Ayushman Card To Ration Card Holders: ದೇಶದ ಕೋಟ್ಯಾಂತರ ಪಡಿತರ ಚೀಟಿದಾರರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ನೀವೂ ಕೂಡ ಪಡಿತರ ಚೀಟಿದಾರರಾಗಿದ್ದರೆ ಇದೀಗ  ಉಚಿತ ಪಡಿತರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಶೇಷ ಸೌಲಭ್ಯಗಳನ್ನು ನೀವು ಪಡೆಯುವಿರಿ. ಹೌದು ನಿಮಗೆ ಸರ್ಕಾರದಿಂದ ಮತ್ತೊಂದು ವಿಶೇಷ ಸೌಕರ್ಯವನ್ನು ಒದಗಿಸಲಾಗುತ್ತಿದೆ. ಉಚಿತ ಪಡಿತರ ಜತೆಗೆ ಕೋಟ್ಯಂತರ ಕಾರ್ಡ್‌ದಾರರು ಉಚಿತ ಚಿಕಿತ್ಸೆಯ ಸೌಲಭ್ಯವನ್ನೂ ಪಡೆಯಲಿದ್ದಾರೆ.


COMMERCIAL BREAK
SCROLL TO CONTINUE READING

ಚಿಕಿತ್ಸೆ ಉಚಿತವಾಗಿರುತ್ತದೆ
ಈ ನಿಟ್ಟಿನಲ್ಲಿ ಇದೀಗ  ಮತ್ತೊಂದು ಹೆಜ್ಜೆಯನಿಟ್ಟಿರುವ ಸರ್ಕಾರ, ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಎಲ್ಲ ಕುಟುಂಬಗಳಿಗೆ ಮತ್ತೊಂದು ಸೌಲಭ್ಯವನ್ನು ಕಡ್ಡಾಯಗೊಳಿಸಿದೆ. ಎಲ್ಲಾ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆಗಾಗಿ ಆಯುಷ್ಮಾನ್ ಕಾರ್ಡ್‌ಗಳನ್ನು ಮಾಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಜಿಲ್ಲಾ ಮತ್ತು ತಹಸಿಲ್ ಮಟ್ಟದಲ್ಲಿ ವಿಶೇಷ ಅಭಿಯಾನವೂ ನಡೆಯುತ್ತಿದೆ. ಅಭಿಯಾನದ ಅಡಿಯಲ್ಲಿ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಎಲ್ಲ ಸದಸ್ಯರಿಗೆ ಆಯುಷ್ಮಾನ್ ಕಾರ್ಡ್ ಮಾಡಲು ಗುರಿ ನಿಗದಿಪಡಿಸಲಾಗಿದೆ.


ಹೇಗೆ ಅರ್ಜಿ ಸಲ್ಲಿಸಬೇಕು
ಪ್ರಸ್ತುತ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ (ಅಂತ್ಯೋದಯ ಪಡಿತರ ಚೀಟಿ) ಆಯುಷ್ಮಾನ್ ಕಾರ್ಡ್ ಲಭ್ಯವಿಲ್ಲ. ಅವರು ಸಂಬಂಧಪಟ್ಟ ಇಲಾಖೆಗೆ ಹೋಗಿ ತಮ್ಮ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಅರ್ಹ ಫಲಾನುಭವಿ ಕಾರ್ಡ್ ಪಡೆದ ನಂತರ, ಸಾರ್ವಜನಿಕ ಸೇವಾ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಖಾಸಗಿ ಆಸ್ಪತ್ರೆ ಅಥವಾ ಆಯುಷ್ಮಾನ್ ಪ್ಯಾನೆಲ್ ಅಥವಾ ಜಿಲ್ಲಾ ಆಸ್ಪತ್ರೆಗೆ ಸಂಪರ್ಕ ಹೊಂದಿದ ಖಾಸಗಿ ಆಸ್ಪತ್ರೆಯಲ್ಲಿ ಅಂತ್ಯೋದಯ ಪಡಿತರ ಚೀಟಿಯನ್ನು ತೋರಿಸಿ ಎಲ್ಲಾ ಕುಟುಂಬದ ಸದಸ್ಯರಿಗೆ ಆಯುಷ್ಮಾನ್ ಕಾರ್ಡ್ ಮಾಡಿಸಬಹುದಾಗಿದೆ.


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ವೇತನದಲ್ಲಿ 1,20,000 ಹೆಚ್ಚಳ, ಮಾರ್ಚ್ ತಿಂಗಳ ವೇತನದಲ್ಲಿ ಸಿಗಲಿದೆ ಈ ಹಣ!


ಚಿಕಿತ್ಸೆಗಾಗಿ ಪರದಾಡಬೇಕಾಗಿಲ್ಲ
ಪ್ರಸ್ತುತ, ಹೊಸ ಆಯುಷ್ಮಾನ್ ಕಾರ್ಡ್‌ಗಳನ್ನು ಸರ್ಕಾರ ಮಾಡುತ್ತಿಲ್ಲ. ಈಗಾಗಲೇ ಯೋಜನೆಯಲ್ಲಿ ಹೆಸರು ಇರುವ ಫಲಾನುಭವಿಗಳಿಗೆ ಮಾತ್ರ ಕಾರ್ಡ್ ಮಾಡಲಾಗುತ್ತಿದೆ. ಇದರಿಂದ ಅಂತ್ಯೋದಯ ಕಾರ್ಡ್ ಧಾರಕರಿಗೆ ಆರೋಗ್ಯ ಸಂಬಂಧಿ ಸಮಸ್ಯೆ ಎದುರಾದರೆ ಚಿಕಿತ್ಸೆಗಾಗಿ ಅಲೆದಾಡಬೇಕಿಲ್ಲ ಎಂಬುದು ಸರ್ಕಾರದ ಯೋಜನೆ. ಇದಕ್ಕಾಗಿ ಸರಕಾರದ ವತಿಯಿಂದ  ಜಿಲ್ಲಾ ಪೂರೈಕೆ ಅಧಿಕಾರಿಗೆ ಸೂಚನೆ ನೀಡಲಾಗಿದೆ.


ಇದನ್ನೂ ಓದಿ-ಉಚಿತ ಪಡಿತರ ಲಾಭಾರ್ಥಿಗಳಿಗೆ ಬಂಪರ್ ಲಾಟರಿ, ಉಚಿತ ಗೋದಿ-ಅಕ್ಕಿಯ ಜೊತೆಗೆ ಇದನ್ನು ಮನೆಗೆ ಕೊಂಡೊಯ್ಯಿರಿ!


ಅಂತ್ಯೋದಯ ಕಾರ್ಡ್ ಯಾರಿಗೆ ಸಿಗುತ್ತದೆ?
ಅಂತ್ಯೋದಯ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ನೀಡಲಾಗುತ್ತದೆ. ಈ ಕಾರ್ಡ್ ಮೂಲಕ ಫಲಾನುಭವಿಯು ಪ್ರತಿ ತಿಂಗಳು ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಪಡೆಯುತ್ತಾನೆ. ಕಾರ್ಡ್ ದಾರರಿಗೆ ಒಟ್ಟು 35 ಕೆಜಿ ಗೋಧಿ ಮತ್ತು ಅಕ್ಕಿ ನೀಡಲಾಗುತ್ತದೆ. ಇದಕ್ಕಾಗಿ ಪ್ರತಿ ಕೆ.ಜಿ ಗೋದಿಗೆ 2 ರೂ. ಮತ್ತು ಪ್ರತಿ ಕೆ.ಜಿ ಅಕ್ಕಿಗೆ 3 ರೂ.ಹಣ ಪಾವತಿಸಬೇಕು. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ