ಲಾಭ ಪಡೆದುಕೊಳ್ಳಲು ಇಂದಿನಿಂದಲೇ ಸನ್ನದ್ಧರಾಗಿ, ಶೀಘ್ರದಲ್ಲೇ ಪ್ರಧಾನಿ ಮೋದಿ ಈ ಯೋಜನೆ ಆರಂಭಿಸಲಿದ್ದಾರೆ!

Modi Government New Scheme: ಕೇಂದ್ರ ಸರ್ಕಾರವು 2023-24ರ ಕೇಂದ್ರ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು. 2023-24ನೇ ಹಣಕಾಸು ವರ್ಷದಿಂದ 2027-28ನೇ ಹಣಕಾಸು ವರ್ಷದವರೆಗೆ ಈ ಯೋಜನೆಯ ಹಣಕಾಸು ವೆಚ್ಚವನ್ನು 13,000 ಕೋಟಿ ರೂ.ಕಾಯ್ದಿರಿಸಲಾಗಿದೆ.(Business News In Kannda)

Written by - Nitin Tabib | Last Updated : Sep 14, 2023, 06:51 PM IST
  • ಯೋಜನೆಯಡಿ, 30 ಲಕ್ಷ ಕುಟುಂಬಗಳ ಯಾವುದೇ ಒಬ್ಬ ವ್ಯಕ್ತಿಗೆ ಸಂಪರ್ಕ ಕಲ್ಪಿಸಲಾಗುತ್ತದೆ.
  • ಯೋಜನೆಯಡಿಯಲ್ಲಿ, ಶೇ. 5 ರಷ್ಟು ರಿಯಾಯಿತಿ ಬಡ್ಡಿದರದೊಂದಿಗೆ ಈ ಜನರಿಗೆ ರೂ 1 ಲಕ್ಷ (ಮೊದಲ ಕಂತು) ಮತ್ತು ರೂ 2 ಲಕ್ಷ (ಎರಡನೇ ಕಂತು) ವರೆಗೆ ಸಾಲದ ಸಹಾಯವನ್ನು ನೀಡಲಾಗುತ್ತಿದೆ.
  • ಇದಲ್ಲದೆ, ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೋಂದಾಯಿಸಿದ ನಂತರ ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಐಡಿಯನ್ನು ಒದಗಿಸಲಾಗುತ್ತಿದೆ.
ಲಾಭ ಪಡೆದುಕೊಳ್ಳಲು ಇಂದಿನಿಂದಲೇ ಸನ್ನದ್ಧರಾಗಿ, ಶೀಘ್ರದಲ್ಲೇ ಪ್ರಧಾನಿ ಮೋದಿ ಈ ಯೋಜನೆ ಆರಂಭಿಸಲಿದ್ದಾರೆ! title=

ನವದೆಹಲಿ: ಈ ಬಾರಿ ಕೆಂಪು ಕೋಟೆಯ ಆವರಣದಿಂದ, ಪ್ರಧಾನಿ ಮೋದಿ ವಿಶ್ವಕರ್ಮ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು, ಹೀಗಾಗಿ ಈ ಯೋಜನೆ ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಜಯಂತಿಯಂದು ಪಿಎಂ ವಿಶ್ವಕರ್ಮ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಕೇಂದ್ರ ಸರ್ಕಾರವು 2023-24ರ ಕೇಂದ್ರ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು. 2023-24ನೇ ಹಣಕಾಸು ವರ್ಷದಿಂದ 2027-28ನೇ ಹಣಕಾಸು ವರ್ಷದವರೆಗೆ ಈ ಯೋಜನೆಯ ಹಣಕಾಸು ವೆಚ್ಚವನ್ನು 13,000 ಕೋಟಿ ರೂ.ಗಳಿಗೆ ಕಾಯ್ದಿರಿಸಲಾಗಿದೆ.

ಕುಶಲಕರ್ಮಿಗಳು ಹಾಗೂ ಕರಕುಶಲ ಕಾರ್ಮಿಗಳಿಗೆ ಉತ್ತೇಜನ ನೀಡುವ ಗುರಿ
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17 ರಂದು ಚಾಲನೆ ನೀಡಲಿದ್ದಾರೆ ಎಂದು ಹಣಕಾಸು ಸಚಿವಾಲಯದ ಕಚೇರಿ ತಿಳಿಸಿದೆ. ತಮ್ಮ ಕೈ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ಕುಶಲಕರ್ಮಿಗಳು ಮತ್ತು ಕರಕುಶಲ ಕಾರ್ಮಿಗಳಿಗೆ ಸಾಂಪ್ರದಾಯಿಕ ಕೌಶಲ್ಯಗಳ ರೂಢಿಯನ್ನು ಉತ್ತೇಜಿಸುವುದು ಮತ್ತು ಬಲಪಡಿಸುವುದು ಯೋಜನೆಯ ಉದ್ದೇಶವಾಗಿದೆ. ನಮ್ಮ ವಿಶ್ವಕರ್ಮ ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟ ಮತ್ತು ಪ್ರವೇಶವನ್ನು ಸುಧಾರಿಸುವುದು ಇದರ ಗುರಿಯಾಗಿದೆ.

15,000 ರೂ.ಗಳ ಟೂಲ್ಕಿಟ್ ಪ್ರೋತ್ಸಾಹ
ಸಚಿವಾಲಯದ ಪ್ರಕಾರ, ಯೋಜನೆಯಡಿಯಲ್ಲಿ, ಫಲಾನುಭವಿಗಳಿಗೆ 15,000 ರೂಗಳ ಟೂಲ್ಕಿಟ್ ಪ್ರೋತ್ಸಾಹಕವನ್ನು ನೀಡಲಾಗುತ್ತದೆ. ಇದರೊಂದಿಗೆ ದಿನವೊಂದಕ್ಕೆ 500 ರೂ.ಗಳ ವಿದ್ಯಾರ್ಥಿ ವೇತನದೊಂದಿಗೆ ಫಲಾನುಭವಿಗಳಿಗೆ ಮೂಲಭೂತ ಕೌಶಲ್ಯ ತರಬೇತಿಯನ್ನು ನೀಡಲಾಗುವುದು. ವಿಶ್ವಕರ್ಮರನ್ನು ಮೇಲಕ್ಕೆತ್ತುವುದು, ಅವರನ್ನು ಅಭಿವೃದ್ಧಿಯ ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸುವುದು ಮತ್ತು ಪ್ರಯೋಜನಗಳನ್ನು ಒದಗಿಸುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಪ್ರಯತ್ನ ಇದರ ಉದ್ದೇಶವಾಗಿದೆ.

ಇದನ್ನೂ ಓದಿ-ಎಸ್ಐಪಿ ಮೂಲಕ ಮ್ಯೂಚವಲ್ ಫಂಡ್ ಗಳಲ್ಲಿನ ಹೂಡಿಕೆಯಲ್ಲಿ ಗಣನೀಯ ಹೆಚ್ಚಳ, ಹೂಡಿಕೆಯ ಮುನ್ನ ಈ ಸಂಗತಿ ನೆನಪಿನಲ್ಲಿಡಿ!

ಈ ಜನರು ಯೋಜನೆಯ ಪ್ರಯೋಜನ ಪಡೆಯುತ್ತಾರೆ
ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಕೇಂದ್ರ ಸರ್ಕಾರವು 1. ಬಡಗಿಗಳು, 2. ದೋಣಿ ತಯಾರಕರು, 3. ಅಸ್ತ್ರ-ಶಾಸ್ತ್ರ ತಯಾರಾಕರಿಗೆ ನೆರವು ನೀಡಲಿದೆ. ಇದಲ್ಲದೆ 4. ಕಮ್ಮಾರ, 5. ಸುತ್ತಿಗೆ ಮತ್ತು ಟೂಲ್ಕಿಟ್ ತಯಾರಕ, 6. ಬೀಗ ತಯಾರಕರು, 7. ಪತ್ತಾರರು, 8. ಪಾಟರ್, 9. ಶಿಲ್ಪಕಲೆಯಲ್ಲಿ ತೊಡಗಿರುವವರಿಗೆ 10 1. ಚಮ್ಮಾರ/ಶೂ ತಯಾರಕ/ಪಾದರಕ್ಷೆ ಕುಶಲಕರ್ಮಿ, 11. ರಾಜಮೇಸ್ತ್ರಿ, 12. ಬಾಸ್ಕೆಟ್/ಮ್ಯಾಟ್ /ಬ್ರೂಮ್ ಮೇಕರ್/ಕಾಯಿರ್ ನೇಕಾರ, 13. ಗೊಂಬೆ ಮತ್ತು ಆಟಿಕೆ ತಯಾರಕ (ಸಾಂಪ್ರದಾಯಿಕ), 14. ಬಾರ್ಬರ್, 15. ಗಾರ್ಲ್ಯಾಂಡ್ ಮೇಕರ್, 16. ವಾಷರ್ಮನ್, 17. ಟೈಲರ್ ಮತ್ತು 18. ಫಿಶಿಂಗ್ ನೆಟ್ ಮೇಕರ್ ಗಳು ಕೂಡ ಇದರಲ್ಲಿ ಶಾಮಿಲಾಗಿದ್ದಾರೆ. 

ಇದನ್ನೂ ಓದಿ-ಡಿಜಿಟಲ್ ರೂಪಾಯಿ ಕುರಿತು ಹೊಸ ಅಪ್ಡೇಟ್ ಪ್ರಕಟ!

ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ ನೀಡಲಾಗುವುದು
ಯೋಜನೆಯಡಿ, 30 ಲಕ್ಷ ಕುಟುಂಬಗಳ ಯಾವುದೇ ಒಬ್ಬ ವ್ಯಕ್ತಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಯೋಜನೆಯಡಿಯಲ್ಲಿ, ಶೇ. 5 ರಷ್ಟು ರಿಯಾಯಿತಿ ಬಡ್ಡಿದರದೊಂದಿಗೆ ಈ ಜನರಿಗೆ ರೂ 1 ಲಕ್ಷ (ಮೊದಲ ಕಂತು) ಮತ್ತು ರೂ 2 ಲಕ್ಷ (ಎರಡನೇ ಕಂತು) ವರೆಗೆ ಸಾಲದ ಸಹಾಯವನ್ನು ನೀಡಲಾಗುತ್ತಿದೆ. ಇದಲ್ಲದೆ, ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೋಂದಾಯಿಸಿದ ನಂತರ ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಐಡಿಯನ್ನು ಒದಗಿಸಲಾಗುತ್ತಿದೆ. ಯೋಜನೆಯಡಿಯಲ್ಲಿ, ಈ ಕೆಲಸಗಳಿಗೆ ಸಂಬಂಧಿಸಿದ ಜನರ ಕೌಶಲ್ಯ ಅಭಿವೃದ್ಧಿ, ಮಾರುಕಟ್ಟೆ ಪ್ರವೇಶ ಮತ್ತು ಆರ್ಥಿಕ ಬೆಂಬಲಕ್ಕೆ ಗಮನ ನೀಡಲಾಗುವುದು ಎನ್ನಲಾಗಿದೆ. ಅವರಿಗೆ ಮೂಲಭೂತ ಮತ್ತು ಸುಧಾರಿತ ತರಬೇತಿ ನೀಡಲಾಗುವುದು. ಡಿಜಿಟಲ್ ವಹಿವಾಟಿನಲ್ಲೂ ಪ್ರೋತ್ಸಾಹ ನೀಡಲಾಗುವುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News