯವಿಲ್ಲ
  • ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವವರಿಗೆ ದಂಡ ವಿಧಿಸಬಹುದು
Driving Licence: ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದುಹೋಗಿದೆಯೇ? ಚಿಂತೆಬಿಡಿ, ಈ ರೀತಿ ಮತ್ತೆ ಪಡೆಯಿರಿ title=
ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದುಹೋಗಿದೆಯೇ? ಅದನ್ನು ಈ ರೀತಿ ಸುಲಭವಾಗಿ ಪಡೆಯಿರಿ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಚಾಲನಾ ಪರವಾನಗಿ ಎಂದರೆ ಡ್ರೈವಿಂಗ್ ಲೈಸೆನ್ಸ್ ಕೂಡ ಒಂದು ಪ್ರಮುಖ ದಾಖಲೆಯಾಗಿದೆ. ಡಿಎಲ್ ಇಲ್ಲದೆ ವಾಹನ ಚಲಾಯಿಸಲು ಸಾಧ್ಯವಿಲ್ಲ. ಡ್ರೈವಿಂಗ್ ಲೈಸೆನ್ಸ್ (Driving Licence) ಇಲ್ಲದೆ ವಾಹನ ಚಲಾಯಿಸುವವರಿಗೆ ದಂಡ ವಿಧಿಸಬಹುದು. ವಾಸ್ತವವಾಗಿ, ಹಲವು ಬಾರಿ ಇತರ ವಸ್ತುಗಳಂತೆ ಚಾಲನಾ ಪರವಾನಗಿ ಕಳೆದುಹೋಗುತ್ತದೆ, ಇದರಿಂದಾಗಿ ಅವರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಈಗ ಚಿಂತೆ ಮಾಡುವ ಅಗತ್ಯವಿಲ್ಲ. ಈಗ ಡಿಎಲ್ ಕಳೆದುಹೋದರೆ ಅದನ್ನು ಮತ್ತೆ ಪಡೆಯಬಹುದು.

ನೀವು ನಕಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು:
ಮೂಲ ಡ್ರೈವಿಂಗ್ ಲೈಸೆನ್ಸ್ (Driving Licence) ಕಳೆದುಹೋದರೆ ಅಥವಾ ಹಾನಿಗೊಳಗಾದರೆ, ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ನೀವು ನಿಮ್ಮ ನಕಲಿ ಪರವಾನಗಿಯನ್ನು ಪಡೆಯಬಹುದು. ಕೆಳಗೆ ನೀಡಲಾದ ವಿವರಗಳಲ್ಲಿ, ಮತ್ತೆ ಪರವಾನಗಿ ಪಡೆಯುವುದು ಹೇಗೆ ಎಂಬ ಮಾಹಿತಿಯನ್ನು ನೀಡಲಾಗಿದೆ.

ಇದನ್ನೂ ಓದಿ- Driving License: ಜುಲೈ 1 ರಿಂದ ಚಾಲನಾ ಪರವಾನಗಿಗಾಗಿ ಹೊಸ ನಿಯಮ, ಈಗ ಟೆಸ್ಟ್ ಇಲ್ಲದೆ ಸಿಗುತ್ತೆ DL

ಆನ್‌ಲೈನ್‌ನಲ್ಲಿ ನಕಲಿ ಡಿಎಲ್‌ಗಾಗಿ  ಈ ರೀತಿ ಅಪ್ಲೈ ಮಾಡಿ:
>> ಮೊದಲಿಗೆ ರಾಜ್ಯ ಸಾರಿಗೆ ಇಲಾಖೆಯ ವೆಬ್‌ಸೈಟ್‌ಗೆ ಹೋಗಿ.
>> ಇಲ್ಲಿ ವಿನಂತಿಸಿದ ವಿವರಗಳನ್ನು ನಮೂದಿಸಿ ಮತ್ತು ಎಲ್ಎಲ್‌ಡಿ  (LLD) ಫಾರ್ಮ್ ಅನ್ನು ಭರ್ತಿ ಮಾಡಿ.
>> ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ಅದರಿಂದ ಮುದ್ರಣವನ್ನು ತೆಗೆದುಕೊಳ್ಳಿ.
>> ಬಳಿಕ ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
>> ಇದನ್ನು ಮಾಡಿದ ನಂತರ, ಈಗ ನೀವು ಈ ಫಾರ್ಮ್ ಮತ್ತು ನಿಮ್ಮ ದಾಖಲೆಗಳನ್ನು ಆರ್‌ಟಿಒ ಕಚೇರಿಗೆ ಸಲ್ಲಿಸಬೇಕು. ಇವುಗಳನ್ನು ಆನ್‌ಲೈನ್‌ನಲ್ಲಿಯೂ ಸಲ್ಲಿಸಬಹುದು.
>> ಚಾಲನಾ ಪರವಾನಗಿಯ (DL) ಆನ್‌ಲೈನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ 30 ದಿನಗಳ ನಂತರ, ನಕಲಿ ಚಾಲನಾ ಪರವಾನಗಿ ಅಂಚೆ ಮೂಲಕ ನಿಮ್ಮ ವಿಳಾಸಕ್ಕೆ ಬರುತ್ತದೆ.

ಇದನ್ನೂ ಓದಿ- Driving License ಸಂಬಂಧಿಸಿದ ಸಿಹಿ ಸುದ್ದಿ! ಮನೆಯಲ್ಲಿ ಕುಳಿತು ಮಾಡಿ DL, RC ಕೆಲಸ: ಇಲ್ಲಿವೆ ಹೊಸ ಮಾರ್ಗಸೂಚಿಗಳು

ಆಫ್‌ಲೈನ್‌ನಲ್ಲಿ ಈ ರೀತಿ ಅಪ್ಲೈ ಮಾಡಿ:
- ನಕಲಿ ಚಾಲನಾ ಪರವಾನಗಿಯನ್ನು ಆಫ್‌ಲೈನ್‌ನಲ್ಲಿ ಪಡೆಯಲು ನೀವು ಮೂಲ ಚಾಲನಾ ಪರವಾನಗಿಯನ್ನು ನೀಡಿದ ಆರ್‌ಟಿಒಗೆ ಹೋಗಬೇಕಾಗುತ್ತದೆ.
- ಇಲ್ಲಿ ನೀವು ಎಲ್‌ಎಲ್‌ಡಿ ಫಾರ್ಮ್ ತೆಗೆದುಕೊಂಡು ಅದನ್ನು ಸಲ್ಲಿಸಬೇಕು.
- ಈ ಫಾರ್ಮ್ನೊಂದಿಗೆ ನೀವು ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
- ಈ ಸಂಪೂರ್ಣ ಪ್ರಕ್ರಿಯೆಯ ನಂತರ, 30 ದಿನಗಳಲ್ಲಿ ಪೋಸ್ಟ್ ಮೂಲಕ ನಿಮ್ಮ ವಿಳಾಸದಲ್ಲಿ ನಕಲಿ ಚಾಲನಾ ಪರವಾನಗಿಯನ್ನು ನೀವು ಪಡೆಯುತ್ತೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News