Income Tax Slab : ಪ್ರತಿ ವರ್ಷ, ದೇಶದ ವೇತನ ವರ್ಗವು ಆದಾಯ ತೆರಿಗೆಯಲ್ಲಿ ಪರಿಹಾರ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿರುತ್ತದೆ. ಕಳೆದ ವರ್ಷವೂ ಜನರು ಹಣಕಾಸು ಸಚಿವರಿಂದ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ಮಾಡುವಂತೆ  ಒತ್ತಾಯಿಸಿದ್ದರು. ಆದರೆ ಈ ಬಾರಿ ತೆರಿಗೆ ನಿಯಮಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ದೊಡ್ಡ ಘೋಷಣೆಯನ್ನೇ ನಿರೀಕ್ಷಿಸಲಾಗಿದೆ. ಈ ಮಧ್ಯೆ,   ಮಧ್ಯಮ ವರ್ಗದವರಿಗೆ ಪ್ರಮುಖ ತೆರಿಗೆ ವಿನಾಯಿತಿ ನೀಡಲು ಸರ್ಕಾರವು ಸಿದ್ದತೆ ನಡೆಸುತ್ತಿದೆ ಎನ್ನಲಾಗಿದೆ. ವಾರ್ಷಿಕ ಆದಾಯ 15 ಲಕ್ಷ ರೂ.ವರೆಗೆ ಇರುವವರಿಗೆ ಈ ಪರಿಹಾರ ಸಿಗುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ಫೆಬ್ರವರಿ 1ರಂದು ಬಜೆಟ್ ಘೋಷಣೆ :  
ಫೆಬ್ರವರಿ 1, 2025 ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಸರ್ಕಾರವು ತೆರಿಗೆದಾರರಿಗೆ ಪರಿಹಾರವನ್ನು ಘೋಷಿಸಬಹುದು ಎಂದು ವರದಿ ಹೇಳಿದೆ. ಆದಾಯ ತೆರಿಗೆಯಲ್ಲಿ ಭಾರೀ ಪರಿಹಾರ ನೀಡುವ ನಿರ್ಧಾರವು ಆರ್ಥಿಕತೆಯನ್ನು ಹೆಚ್ಚಿಸಲು ಮತ್ತು ಹೆಚ್ಚು ಖರ್ಚು ಮಾಡಲು ಜನರನ್ನು ಉತ್ತೇಜಿಸುವ ಯೋಜನೆಯಾಗಿದೆ. ಸರ್ಕಾರ ಈ ಕ್ರಮ ಕೈಗೊಂಡರೆ ಭವಿಷ್ಯದಲ್ಲಿ ಹಣದುಬ್ಬರವನ್ನು ಎದುರಿಸುವುದು ಸುಲಭವಾಗುತ್ತದೆ.


ಇದನ್ನೂ ಓದಿ : ನಂದಿನಿ ಗ್ರಾಹಕರಿಗೆ ಒಂದು ಗುಡ್ ನ್ಯೂಸ್, ಒಂದು ಬ್ಯಾಡ್ ನ್ಯೂಸ್..!


ಜನರು ಬಹಳ ಹಿಂದಿನಿಂದಲೂ ತೆರಿಗೆಗಳ ಬಗ್ಗೆ ದೂರು ನೀಡುತ್ತಿದ್ದಾರೆ. ನಗರಗಳಲ್ಲಿ ವಾಸಿಸುವ ಜನರು ಹೆಚ್ಚುತ್ತಿರುವ ವೆಚ್ಚಗಳು ಮತ್ತು ಹೆಚ್ಚಿನ ತೆರಿಗೆಗಳ ಬಗ್ಗೆ ಬಹಳ ಸಮಯದಿಂದ ದೂರುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ಬದಲಾವಣೆ  ಮಾಡುವ ನಿರೀಕ್ಷೆ ಇದೆ. 2020ರಲ್ಲಿ ಜಾರಿಗೆ ಬಂದ ಹೊಸ ತೆರಿಗೆ ಪದ್ಧತಿಯ ಪ್ರಕಾರ, ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯವು 3 ರಿಂದ 15 ಲಕ್ಷ ರೂಪಾಯಿಗಳ ನಡುವೆ ಇದ್ದರೆ, ಅವನು ಶೇಕಡಾ 5 ರಿಂದ 20 ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ವಾರ್ಷಿಕ ಆದಾಯ 15 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಆದಾಯ ತೆರಿಗೆ ಶೇ.30ಕ್ಕೆ ಏರುತ್ತದೆ.


ಪ್ರಸ್ತುತ, ತೆರಿಗೆದಾರರ ಬಳಿ ಎರಡು ರೀತಿಯ ಆಯ್ಕೆ : 
ಪ್ರಸ್ತುತ ದೇಶದಲ್ಲಿ ತೆರಿಗೆದಾರರು ಎರಡು ರೀತಿಯ ಆಯ್ಕೆಗಳನ್ನು ಹೊಂದಿದ್ದಾರೆ. ನಿಮ್ಮ ಆದಾಯಕ್ಕೆ ಅನುಗುಣವಾಗಿ ಇವುಗಳಲ್ಲಿ ಯಾವುದಾದರೂ ಒಂದನ್ನು ನೀವು ಆಯ್ಕೆ ಮಾಡಬಹುದು. ಮೊದಲನೆಯದ್ದು, ಹಳೆಯ ತೆರಿಗೆ ಪದ್ಧತಿ, ಇದರಲ್ಲಿ ಮನೆ ಬಾಡಿಗೆ ಮತ್ತು ವಿಮೆ ಮುಂತಾದ ಕೆಲವು ವೆಚ್ಚಗಳಿಗೆ ವಿನಾಯಿತಿ ತೆಗೆದುಕೊಳ್ಳಬಹುದು. ಎರಡನೆಯದ್ದು, ಹೊಸ ತೆರಿಗೆ ಪದ್ಧತಿಯಾಗಿದೆ. ಇದರ ಅಡಿಯಲ್ಲಿ, ತೆರಿಗೆ ದರಗಳು ಕಡಿಮೆ, ಆದರೆ ಹೆಚ್ಚಿನ ವಿನಾಯಿತಿಗಳನ್ನು ರದ್ದುಗೊಳಿಸಲಾಗಿದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಷ್ಟು ತೆರಿಗೆ ವಿನಾಯಿತಿ ನೀಡಬೇಕೆಂದು ಇನ್ನೂ ನಿರ್ಧರಿಸಿಲ್ಲ ಎಂದು ವರದಿಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಸದ್ಯಕ್ಕೆ ಈ ಬಗ್ಗೆ ವಿತ್ತ ಸಚಿವಾಲಯ ಅಥವಾ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ದೇಶದ ಆರ್ಥಿಕತೆಯ ಬಗ್ಗೆ ಕಾಳಜಿ ಹೆಚ್ಚುತ್ತಿರುವ ಕಾರಣ ದೇಶದಲ್ಲಿ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಪರಿಗಣಿಸಲಾಗುತ್ತಿದೆ. 2024ರಲ್ಲಿ ಜುಲೈ ಮತ್ತು ಸೆಪ್ಟೆಂಬರ್ ನಡುವಿನ ದೇಶದ ಬೆಳವಣಿಗೆಯ ದರವು ಕಳೆದ ಏಳು ತ್ರೈಮಾಸಿಕಗಳಿಗಿಂತ ಕಡಿಮೆಯಾಗಿದೆ. ಇದಲ್ಲದೇ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚುತ್ತಿದೆ. ಇದರಿಂದ ಜನರ ವೆಚ್ಚ ನಿರಂತರವಾಗಿ ಹೆಚ್ಚುತ್ತಿದೆ. ಅದರ ಪರಿಣಾಮ ಕಾರು, ಗೃಹೋಪಯೋಗಿ ವಸ್ತುಗಳು, ವೈಯಕ್ತಿಕ ಬಳಕೆಯ ವಸ್ತುಗಳ ಮಾರಾಟವೂ ಕಡಿಮೆಯಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.