Cooking oil price: ಮುಂದಿನ ಒಂದು ವಾರದಲ್ಲಿ ಅಗ್ಗವಾಗಲಿದೆ ಅಡುಗೆಎಣ್ಣೆ

Edible Oil Price: ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಖಾದ್ಯ ತೈಲದ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದು, ಸಾಮಾನ್ಯ ಜನರ ಬಜೆಟ್ ಹದಗೆಟ್ಟಿದೆ. ಈಗ ಜಾಗತಿಕವಾಗಿ ಖಾದ್ಯ ತೈಲದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಮುಂದಿನ ಒಂದು ವಾರದಲ್ಲಿ ಆಮದು ಮಾಡಿಕೊಳ್ಳುವ ಖಾದ್ಯ ತೈಲದ ಬೆಲೆಯನ್ನು ಲೀಟರ್‌ಗೆ 10 ರೂ.ವರೆಗೆ ಕಡಿತಗೊಳಿಸುವಂತೆ ಎಲ್ಲಾ ಖಾದ್ಯ ತೈಲ ಉತ್ಪಾದನಾ ಕಂಪನಿಗಳಿಗೆ ಸರ್ಕಾರ ಬುಧವಾರ ನಿರ್ದೇಶನ ನೀಡಿದೆ. 

Written by - Yashaswini V | Last Updated : Jul 7, 2022, 06:26 AM IST
  • ಜಾಗತಿಕ ಒತ್ತಡದಲ್ಲಿ ತೈಲ ಬೆಲೆ ಗಣನೀಯವಾಗಿ ಏರಿಕೆಯಾಗಿದೆ
  • ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಖಾದ್ಯ ತೈಲದ ಬೆಲೆಗಳು ಗಗನಕ್ಕೇರಿದ್ದು, ಜನಸಾಮಾನ್ಯರ ಮೇಲೆ ಹೆಚ್ಚು ಪ್ರಭಾವ ಬೀರಿದೆ.
  • ಮುಂದಿನ ಒಂದು ವಾರದಲ್ಲಿ ಅಡುಗೆ ಎಣ್ಣೆ ಬೆಲೆ ಕಡಿಮೆ ಆಗುವ ನಿರೀಕ್ಷೆ
Cooking oil price: ಮುಂದಿನ ಒಂದು ವಾರದಲ್ಲಿ ಅಗ್ಗವಾಗಲಿದೆ ಅಡುಗೆಎಣ್ಣೆ title=
Edible Oil Price Cut

ಮುಂದಿನ ಒಂದು ವಾರದಲ್ಲಿ ಖಾದ್ಯ ತೈಲವು ಅಗ್ಗವಾಗುವ ನಿರೀಕ್ಷೆ:  ಹಣದುಬ್ಬರದಿಂದ ತತ್ತರಿಸಿರುವ ಜನರಿಗೆ ಸರ್ಕಾರದಿಂದ ಗುಡ್ ನ್ಯೂಸ್ ದೊರೆತಿದ್ದು, ಇನ್ನೊಂದು  ವಾರದಲ್ಲಿ ಖಾದ್ಯ ತೈಲ ಬೆಲೆಗಳು ಕಡಿಮೆ ಆಗುವ ನಿರೀಕ್ಷೆಯಿದೆ. ಜಾಗತಿಕವಾಗಿ ಹೇರಳವಾದ ತೈಲ ದಾಸ್ತಾನು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯಿಂದ ಅಕ್ರಮ ಸಂಗ್ರಹಣೆಯ ವಿರುದ್ಧದ ಅಭಿಯಾನಗಳಿಂದ ಇದನ್ನು ನಿರೀಕ್ಷಿಸಲಾಗಿದೆ. ಕೆಲ ದಿನಗಳಿಂದ ಸರ್ಕಾರದ ಮಟ್ಟದಲ್ಲಿ ಅಕ್ರಮ ತೈಲ ಸಂಗ್ರಹಣೆ ವಿರುದ್ಧ ತೀವ್ರ ಪ್ರಚಾರ ನಡೆಯುತ್ತಿದ್ದು, ಮುಂದಿನ ಒಂದು ವಾರದಲ್ಲಿ ಅಡುಗೆ ಎಣ್ಣೆ ಬೆಲೆ ಲೀಟರ್‌ಗೆ 10-12 ರೂ.ಗಳಷ್ಟು ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಖಾದ್ಯ ತೈಲದ ಬೆಲೆಗಳು ಗಗನಕ್ಕೇರಿದ್ದು, ಜನಸಾಮಾನ್ಯರ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಇದೀಗ ಜಾಗತಿಕವಾಗಿ ಖಾದ್ಯ ತೈಲದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಮುಂದಿನ ಒಂದು ವಾರದಲ್ಲಿ ಆಮದು ಮಾಡಿಕೊಳ್ಳುವ ಖಾದ್ಯ ತೈಲದ ಬೆಲೆಯನ್ನು ಲೀಟರ್‌ಗೆ 10 ರೂ.ವರೆಗೆ ಕಡಿತಗೊಳಿಸುವಂತೆ ಎಲ್ಲಾ ಖಾದ್ಯ ತೈಲ ಉತ್ಪಾದನಾ ಕಂಪನಿಗಳಿಗೆ ಸರ್ಕಾರ ಬುಧವಾರ (ಜುಲೈ 6)  ನಿರ್ದೇಶನ ನೀಡಿದೆ. ಅಷ್ಟೇ ಅಲ್ಲ, ದೇಶಾದ್ಯಂತ ಒಂದೇ ಬ್ರಾಂಡ್ ತೈಲದ ಬೆಲೆಯನ್ನು ಏಕರೂಪವಾಗಿ ಇರಿಸುವಂತೆಯೂ ಸರ್ಕಾರ ಕೇಳಿಕೊಂಡಿದೆ

ಭಾರತವು ಶೇಕಡಾ 60 ಕ್ಕಿಂತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುತ್ತದೆ:
ಭಾರತ ತನ್ನ ಖಾದ್ಯ ತೈಲದ ಶೇಕಡಾ 60 ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ ಎಂಬುದು ಗಮನಾರ್ಹ ಸಂಗತಿ ಆಗಿದೆ. ಜಾಗತಿಕ ಒತ್ತಡದಲ್ಲಿ ತೈಲ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಆದಾಗ್ಯೂ, ಈಗ ಈ ಬೆಲೆಗಳಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ ಮತ್ತು ಜಾಗತಿಕವಾಗಿ ಬೆಲೆಗಳು ಕಡಿಮೆಯಾಗಿದೆ. ಕಳೆದ ತಿಂಗಳು ಸಹ, ತೈಲ ತಯಾರಕರು ಎಂಆರ್ಪಿ ಯನ್ನು 10-15 ರೂ.ಗಳಷ್ಟು ಕಡಿತಗೊಳಿಸಿದ್ದರು. ಅದಕ್ಕೂ ಮುಂಚೆಯೇ, ಜಾಗತಿಕ ಮಾರುಕಟ್ಟೆಗಳಲ್ಲಿನ ಕಡಿತದ ಪರಿಣಾಮವು ಭಾರತದಲ್ಲಿ ಖಾದ್ಯ ತೈಲಗಳ ಬೆಲೆಗಳ ಮೇಲೂ ಕಂಡು ಬಂದಿದೆ.

ಇದನ್ನೂ ಓದಿ- ಬಿಗ್ ಶಾಕ್! ಎಲ್‌ಪಿಜಿ ಬೆಲೆಯಲ್ಲಿ ಭಾರಿ ಏರಿಕೆ: ಈಗ ಇಷ್ಟು ರೂಪಾಯಿಗೆ ಗ್ಯಾಸ್ ಸಿಲಿಂಡರ್ ಲಭ್ಯ

ಜಾಗತಿಕ ಬೆಲೆಯಲ್ಲಿ ಮತ್ತಷ್ಟು ಕುಸಿತವನ್ನು ಗಮನದಲ್ಲಿಟ್ಟುಕೊಂಡು, ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ಎಲ್ಲಾ ಖಾದ್ಯ ತೈಲ ಸಂಘಗಳು ಮತ್ತು ಪ್ರಮುಖ ತೈಲ ಉತ್ಪಾದಕರ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಪ್ರಸ್ತುತ ಟ್ರೆಂಡ್ ಕುರಿತು ಸಮಾಲೋಚನೆ ನಡೆಸಲಾಗಿದ್ದು, ಜಾಗತಿಕ ತೈಲ ಬೆಲೆ ಕುಸಿತದ ಲಾಭವನ್ನು ಸಾಮಾನ್ಯ ಗ್ರಾಹಕರಿಗೆ ತಲುಪಿಸಬೇಕೆಂದು ಸೂಚಿಸಲಾಗಿದೆ.

ಈ ಸಭೆಯ ನಂತರ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಆಹಾರ ಕಾರ್ಯದರ್ಶಿ, 'ನಾವು ಈ ಬಗ್ಗೆ ವಿವರವಾದ ಪ್ರಸ್ತುತಿಯನ್ನು ನೀಡಿದ್ದೇವೆ ಮತ್ತು ಕಳೆದ ಒಂದು ವಾರದಲ್ಲಿ ಜಾಗತಿಕವಾಗಿ ಬೆಲೆಗಳು ಶೇಕಡಾ 10 ರಷ್ಟು ಕಡಿಮೆಯಾಗಿದೆ. ಇದರ ಸದುಪಯೋಗವನ್ನು ಗ್ರಾಹಕರೂ ಪಡೆಯುವಂತೆ ಆಗಬೇಕು. ತೈಲ ಕಂಪನಿಗಳಿಗೆ ಸರ್ಕಾರದ ವತಿಯಿಂದ ಅಡುಗೆಎಣ್ಣೆ ದರವನ್ನು ಕಡಿಮೆ ಮಾಡುವಂತೆ ನಿರ್ದೇಶಿಸಲಾಗಿದೆ ಎಂದರು.

ತೈಲ ಕಂಪನಿಗಳಿಂದ ಬೆಲೆ ಕಡಿಮೆ ಮಾಡುವ ಭರವಸೆ:
ಮುಂದಿನ ಒಂದು ವಾರದಲ್ಲಿ ಖಾದ್ಯ ತೈಲದ ಬೆಲೆಯನ್ನು ಲೀಟರ್‌ಗೆ 10 ರೂ.ವರೆಗೆ ಕಡಿತಗೊಳಿಸಲಾಗುವುದು ಎಂದು ದೊಡ್ಡ ತೈಲ ಉತ್ಪಾದಕರು ಭರವಸೆ ನೀಡಿದ್ದಾರೆ. ಇದು ಪಾಮ್ ಎಣ್ಣೆ, ಸೋಯಾಬೀನ್ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಮುಂತಾದ ಎಲ್ಲಾ ಆಮದು ಮಾಡಲಾದ ಖಾದ್ಯ ತೈಲಗಳನ್ನು ಒಳಗೊಂಡಿದೆ. ಒಂದೊಮ್ಮೆ ಈ ಖಾದ್ಯ ತೈಲಗಳ ಬೆಲೆ ಕಡಿಮೆಯಾದರೆ ಅದು ಇತರ ಖಾದ್ಯ ತೈಲಗಳ ಬೆಲೆಯ ಮೇಲೂ ಪರಿಣಾಮ ಬೀರಲಿದೆ ಎಂದವರು ತಿಳಿಸಿದರು.

ಇದನ್ನೂ ಓದಿ- Aadhaar Update: ಆಧಾರ್‌ಗೆ ಸಂಬಂಧಿಸಿದ ವಂಚನೆ ತಡೆಯಲು ಯುಐಡಿಎಐ ಮಾಸ್ಟರ್ ಪ್ಲಾನ್

ಇನ್ನೊಂದು ಪ್ರಮುಖ ವಿಷಯವೆಂದರೆ,  ದೇಶದಾದ್ಯಂತ ತೈಲ ಬೆಲೆಯನ್ನು ಏಕರೂಪದಲ್ಲಿಡಲು ಆಹಾರ ಕಾರ್ಯದರ್ಶಿ ಎಲ್ಲಾ ಖಾದ್ಯ ತೈಲ ಉತ್ಪಾದನಾ ಕಂಪನಿಗಳಿಗೆ ಸೂಚಿಸಿದ್ದಾರೆ. ಪ್ರಸ್ತುತ ಯುಗದಲ್ಲಿ, ಒಂದೇ ಬ್ರಾಂಡ್‌ನ ತೈಲದ ಬೆಲೆ ವಿವಿಧ ಪ್ರದೇಶಗಳಲ್ಲಿ ಲೀಟರ್‌ಗೆ 3-5 ರೂ.ವರೆಗೆ ಬದಲಾಗುತ್ತದೆ. ಆದರೆ ಸಾರಿಗೆ ಮತ್ತು ಇತರ ವೆಚ್ಚಗಳನ್ನು ಎಂಆರ್ಪಿಗೆ ಸೇರಿಸಲಾಗುತ್ತದೆ. ಇದಕ್ಕೆ ಕಂಪನಿಗಳೂ ಒಪ್ಪಿಗೆ ಸೂಚಿಸಿವೆ ಎಂದು ಮಾಹಿತಿ ನೀಡಿದರು.

ಜುಲೈ 7 ಬುಧವಾರದಂದು ಗ್ರಾಹಕರ ವ್ಯವಹಾರಗಳ ಸಚಿವಾಲಯದಿಂದ ಲಭ್ಯವಾಗಿರುವ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ತಾಳೆ ಎಣ್ಣೆಯ ಸರಾಸರಿ ಬೆಲೆ ಲೀಟರ್‌ಗೆ 144.16 ರೂ., ಸೂರ್ಯಕಾಂತಿ ಎಣ್ಣೆಯ ಬೆಲೆ ಲೀಟರ್‌ಗೆ 185.77 ರೂ., ಸೋಯಾಬೀನ್ ಎಣ್ಣೆಯ ಬೆಲೆ ಪ್ರತಿ ಲೀಟರ್‌ಗೆ  185.77 ರೂ., ಸಾಸಿವೆ ಎಣ್ಣೆ ಲೀಟರ್‌ಗೆ  177.37 ರೂ. ಮತ್ತು ಕಡಲೆ ಎಣ್ಣೆಯ ಬೆಲೆ ಲೀಟರ್‌ಗೆ  187.93 ರೂ. ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News