Big News: ವಾಹನ ಸವಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಹೆದ್ದಾರಿ ಸಚಿವ ನಿತೀನ್ ಗಡ್ಕರಿ!
Nitin Gadkari On Toll Tax: ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ಕೇಂದ್ರ ಹೆದ್ಧಾರಿ ಸಚಿವ ನಿತೀನ್ ಗಡ್ಕರಿ ಭಾರಿ ಸಂತಸದ ಸುದ್ದಿ ಪ್ರಕಟಿಸಿದ್ದಾರೆ. ನೀವೂ ಒಂದು ವೇಳೆ ಹೆದ್ಧಾರಿಯಲ್ಲಿ ಸಂಚರಿಸುತ್ತಿದ್ದು, ಟೋಲ್ ತೆರಿಗೆಯಿಂದ ಕಂಗಾಲಾಗಿದ್ದರೆ, ಇನ್ಮುಂದೆ ನೀವು ಟೆನ್ಷನ್ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಕೇಂದ್ರ ಸಚಿವ ನಿತೀನ್ ಗಡ್ಕರಿ ವತಿಯಿಂದ ಒಂದು ಮಹತ್ವದ ಘೋಷಣೆ ಮಾಡಲಾಗಿದೆ.
Toll Tax New Rule: ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಭಾರಿ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ನೀವೂ ಹೈವೇಯಲ್ಲಿ ಸಂಚರಿಸುತ್ತಿದ್ದು, ಟೋಲ್ ತೆರಿಗೆ ನೀಡಿ ಸಾಕಾಗಿದ್ದರೇ, ಇನ್ಮುಂದೆ ನೀವು ಸ್ವಲ್ಪವೂ ಟೆನ್ಷನ್ ತೆಗೆದುಕೊಳ್ಳಬೇಕಾಗಿಲ್ಲ. ಏಕೆಂದರೆ ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಕುರಿತಾಂತ ಒಂದು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ದೇಶದ ಎಲ್ಲಾ ಹೆದ್ದಾರಿಗಳಿಂದ ಟೋಲ್ ತೆರಿಗೆ ನಿಯಮಗಳನ್ನು ಸರ್ಕಾರ ಶೀಘ್ರದಲ್ಲೇ ತೆಗೆದುಹಾಕಲಿದೆ. ಹೌದು... ಇದೀಗ ನೀವು ಈ ಮುಂಚಿನ ಹಾಗೆ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಟೋಲ್ ಟ್ಯಾಕ್ಸ್ ಕಟ್ಟುವ ಅಗತ್ಯವಿಲ್ಲ. ಸರ್ಕಾರ ಯಾವ ಯೋಜನೆ ರೂಪಿಸುತ್ತಿದೆ ತಿಳಿದುಕೊಳ್ಳೋಣ ಬನ್ನಿ.
ಯೋಜನೆಯ ಬಗ್ಗೆ ಮಾಹಿತಿ ನೀಡಿದ ನಿತಿನ್ ಗಡ್ಕರಿ
ಇದನ್ನು ಸ್ವತಃ ಕೇಂದ್ರ ಸಾರಿಗೆ ಸಚಿವರೇ ಸಂಸತ್ತಿನಲ್ಲಿ ಪ್ರಕಟಿಸಿದ್ದಾರೆ. ಒಂದು ವರ್ಷದೊಳಗೆ ಹೊಸ ತಂತ್ರಜ್ಞಾನದ ಸಹಾಯದಿಂದ ದೇಶದಲ್ಲಿ ಟೋಲ್ ಸಂಗ್ರಹಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಇದರೊಂದಿಗೆ ಫಾಸ್ಟ್ಯಾಗ್ ವ್ಯವಸ್ಥೆಯಿಂದ ನಿಮಗೆ ಪರಿಹಾರ ಸಿಗಲಿದೆ. ದೇಶಾದ್ಯಂತ ಟೋಲ್ ತೆರಿಗೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.
ಟ್ರಾಫಿಕ್ ಜಾಮ್‌ನಲ್ಲಿ ಯಾವುದೇ ಸುಧಾರಣೆ ಇಲ್ಲ
ಸರ್ಕಾರ ತಯಾರಿಸುತ್ತಿರುವ ಹೊಸ ತಂತ್ರಜ್ಞಾನದಿಂದಾಗಿ ಯಾವುದೇ ಚಾಲಕರಿಂದ ತಪ್ಪು ತೆರಿಗೆ ಸಂಗ್ರಹಿಸಲಾಗುವುದಿಲ್ಲ. ಪ್ರಸ್ತುತ, ದೇಶದ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳಿದ್ದು, ಇವುಗಳಲ್ಲಿ ಫಾಸ್ಟ್ಯಾಗ್ ಸಹಾಯದಿಂದ ರಿಕವರಿ ನಡೆಯುತ್ತಿದೆ, ಆದರೆ ಇನ್ನೂ ಫಾಸ್ಟ್ಯಾಗ್ ಬಳಕೆದಾರರು ಫಾಸ್ಟ್ಯಾಗ್ ಹೊಂದಿದ ಬಳಿಕವೂ ಮತ್ತು ಕಡಿಮೆ ಕಿ.ಮೀ ಸಂಚಾರದ ಬಳಿಕವೂ ಕೂಡ ಫುಲ್ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು ದೂರುತ್ತಿದ್ದಾರೆ, ಜಾಮ್ನ ಪರಿಸ್ಥಿತಿ ಇನ್ನೂ ಸುಧಾರಿಸುತ್ತಿಲ್ಲ.
ಹೊಸ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದೆ ಸರ್ಕಾರ
'ಒಂದು ವರ್ಷದೊಳಗೆ ದೇಶದಲ್ಲಿ ಇರುವ ಟೋಲ್ ಬೂತ್‌ಗಳನ್ನು ತೆಗೆದುಹಾಕಲಾಗುವುದು ಮತ್ತು ದೇಶಾದ್ಯಂತ ಟೋಲ್ ಸಂಗ್ರಹಕ್ಕೆ ಜಿಪಿಎಸ್ ತಂತ್ರಜ್ಞಾನವನ್ನು ಬಳಸಲಾಗುವುದು ಎಂದು ನಾನು ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ' ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಂಸತ್ತಿನಲ್ಲಿ ಹೇಳಿದ್ದಾರೆ. ಕಳೆದ ವರ್ಷದಿಂದ ಈ ತಂತ್ರಜ್ಞಾನದ ಮೇಲೆ ಕೆಲಸ ನಡೆಯುತ್ತಿದೆ. ಇದು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ- ಅದ್ಭುತವಾಗಿದೆ ಈ ಇ-ಬೈಕ್, ಸಿಂಗಲ್ ಚಾರ್ಜ್ ಮೇಲೆ 160 ಕಿ.ಮೀ ಓಡುತ್ತೆ, 5 ಗಂಟೆಗಳಲ್ಲಿ ಫುಲ್ ಚಾರ್ಜ್, ಬೆಲೆ ಕೇವಲ ಇಷ್ಟೇ!
ನಂಬರ್ ಪ್ಲೇಟ್‌ಗಳು ಬದಲಾಗುತ್ತವೆ
ಸರ್ಕಾರದ ಹೊಸ ಯೋಜನೆಯಿಂದ ಸಾಕಷ್ಟು ಪಾರದರ್ಶಕತೆ ಕಂಡುಬರಲಿದೆ ಮತ್ತು ಇದು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ. ಹೊಸ ತಂತ್ರಜ್ಞಾನದ ಪ್ರಕಾರ, ನಂಬರ್ ಪ್ಲೇಟ್‌ಗೆ ಚಿಪ್ ಅಳವಡಿಸಲಾಗುವುದು ಎನ್ನಲಾಗಿದೆ, ನಂತರ ಹಳೆಯ ನಂಬರ್ ಪ್ಲೇಟ್ ಅನ್ನು ಹೊಸ ನಂಬರ್ ಪ್ಲೇಟ್ ಆಗಿ ಪರಿವರ್ತಿಸಲಾಗುತ್ತದೆ.
ಸಾಫ್ಟ್ವೇರ್ ಮೂಲಕ ರಿಕವರಿ
ಗಣಕೀಕೃತ ವ್ಯವಸ್ಥೆಯ ಮೂಲಕ ಸಾಫ್ಟ್‌ವೇರ್ ಮೂಲಕ ಟೋಲ್ ಸಂಗ್ರಹಣೆ ನಡೆಯಲಿದೆ. ಇದಲ್ಲದೇ ಜಿಪಿಎಸ್ ವ್ಯವಸ್ಥೆ ಮೂಲಕ ವಾಹನ ಮಾಲೀಕರ ಖಾತೆಯಿಂದ ನೇರವಾಗಿ ಟೋಲ್ ಸಂಗ್ರಹಿಸುವ ತಂತ್ರಗಾರಿಕೆಯ ಮೇಲೆ ಕೆಲಸ ನಡೆಯುತ್ತಿದೆ. ಎರಡರಲ್ಲೂ ಯಾವ ಆಯ್ಕೆಯನ್ನು ಅಳವಡಿಸಲಾಗುತ್ತದೆ ಎಂಬ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.