ಆಧಾರ್ನಲ್ಲಿ ದೊಡ್ಡ ಬದಲಾವಣೆಗೆ ಮುಂದಾದ ಯುಐಡಿಎಐ
ಪ್ರತಿ 10 ವರ್ಷಗಳಿಗೊಮ್ಮೆ ಯಾವುದೇ ವ್ಯಕ್ತಿಯು ತಮ್ಮ ಇಚ್ಚೆಯ ಮೇರೆಗೆ ಬಯೋಮೆಟ್ರಿಕ್ಸ್ ಮತ್ತು ಜನಸಂಖ್ಯಾ ವಿವರಗಳನ್ನು ನವೀಕರಿಸಬಹುದು. ಇದು ಕಡ್ಡಾಯ ನಿಯಮವಲ್ಲ, ಸಲಹೆ ಅಷ್ಟೇ ಎಂದು ಯುಐಡಿಎಐ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
Aadhaar Update: ಪ್ರತಿಯೊಬ್ಬ ಭಾರತೀಯರ ಅತ್ಯಂತ ಪ್ರಮುಖ ದಾಖಲೆ ಆಗಿರುವ ಆಧಾರ್ ಕಾರ್ಡ್ ವ್ಯಾಪ್ತಿಯನ್ನು ಹೆಚ್ಚಿಸಲು ಸಿದ್ಧತೆ ನಡೆಯುತ್ತಿದೆ. ಆಧಾರ್ ವಿತರಿಸುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಯಾ ರಾಜ್ಯಗಳಲ್ಲಿ ಸರ್ಕಾರಿ ವ್ಯಾಪ್ತಿಯನ್ನು ಹೆಚ್ಚಿಸಲು ರಾಜ್ಯಗಳನ್ನು ಕೇಳಿದೆ. ಇದರಿಂದ ಸರ್ಕಾರದ ಹಣದ ವ್ಯರ್ಥವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ಇದಕ್ಕಾಗಿ ಸರ್ಕಾರವು ಹೊಸ ಉಪಕ್ರಮವನ್ನು ಆರಂಭಿಸಲು ಚಿಂತನೆ ನಡೆಸಿದ್ದು, ಇದರ ಅಡಿಯಲ್ಲಿ, ಯುಐಡಿಎಐ ಪ್ರತಿ 10 ವರ್ಷಗಳಿಗೊಮ್ಮೆ ತಮ್ಮ ಆಧಾರ್ ಮತ್ತು ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಲು ಜನರನ್ನು ಪ್ರೋತ್ಸಾಹಿಸುತ್ತದೆ. ಈ ಉಪಕ್ರಮವು ನಕಲಿ ಆಧಾರ್ ಹಾವಳಿಯನ್ನು ತಪ್ಪಿಸಲಿದೆ ಹಾಗೂ ಜನರ ಡಾಟಾವನ್ನು ಸಂಪೂರ್ಣವಾಗಿ ಸುರಕ್ಷಿತವಾಗಿರಿಸುತ್ತದೆ. ಆದಾಗ್ಯೂ, ಆಧಾರ್ ಮತ್ತು ಬಯೋಮೆಟ್ರಿಕ್ ನವೀಕರಣವು ಗ್ರಾಹಕರ ಆಯ್ಕೆಯಾಗಿರಲಿದೆಯೇ ಹೊರತು, ಇದು ಕಡ್ಡಾಯವಲ್ಲ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.
ಇದನ್ನೂ ಓದಿ- Affordable Cars: 4 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅದ್ಭುತ ಕಾರುಗಳಿವು
ಪ್ರತಿ 10 ವರ್ಷಗಳಿಗೊಮ್ಮೆ ಯಾವುದೇ ವ್ಯಕ್ತಿಯು ತಮ್ಮ ಇಚ್ಚೆಯ ಮೇರೆಗೆ ಬಯೋಮೆಟ್ರಿಕ್ಸ್ ಮತ್ತು ಜನಸಂಖ್ಯಾ ವಿವರಗಳನ್ನು ನವೀಕರಿಸಬಹುದು. ಇದು ಕಡ್ಡಾಯ ನಿಯಮವಲ್ಲ, ಸಲಹೆ ಅಷ್ಟೇ ಎಂದು ಯುಐಡಿಎಐ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, 5-15 ವರ್ಷ ವಯಸ್ಸಿನ ಮಕ್ಕಳು ತಮ್ಮ ಬಯೋಮೆಟ್ರಿಕ್ ಡೇಟಾವನ್ನು ನವೀಕರಿಸಲು ಅನುಮತಿಸಲಾಗಿದೆ. 70 ವರ್ಷ ಮೇಲ್ಪಟ್ಟ ವ್ಯಕ್ತಿಯು ತನ್ನ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವ ಅಗತ್ಯವಿಲ್ಲ.
ಇದನ್ನೂ ಓದಿ- Bank Locker Rules: ಬ್ಯಾಂಕ್ ಲಾಕರ್‌ಗೆ ಸಂಬಂಧಿಸಿದ ಪ್ರಮುಖ ನಿಯಮಗಳಲ್ಲಿ ಮಹತ್ವದ ಬದಲಾವಣೆ
ಆಧಾರ್ ಕೇಂದ್ರದಿಂದ ನವೀಕರಣಗಳನ್ನು ಮಾಡಬಹುದು:
ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಲು ಬಯಸಿದರೆ, ನೀವು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅದನ್ನು ಮಾಡಬಹುದು. ಇದರ ಹೊರತಾಗಿ, ಆಧಾರ್‌ನ ದುರ್ಬಳಕೆಯನ್ನು ತಡೆಯಲು, ಯುಐಡಿಎಐ ಅದನ್ನು ಲಾಕ್ ಮಾಡಲು ಶಿಫಾರಸು ಮಾಡುತ್ತದೆ. ಆಧಾರ್ ಸಂಖ್ಯೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಿ ಅನ್ ಲಾಕ್ ಮಾಡಿರುವುದು ವಿಶೇಷ. ಇದರೊಂದಿಗೆ, ಕಾರ್ಡ್ ಹೊಂದಿರುವವರ ಎಲ್ಲಾ ಡೇಟಾ ಸುರಕ್ಷಿತವಾಗಿ ಉಳಿಯುತ್ತದೆ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.