ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು ? UIDAI ನೀಡಿದೆ ಮಾಹಿತಿ
ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತೆ UIDAI ಒಂದು ದೊಡ್ಡ ನವೀಕರಣವನ್ನು ನೀಡಿದೆ. UIDAI ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡುವ ಮೂಲಕ ಆಧಾರ್ ಕಾರ್ಡ್ಗೆ ಸಂಬಂಧಿಸಿದ ಈ ವಿಶೇಷ ಸೌಲಭ್ಯದ ಬಗ್ಗೆ ಮಾಹಿತಿಯನ್ನು ನೀಡಿದೆ.
ನವದೆಹಲಿ: Aadhaar CardLatest News : ಆಧಾರ್ ಕಾರ್ಡ್ ಹೊಂದಿರುವವರಿಗೆ UIDAI ದೊಡ್ಡ ಅಪ್ಡೇಟ್ ನೀಡಿದೆ. ನಿಮ್ಮ ಆಧಾರ್ ಕಾರ್ಡ್ (Aadhaar card) ಕಳೆದುಕೊಂಡರೆ ಯೋಚನೆ ಮಾಡಬೇಕಾಗಿಲ್ಲ. ಆಧಾರ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್ ಡೌನ್ಲೋಡ್ (Aadaar card download) ಮಾಡುವ ಪ್ರಕ್ರಿಯೆ ಹೇಗೆ ಎನ್ನುವುದನ್ನು ಕೂಡಾ ಹೇಳಿದೆ. ಈ ಪ್ರಕ್ರಿಯೆಯನ್ನು ಬಳಸಿಕೊಂಡು ಎಲ್ಲಿ ಬೇಕಾದರೂ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಟ್ವೀಟ್ ಮೂಲಕ ಮಾಹಿತಿ ಹಂಚಿ ಕೊಂಡಿರುವ ಯುಐಡಿಎಐ :
UIDAI ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ (tweet) ಮಾಡುವ ಮೂಲಕ ಈ ಸೌಲಭ್ಯದ ಬಗ್ಗೆ ಮಾಹಿತಿಯನ್ನು ನೀಡಿದೆ. ಆಧಾರ್ ಪ್ರಸ್ತುತ ನಮ್ಮ ಗುರುತಿನ ಪ್ರಮುಖ ದಾಖಲೆಯಾಗಿದೆ. ಬ್ಯಾಂಕ್ ಕೆಲಸ ಅಥವಾ ಸರ್ಕಾರಿ ಯೋಜನೆಯ ಲಾಭ ಪಡೆಯಲು ಆಧಾರ್ ಅಗತ್ಯವಾಗಿ ಬೇಕಾಗಿರುತ್ತದೆ.
ಇದನ್ನೂ ಓದಿ : Post Office ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ ಶ್ರೀಮಂತರಾಗಿ : ಹೇಗೆ ಇಲ್ಲಿದೆ ನೋಡಿ
1. ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು UIDAI, ನೇರ ಲಿಂಕ್ ಅನ್ನು ಹಂಚಿಕೊಂಡಿದೆ. https://eaadhaar.uidai.gov.in ನಿಂದ ಆಧಾರ್ ಅನ್ನು ಯಾವಾಗ ಬೇಕಾದರೂ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
2. ನಿಮ್ಮ ಆಧಾರ್ ಅನ್ನು https://t.co/C190bVXBCk ನಿಂದ ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
3. ಸಂಪೂರ್ಣ ಆಧಾರ್ ಸಂಖ್ಯೆಯನ್ನು ಪ್ರದರ್ಶಿಸುವ 'ನಿಯಮಿತ ಆಧಾರ್' ಅಥವಾ ಕೊನೆಯ ನಾಲ್ಕು ಅಂಕೆಗಳನ್ನು ಮಾತ್ರ ತೋರಿಸುವ 'ಮಾಸ್ಕ್ಡ್ ಆಧಾರ್' ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ.
4. ಈ https://t.co/xfmofQ9jSA ಲಿಂಕ್ ಮೂಲಕ ಯೀ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಆಧಾರ್ ಡೌನ್‌ಲೋಡ್ ಮಾಡಿಕೊಳ್ಳುವ ಹಂತ ಹಂತದ ಪ್ರಕ್ರಿಯೆ ಇಲ್ಲಿದೆ :
1. ಈ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಆಧಾರ್ ಅನ್ನು ಡೌನ್‌ಲೋಡ್ ಮಾಡಿ
2. UIDAI ನೇರ ಲಿಂಕ್ eaadhaar.uidai.gov.in/ ಗೆ ಲಾಗಿನ್ ಮಾಡಿ.
3. ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ.
4. ನಿಮಗೆ ಮಾಸ್ಕ್ಡ್ ಆಧಾರ್ ಕಾರ್ಡ್ ಬೇಕಾದರೆ, 'I want a masked Aadhar' ಆಯ್ಕೆಯ ಎಡಭಾಗದಲ್ಲಿರುವ ಬಾಕ್ಸ್ ಅನ್ನು ಟಿಕ್ ಮಾಡಿ.
5. ಭದ್ರತಾ ಕೋಡ್ ಅಥವಾ ಕ್ಯಾಪ್ಚಾ ನಮೂದಿಸಿ.
6. 'ಸೆಂಡ್ OTP' ಮೇಲೆ ಕ್ಲಿಕ್ ಮಾಡಿ.
7. ನಿಮ್ಮ ಆಧಾರ್-ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಅನ್ನು ನಿಮಗೆ ಕಳುಹಿಸಲಾಗುತ್ತದೆ.
8. OTP ನಮೂದಿಸಿ.
9. OTP ಸಲ್ಲಿಸಿದ ನಂತರ, ಆಧಾರ್ ಅನ್ನು ಡೌನ್‌ಲೋಡ್ ಮಾಡುವ ಆಯ್ಕೆಯು ನಿಮ್ಮ ಕಂಪ್ಯೂಟರ್ ಮಾನಿಟರ್ ಅಥವಾ ಸೆಲ್ ಫೋನ್ ಪರದೆಯಲ್ಲಿ ಗೋಚರಿಸುತ್ತದೆ
10.. ಡೌನ್‌ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಸೇವ್ ಮಾಡಿಕೊಳ್ಳಿ.
ಇದನ್ನೂ ಓದಿ : ನವೆಂಬರ್ 30 ರ ಮೊದಲು ಈ ಕೆಲಸವನ್ನು ಮಾಡಿಮುಗಿಸಿಕೊಳ್ಳಿ , ಇಲ್ಲದಿದ್ದರೆ ಆಗಲಿದೆ ಭಾರೀ ನಷ್ಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ