Big update on 500 rupee note : ಕೆಲವು ತಿಂಗಳ ಹಿಂದೆ ಆರ್‌ಬಿಐ 2000 ರೂಪಾಯಿ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿತ್ತು. ಇದರೊಂದಿಗೆ, 2023 ರ ಸೆಪ್ಟೆಂಬರ್ 30 ರೊಳಗೆ 2000 ರೂ ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಡುವಂತೆ ಅಥವಾ ಬದಲಾಯಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಯಿತು. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿಯವರೆಗೆ 2000 ರೂ. ಮುಖ ಬೆಲೆಯ  
ಶೇ.90ಕ್ಕೂ ಹೆಚ್ಚು ನೋಟುಗಳು ಬ್ಯಾಂಕ್‌ಗಳಿಗೆ ವಾಪಸಾಗಿವೆ.  2000 ರೂ. ಮುಖ ಬೆಲೆಯ ನೋಟಿನ ಚಲಾವಣೆ ನಿಂತು ಹೋದರೆ 500 ರೂಪಾಯಿ ನೋಟು ಭಾರತದ ಅತಿದೊಡ್ಡ ಮುಖಬೆಲೆಯ ನೋಟು ಆಗಲಿದೆ.


COMMERCIAL BREAK
SCROLL TO CONTINUE READING

500 ರೂಪಾಯಿ ನೋಟು : 
ಇದೀಗ ಮಾರುಕಟ್ಟೆಯಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗುತ್ತಿದೆ. ಈ ನಕಲಿ ನೋಟುಗಳನ್ನು ಅಷ್ಟು ಸುಲಭವಾಗಿ ಕಂಡು ಹಿಡಿಯುವುದು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರು ಅತ್ಯಂತ ಜಾಗರೂಕತೆಯಿಂದ ವಹಿವಾಟು ನಡೆಸಬೇಕಾಗುತ್ತದೆ. ನಕಲಿ ನೋಟುಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕಾಗುತ್ತದೆ. ಈಗ ನಿಮ್ಮ ಜೇಬಿನಲ್ಲಿರುವ 500 ರೂಪಾಯಿ ನೋಟು ಅಸಲಿಯೇ? ಅಥವಾ ನಕಲಿಯೇ ಎನ್ನುವ ಪ್ರಶ್ನೆ ಉದ್ಬವಿಸುತ್ತದೆ. ಹಾಗಾದರೆ ಅಸಲಿ ಮತ್ತು ನಕಲಿ 500 ರೂ ನೋಟುಗಳ ನಡುವೆ ವ್ಯತ್ಯಾಸವನ್ನು ಹೇಗೆ ಕಂಡುಹಿಡಿಯುವುದು ?  


ಇದನ್ನೂ ಓದಿ : Tata Nexon Facelift: ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ ಬಿಡುಗಡೆ, ಹೊಸ SUV ಬೆಲೆ, ವೈಶಿಷ್ಟ್ಯ ತಿಳಿಯಿರಿ


500 ರೂ. ಗಳ ಅಸಲಿ ನೋಟು ಹೇಗಿರುತ್ತದೆ ? : 
1) ನೋಟಿನ ಮೇಲೆ 500 ರೂ ಮುಖಬೆಲೆಯನ್ನು ಬರೆಯಲಾಗಿರುತ್ತದೆ. 
2) ನೋಟಿನ ಮೇಲೆ 500 ರೂ ಮೌಲ್ಯವನ್ನು ರಹಸ್ಯವಾಗಿ ಮುದ್ರಿಸಲಾಗಿರುತ್ತದೆ. 
3) ದೇವನಾಗರಿ ಲಿಪಿಯಲ್ಲಿ ಐನೂರು ಎಂದು ಬರೆಯಲಾಗಿರುತ್ತದೆ. 
4) ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಚಿತ್ರವಿರುತ್ತದೆ.
5) ಭಾರತ್ ಎಂದು ದೇವನಾಗರಿಯಲ್ಲಿ ಮತ್ತು 'ಇಂಡಿಯಾ' ಎಂದು ಅತಿ  ಸಣ್ಣ ಅಕ್ಷರದಲ್ಲಿ ಮುದ್ರಿಸಲಾಗಿರುತ್ತದೆ. 
6) 'ಭಾರತ್' ಎಂದು ದೇವನಾಗರಿಯಲ್ಲಿ  ಬರೆದಿರುವುದಲ್ಲದೆ, 'ಆರ್‌ಬಿಐ' ಎಂಬ ಭದ್ರತಾ ದಾರ ಅಥವಾ ಪಟ್ಟಿ ಇರುತ್ತದೆ. ಅದರ ಬಣ್ಣ  ಬದಲಾಗುತ್ತದೆ ಎನ್ನುವುದನ್ನು ಗಮನಿಸಬೇಕು. ಈ ನೋಟನ್ನು  ಸ್ವಲ್ಪ ಬಗ್ಗಿಸಿದರೆ, ಭದ್ರತಾ ದಾರದ ಬಣ್ಣವು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ. ಇದನ್ನೂ ಸರಿಯಾಗಿ ಗಮನಿಸಬೇಕಾಗುತ್ತದೆ. 
7) ರಾಜ್ಯಪಾಲರ ಸಹಿ ಮತ್ತು ಮಹಾತ್ಮ ಗಾಂಧಿಯವರ ಭಾವಚಿತ್ರದ ಬಲಭಾಗದಲ್ಲಿ RBI ಲಾಂಛನವನ್ನು ಹೊಂದಿರುತ್ತದೆ.
8) ಮಹಾತ್ಮ ಗಾಂಧಿಯವರ ಭಾವಚಿತ್ರ ಮತ್ತು ಎಲೆಕ್ಟ್ರೋಟೈಪ್‌ನ ವಾಟರ್‌ಮಾರ್ಕ್ (500) ಇರುತ್ತದೆ. .
9) ಮೇಲಿನ ಎಡ ಮತ್ತು ಕೆಳಗಿನ ಬಲಭಾಗದಲ್ಲಿ ಸಂಖ್ಯೆಗಳೊಂದಿಗೆ ನಂಬರ್ ಪ್ಯಾನಲ್ ಇರುತ್ತದೆ. 
10) ಕೆಳಗಿನ ಬಲಭಾಗದಲ್ಲಿ, ಬಣ್ಣ ಬದಲಾಯಿಸುವ ಶಾಯಿಯಲ್ಲಿ (ಹಸಿರು ನೀಲಿ) ರೂಪಾಯಿ ಚಿಹ್ನೆ (500 ರೂ) ಜೊತೆಗೆ ಅಂಕೆಯಲ್ಲಿ ಮುಖಬೆಲೆಯನ್ನು ಬರೆಯಲಾಗಿರುತ್ತದೆ.  
11) ಬಲಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆ ಇರುತ್ತದೆ.


ಇದನ್ನೂ ಓದಿ : ಲಾಭ ಪಡೆದುಕೊಳ್ಳಲು ಇಂದಿನಿಂದಲೇ ಸನ್ನದ್ಧರಾಗಿ, ಶೀಘ್ರದಲ್ಲೇ ಪ್ರಧಾನಿ ಮೋದಿ ಈ ಯೋಜನೆ ಆರಂಭಿಸಲಿದ್ದಾರೆ!


 ದೃಷ್ಟಿಹೀನರಿಗೆ ಕೆಲವು ವೈಶಿಷ್ಟ್ಯಗಳು - 
1.ಮಹಾತ್ಮ ಗಾಂಧಿ ಭಾವಚಿತ್ರ (4), ಅಶೋಕ ಸ್ತಂಭದ ಲಾಂಛನ (11), ಬಲಭಾಗದಲ್ಲಿ 500 ರೂ ಮೈಕ್ರೊಟೆಕ್ಸ್ ಹೊಂದಿರುವ ವೃತ್ತಾಕಾರದ  ಗುರುತು, ಎಡ ಮತ್ತು ಬಲ ಎರಡೂ ಬದಿಗಳಲ್ಲಿ ಐದು ಕೋನೀಯ ಬ್ಲೀಡ್ ರೇಖೆಗಳು.
 2.ಎಡಭಾಗದಲ್ಲಿ ಯಾವ ವರ್ಷದಲ್ಲಿ ನೋಟು ಮುದ್ರಿಸಲಾಯಿತು ಎಂದು ಬರೆಯಲಾಗಿರುತ್ತದೆ. 
 3. ದೇವನಾಗರಿಯಲ್ಲಿ ಸಾಂಕೇತಿಕ ಸಂಖ್ಯೆ 500 ಎಂದು ಮುದ್ರಿತವಾಗಿರುತ್ತದೆ. 


ಇದನ್ನೂ ಓದಿ : Lakhs ಬದಲಿಗೆ Lacs ಎಂದು ಬರೆದರೆ Cheque ಬೌನ್ಸ್ ಆಗುತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ