ಪಿಪಿಎಫ್ ಲೇಟೆಸ್ಟ್ ಅಪ್ಡೇಟ್: ಪಿಪಿಎಫ್ ಅಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಪ್ರಸ್ತುತ ಸಮಯದಲ್ಲಿ ಉತ್ತಮ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ.  ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಆದಾಯವನ್ನು ಗಳಿಸುವುದರ ಜೊತೆ ಜೊತೆಗೆ ಟ್ಯಾಕ್ಸ್ ಅನ್ನು ಉಳಿಸಬಹುದು. ಈ ಯೋಜನೆಯಲ್ಲಿ, ಹೂಡಿಕೆದಾರರು ಸಂಯುಕ್ತ ದರದ ಬಡ್ಡಿಯ ಲಾಭವನ್ನು ಪಡೆಯುತ್ತಾರೆ. ಈ ಯೋಜನೆಯು ಮಾರುಕಟ್ಟೆಯ ಅಪಾಯಗಳಿಂದ ದೂರವಿರುವುದರಿಂದ ಇದು ಸುರಕ್ಷಿತ ಹೂಡಿಕೆ ಆಗಿದೆ. ಈ ಮಹತ್ವದ ಯೋಜನೆಯಲ್ಲಿ ಸರ್ಕಾರ ಇತ್ತೀಚಿಗೆ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಆ ಪ್ರಮುಖ ಬದಲಾವಣೆಗಳ ಬಗ್ಗೆ ತಿಳಿಯೋಣ...


COMMERCIAL BREAK
SCROLL TO CONTINUE READING

ಫಾರ್ಮ್ ಬದಲಾವಣೆ:
ಪಬ್ಲಿಕ್ ಪ್ರಾವಿಡೆಂಟ್ ಫಂಡ್-ಪಿಪಿಎಫ್ ಯೋಜನೆಯಲ್ಲಿ ಹೂಡಿಕೆ ಮಾಡಲು ಮೊದಲು, ಫಾರ್ಮ್-ಎ ಅನ್ನು ಸಲ್ಲಿಸಬೇಕಾಗಿತ್ತು. ಆದರೆ, ಈಗ ಅದರಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು ನಮೂನೆ-ಎ ಬದಲಿಗೆ, ನಮೂನೆ-1 (ಫಾರ್ಮ್-1) ಅನ್ನು ಭರ್ತಿ ಮಾಡಬೇಕಾಗುತ್ತದೆ. ಮತ್ತೊಂದೆಡೆ, ಯೋಜನೆಯ ಮುಕ್ತಾಯದ ನಂತರ, ನೀವು ಅದರಲ್ಲಿ ಫಾರ್ಮ್ ಹೆಚ್ ಬದಲಿಗೆ ಫಾರ್ಮ್-4 ಅನ್ನು ಭರ್ತಿ ಮಾಡಬೇಕಾಗುತ್ತದೆ.


ಇದನ್ನೂ ಓದಿ- Cooking oil price: ಮುಂದಿನ ಒಂದು ವಾರದಲ್ಲಿ ಅಗ್ಗವಾಗಲಿದೆ ಅಡುಗೆಎಣ್ಣೆ


ಸಾಲ ಪಡೆಯುವ ವಿಧಾನದಲ್ಲಿ ಬದಲಾವಣೆ:
ಪಿಪಿಎಫ್ ಖಾತೆಯ ಮೂಲಕ ಸಾಲ ಪಡೆಯುವ ವಿಧಾನವನ್ನು ಸಹ ಬದಲಾಯಿಸಲಾಗಿದೆ. ಈಗ ನೀವು ಎರಡು ವರ್ಷಗಳ ಹಿಂದೆ ಠೇವಣಿ ಮಾಡಿದ ಒಟ್ಟು ಮೊತ್ತದ 25 ಪ್ರತಿಶತದಷ್ಟು ಸಾಲವನ್ನು ಪಡೆಯುತ್ತೀರಿ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಜೂನ್ 2022 ರಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರೆ, ಜೂನ್ 2020 ರಲ್ಲಿ, ಖಾತೆಯಲ್ಲಿ ಠೇವಣಿ ಮಾಡಿದ ಒಟ್ಟು ಮೊತ್ತದ 25 ಪ್ರತಿಶತವನ್ನು ಮಾತ್ರ ಸಾಲವಾಗಿ ನೀಡಲಾಗುತ್ತದೆ. ಇದನ್ನು ಸುಲಭ ಭಾಷೆಯಲ್ಲಿ ಅರ್ಥಮಾಡಿಕೊಳ್ಳಿ, ನೀವು 31ನೇ ಮಾರ್ಚ್ 2022 ರಂದು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದೀರಿ. ಇದಕ್ಕೂ ಎರಡು ವರ್ಷಗಳ ಹಿಂದೆ (ಮಾರ್ಚ್ 31, 2020), ಪಿಪಿಎಫ್ ಖಾತೆಯಲ್ಲಿ 1 ಲಕ್ಷ ರೂಪಾಯಿ ಇದ್ದರೆ, ನೀವು ಅದರಲ್ಲಿ ಶೇಕಡಾ 25 ರಷ್ಟು ಅಂದರೆ 25 ಸಾವಿರ ರೂ.ಗಳನ್ನು ಮಾತ್ರವೇ ಸಾಲವಾಗಿ ಪಡೆಯಬಹುದು. 


ಪಿಪಿಎಫ್ ಖಾತೆಯಲ್ಲಿ ಖಾತೆದಾರರು 15 ವರ್ಷಗಳ ನಂತರವೂ ಹೂಡಿಕೆಯನ್ನು ಮುಂದುವರಿಸಲು ಬಯಸಿದರೆ, ನೀವು ಹಾಗೆ ಮಾಡಬಹುದು. ಅದೇ ಸಮಯದಲ್ಲಿ, 15 ವರ್ಷಗಳ ನಂತರ, ನೀವು ಪ್ರತಿ ಹಣಕಾಸು ವರ್ಷದಲ್ಲಿ ಒಮ್ಮೆ ಮಾತ್ರ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಇದರ ಮೇಲೆ ನೀವು ಮೊದಲಿನ ಅದೇ ಬಡ್ಡಿದರವನ್ನು ಪಡೆಯುತ್ತೀರಿ.


ಇದನ್ನೂ ಓದಿ- PM Kisan: ಪಿಎಂ ಕಿಸಾನ್ ನಿಧಿಯ 12ನೇ ಕಂತಿಗೆ ಸಂಬಂಧಿಸಿದಂತೆ ಬಿಗ್ ನ್ಯೂಸ್


ಗಮನಿಸಬೇಕಾದ ಸಂಗತಿಯೆಂದರೆ, ಈ ಯೋಜನೆಯಡಿಯಲ್ಲಿ, ನೀವು ವರ್ಷದಲ್ಲಿ ಕೇವಲ 1.5 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಲು ಅನುಮತಿಸಲಾಗಿದೆ. ಆದರೆ  ತಿಂಗಳಿಗೊಮ್ಮೆ ಮಾತ್ರ ಪಿಪಿಎಫ್ ಖಾತೆಗೆ ಹಣ ಜಮಾ ಮಾಡಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.