ನವೆಂಬರ್ 30 ರ ಮೊದಲು ಈ ಕೆಲಸವನ್ನು ಮಾಡಿಮುಗಿಸಿಕೊಳ್ಳಿ , ಇಲ್ಲದಿದ್ದರೆ ಆಗಲಿದೆ ಭಾರೀ ನಷ್ಟ

ನೀವು ಇನ್ನೂ ನಿಮ್ಮ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೆ, ಅದನ್ನು 2 ದಿನಗಳ ಒಳಗೆ ಅಂದರೆ ನವೆಂಬರ್ 30 ರೊಳಗೆ ಸಲ್ಲಿಸಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ಪಿಂಚಣಿ ನಿಂತು ಹೋಗಬಹುದು. ಇಡು ಮಾತ್ರವಲ್ಲ ನವೆಂಬರ್ 30 ರ ಮೊದಲು ಒಳಗೆ ಮಾಡಬೇಕಾದ ಇನ್ನೂ ಕೆಲವು ಕೆಲಸಗಳಿವೆ.   

Written by - Ranjitha R K | Last Updated : Nov 28, 2021, 02:00 PM IST
  • ಈ ಮಹತ್ವದ ಕೆಲಸವನ್ನು ನವೆಂಬರ್ 30 ರ ಮೊದಲು ಮಾಡಿ ಮುಗಿಸಿಕೊಳ್ಳಿ
  • LIC ಹೌಸಿಂಗ್ ಫೈನಾನ್ಸ್‌ನಲ್ಲಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿ
  • ಪಿಂಚಣಿದಾರರು ನವೆಂಬರ್ 30 ರೊಳಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು
ನವೆಂಬರ್ 30 ರ ಮೊದಲು ಈ ಕೆಲಸವನ್ನು ಮಾಡಿಮುಗಿಸಿಕೊಳ್ಳಿ , ಇಲ್ಲದಿದ್ದರೆ ಆಗಲಿದೆ ಭಾರೀ ನಷ್ಟ  title=
ಈ ಮಹತ್ವದ ಕೆಲಸವನ್ನು ನವೆಂಬರ್ 30 ರ ಮೊದಲು ಮಾಡಿ ಮುಗಿಸಿಕೊಳ್ಳಿ (file photo)

ನವದೆಹಲಿ : ನೀವು ಪಿಂಚಣಿದಾರರಾಗಿದ್ದರೆ (Pensioner) ,  ನೀವು ಓದಲೇ ಬೇಕಾದ ಸುದ್ದಿ ಇದು. ನವೆಂಬರ್ ತಿಂಗಳು ಮುಗಿಯುವ ಹಂತದಲ್ಲಿದೆ. ನವೆಂಬರ್ ಅಂತ್ಯದ ಮೊದಲು ಅಂದರೆ ಇನ್ನೆರಡು ದಿನಗಳಲ್ಲಿ ಮಾಡಿ ಮುಗಿಸಬೇಕಾದ ಕೆಲವು ಕಾರ್ಯಗಳಿವೆ. ಈ ಕೆಲಸಗಳನ್ನು ನೀವು ಸಮಯಕ್ಕೆ ಸರಿಯಾಗಿ ಮಾಡದಿದ್ದರೆ, ದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ. 

ನವೆಂಬರ್ 30 ರ ಮೊದಲು ಮಾಡಿ ಮುಗಿಸಬೇಕಾದ ಕೆಲಸಗಳಿವು : 
ಜೀವನ ಪ್ರಮಾಣಪತ್ರವನ್ನು ಸಲ್ಲಿಸಿ :
ಪಿಂಚಣಿದಾರರು ನವೆಂಬರ್ 30 ರ ಮೊದಲು ಜೀವನ ಪ್ರಮಾಣಪತ್ರವನ್ನು (Life certificate) ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ. ನೀವು ಸಹ ಪಿಂಚಣಿದಾರರಾಗಿದ್ದರೆ, ನಿಮ್ಮ ಜೀವನ ಪ್ರಮಾಣಪತ್ರವನ್ನು ಕೊನೆಯ ದಿನಾಂಕದ ಮೊದಲು ಸಲ್ಲಿಸಬೇಕು.  ಪಿಂಚಣಿದಾರರು (Pension) ಜೀವಂತವಾಗಿದ್ದಾರೆ ಎಂಬುದಕ್ಕೆ  ಈ ಜೀವನ ಪ್ರಮಾಣಪತ್ರ ಸಾಕ್ಷಿಯಾಗಿರುತ್ತದೆ. ಜೀವನ ಪ್ರಮಾಣಪತ್ರ ಸಲ್ಲಿಸದೆ ಹೋದರೆ, ಪಿಂಚಣಿ ನಿಲ್ಲಬಹುದು.

ಇದನ್ನೂ ಓದಿ : Indian Railways: ಇನ್ಮುಂದೆ ರೈಲು ಟಿಕೆಟ್ ಬುಕ್ ಮಾಡುವ ವೇಳೆ ಕನ್ಫರ್ಮ್ ಲೋವರ್ ಬರ್ತ್ ಸಿಗಲಿದೆ! ಹೇಗೆ ಇಲ್ಲಿದೆ ವಿವರ

LIC ಹೌಸಿಂಗ್ ಫೈನಾನ್ಸ್‌ನಲ್ಲಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿ :
ನೀವು ಗೃಹ ಸಾಲವನ್ನು (Home loan) ಪಡೆಯಲು ಬಯಸುವುದಾದರೆ, LIC ಹೌಸಿಂಗ್ ಫೈನಾನ್ಸ್‌ನ ವಿಶೇಷ ಗೃಹ ಸಾಲವು ಈ ತಿಂಗಳು ಮುಕ್ತಾಯಗೊಳ್ಳಲಿದೆ. ಈ ವಿಶೇಷ ಕೊಡುಗೆಯ ಅಡಿಯಲ್ಲಿ, ಎಲ್ಐಸಿ ಹೌಸಿಂಗ್ ಫೈನಾನ್ಸ್  (LIC Housing finance) 2 ಕೋಟಿ ರೂ.ವರೆಗಿನ ಗೃಹ ಸಾಲಗಳಿಗೆ ಸಾಲದ ದರವನ್ನು ಶೇಕಡಾ 6.66 ಕ್ಕೆ ಇಳಿಸಿದೆ. ಅಂದರೆ, ಈ ಗೃಹ ಸಾಲಕ್ಕೆ ಕಡಿಮೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಈ ಆಫರ್ ನ ಕೊನೆಯ ದಿನಾಂಕ ನವೆಂಬರ್ 30 ಆಗಿದೆ.  

ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರವೇಶಕ್ಕಾಗಿ ನೋಂದಾಯಿಸಿ :
ಜವಾಹರ ನವೋದಯ ವಿದ್ಯಾಲಯದ (Navodaya school) 9ನೇ ತರಗತಿಯ ಪ್ರವೇಶಕ್ಕಾಗಿ ನವೆಂಬರ್ 30 ರ ಮೊದಲು ಅರ್ಜಿ ಸಲ್ಲಿಸಬೇಕು. 30 ಏಪ್ರಿಲ್ 2022 ರಂದು ನಡೆಯಲಿರುವ ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು   ನವೆಂಬರ್ 30 ಕೊನೆಯ ದಿನಾಂಕವಾಗಿದೆ.  ಈ ದಿನಾಂಕದವರೆಗೆ, ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್‌ಸೈಟ್ navodaya.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ (Online) ಅರ್ಜಿ ಸಲ್ಲಿಸಬಹುದು. 

ಇದನ್ನೂ ಓದಿ :  7th Pay Commission: Big Update - ಈ ದಿನ ಸರ್ಕಾರಿ ನೌಕರರ ಖಾತೆ ಸಿರಲಿದೆ 18 ತಿಂಗಳ DA ಬಾಕಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News