7th Pay Commission: ಸರ್ಕಾರಿ ನೌಕರರ ವೇತನದಲ್ಲಿ 1,20,000 ಹೆಚ್ಚಳ, ಮಾರ್ಚ್ ತಿಂಗಳ ವೇತನದಲ್ಲಿ ಸಿಗಲಿದೆ ಈ ಹಣ!

7th Pay Commission: ಕೇಂದ್ರ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ. ನೀವೂ ಸರ್ಕಾರಿ ನೌಕರರಾಗಿದ್ದರೆ ನಿಮ್ಮ ವೇತನ  1,20,000 ರೂ.ಗಳಷ್ಟು ಹೆಚ್ಚಾಗಲಿದೆ. ಸರ್ಕಾರ ಮಾರ್ಚ್ ತಿಂಗಳಲ್ಲಿ ನೌಕರರ ಖಾತೆಗೆ ಈ ಹಣವನ್ನು ವರ್ಗಾಗಿಸುವ ನಿರೀಕ್ಷೆ ಇದೆ.  

Written by - Nitin Tabib | Last Updated : Mar 12, 2023, 02:26 PM IST
  • ಎಐಸಿಪಿಐ ಸೂಚ್ಯಂಕದಿಂದ ಪಡೆದ ಮಾಹಿತಿಯ ಪ್ರಕಾರ,
  • ಜನವರಿ 1, 2023 ರಿಂದ, ಉದ್ಯೋಗಿಗಳು ಹೆಚ್ಚಿದ ಡಿಎ ಪ್ರಯೋಜನವನ್ನು ಪಡೆಯುತ್ತಾರೆ.
  • ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಶೇ.38ರ ದರದಲ್ಲಿ ತುಟ್ಟಿಭತ್ಯೆ ಪಡೆಯುತ್ತಿದ್ದು, ಅದರಲ್ಲಿ ಮತ್ತೆ ಶೇ.4ರಷ್ಟು ಏರಿಕೆಯಾಗಿದೆ.
7th Pay Commission: ಸರ್ಕಾರಿ ನೌಕರರ ವೇತನದಲ್ಲಿ 1,20,000 ಹೆಚ್ಚಳ, ಮಾರ್ಚ್ ತಿಂಗಳ ವೇತನದಲ್ಲಿ ಸಿಗಲಿದೆ ಈ ಹಣ! title=
7ನೇ ವೇತನ ಆಯೋಗ ಅಪ್ಡೇಟ್ !

DA Hike: ಕೇಂದ್ರ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ನೀವು ಒಂದು ವೇಳೆ ಡಿಎ ಹೆಚ್ಚಳದ ನಿರೀಕ್ಷೆಯಲ್ಲಿದ್ದರೆ, 2 ದಿನಗಳ ಬಳಿಕ  ನಿಮ್ಮ ವೇತನದಲ್ಲಿ ಬಂಪರ್ ಏರಿಕೆಯಾಗಲಿದೆ. ಮಾರ್ಚ್‌ನಲ್ಲಿ ಸರ್ಕಾರ ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರಿಗೆ ಹೋಳಿ ಉಡುಗೊರೆಯನ್ನು ನೀಡಲಿದೆ. ಈ ಬಾರಿ ಮಾರ್ಚ್ ತಿಂಗಳಲ್ಲಿ ಕೇಂದ್ರ ನೌಕರರ ವೇತನದಲ್ಲಿ 1,20,000 ರೂ. ಹೆಚ್ಚಳವಾಗಲಿದೆ. ಅಧಿಕೃತ ಮಾಹಿತಿ ಪ್ರಕಾರ, ಈ ಬಾರಿಯೂ ಸರ್ಕಾರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಲಿದೆ.

ಡಿಎ ಹೆಚ್ಚಳ
4 ರಷ್ಟು ಡಿಎ ಹೆಚ್ಚಳದ ನಂತರ, ಉದ್ಯೋಗಿಗಳ ಸಂಬಳದಲ್ಲಿ ಬಂಪರ್ ಏರಿಕೆ ಆಗಲಿದೆ. ಈ ಹೆಚ್ಚಳದಿಂದ ನೌಕರರ ಒಟ್ಟು ತುಟ್ಟಿ ಭತ್ಯೆ ಶೇಕಡಾ 42 ಕ್ಕೆ ಏರಿಕೆಯಾಗಲಿದೆ. ಈ ಪ್ರಯೋಜನವು ಜನವರಿ 2023 ರಿಂದ ನೀಡಲಾಗುವುದು ಎಂದು ಸರ್ಕಾರಿ ಮೂಲವೊಂದು ಈಗಾಗಲೇ ಸ್ಪಷ್ಟಪಡಿಸಿದೆ.

1,20,000 ಸಂಬಳ ಹೆಚ್ಚಾಗಲಿದೆ
ತುಟ್ಟಿಭತ್ಯೆ ಹೆಚ್ಚಳದಿಂದ ನೌಕರರ ವೇತನದಲ್ಲಿ ಬಂಪರ್ ಏರಿಕೆಯಾಗಲಿದೆ. ಯಾವುದೇ ಉದ್ಯೋಗಿಯ ಮೂಲ ವೇತನವು ತಿಂಗಳಿಗೆ ರೂ 30,000 ಆಗಿದ್ದರೆ, ಅವರ ವೇತನವು ಪ್ರತಿ ತಿಂಗಳು ರೂ 1200 ರಷ್ಟು ಹೆಚ್ಚಾಗುತ್ತದೆ. ಅದರಂತೆ ವಾರ್ಷಿಕ ಒಟ್ಟು ವೇತನದಲ್ಲಿ ರೂ.14,400 ಹೆಚ್ಚಳವಾಗಲಿದೆ. ಮತ್ತೊಂದೆಡೆ, ಉದ್ಯೋಗಿಯ ಮೂಲ ವೇತನವು ತಿಂಗಳಿಗೆ 2.50 ಲಕ್ಷ ರೂಪಾಯಿಗಳಾಗಿದ್ದರೆ, ಅವರ ವಾರ್ಷಿಕ ವೇತನವು 1,20,000 ರೂಪಾಯಿಗಳಷ್ಟು ಹೆಚ್ಚಾಗಲಿದೆ.

ಶೇ.4ರಷ್ಟು ಡಿಎ ಹೆಚ್ಚಳ
ಎಐಸಿಪಿಐ ಸೂಚ್ಯಂಕದಿಂದ ಪಡೆದ ಮಾಹಿತಿಯ ಪ್ರಕಾರ, ಜನವರಿ 1, 2023 ರಿಂದ, ಉದ್ಯೋಗಿಗಳು ಹೆಚ್ಚಿದ ಡಿಎ ಪ್ರಯೋಜನವನ್ನು ಪಡೆಯುತ್ತಾರೆ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಶೇ.38ರ ದರದಲ್ಲಿ ತುಟ್ಟಿಭತ್ಯೆ ಪಡೆಯುತ್ತಿದ್ದು,  ಅದರಲ್ಲಿ ಮತ್ತೆ  ಶೇ.4ರಷ್ಟು ಏರಿಕೆಯಾಗಿದೆ. ಹೀಗಾಗಿ ಇನ್ನು ಮುಂದೆ ನೌಕರರು ತುಟ್ಟಿ ಭತ್ಯೆಯ ಲಾಭವನ್ನು ಶೇ.42ರ ದರದಲ್ಲಿ ಪಡೆಯಲಿದ್ದಾರೆ.

ಇದನ್ನೂ ಓದಿ-7th CPC: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಹಬ್ಬದ ಉಡುಗೊರೆ ಪ್ರಕಟಿಸಿದ ಮೋದಿ ಸರ್ಕಾರ!

ಜುಲೈನಲ್ಲಿಯೂ ಶೇ.4ರಷ್ಟು ಡಿಎ ಹೆಚ್ಚಿಸಲಾಗಿತ್ತು
ಉದ್ಯೋಗಿಗಳ ಡಿಎಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾದರೆ, ತುಟ್ಟಿಭತ್ಯೆಯು ಶೇಕಡಾ 42 ರ ದರದಲ್ಲಿ ತಲುಪುತ್ತದೆ. ಜುಲೈ 2022 ರಲ್ಲಿಯೂ ಕೂಡ  ಸರ್ಕಾರವು ನೌಕರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿತ್ತು. ಡಿಎ ಮತ್ತು ಡಿಆರ್ ಹೆಚ್ಚಳದಿಂದ ಲಕ್ಷಾಂತರ ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ ಪಕ್ಕಾ! ಈ ದಿನ ಘೋಷಣೆ ಸಾಧ್ಯತೆ

ತುಟ್ಟಿ ಭತ್ಯೆ ಎಂದರೇನು?
ತುಟ್ಟಿ ಭತ್ಯೆ ಎಂದರೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನೀಡುವ ಒಂದು ರೀತಿಯ ಭತ್ಯೆಯಾಗಿದೆ. ಈ ಮೂಲಕ ಉದ್ಯೋಗಿಗಳ ಜೀವನ ಮತ್ತು ಆಹಾರದ ಗುಣಮಟ್ಟ ಸುಧಾರಿಸುವ ಉದ್ದೇಶ ಸರಕಾರದ್ದಾಗಿರುತ್ತದೆ. ದೇಶದಲ್ಲಿ ಯಾವ ರೀತಿಯಲ್ಲಿ ಹಣದುಬ್ಬರ ಹೆಚ್ಚುತ್ತದೆಯೋ ಅದೇ ರೀತಿ ಉದ್ಯೋಗಿಗಳ ಜೀವನಮಟ್ಟ ಮತ್ತು ಆಹಾರದ ಮಟ್ಟವನ್ನು ಹೆಚ್ಚಿಸಲು ಈ ಭತ್ಯೆಯನ್ನು ನೀಡಲಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News