18 months DA Arrears latest news : ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ. ಬಹಳ ಸಮಯದ ನಂತರ, 18 ತಿಂಗಳ ಡಿಎ ಬಾಕಿ ಬಗ್ಗೆ ದೊಡ್ಡ ಅಪ್ಡೇಟ್ ಹೊರ ಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರ ಶೀಘ್ರದಲ್ಲೇ 18 ತಿಂಗಳ ಡಿಎ ಬಾಕಿ ಹಣವನ್ನು ನೌಕರರ ಖಾತೆಗೆ ವರ್ಗಾಯಿಸಲಿದೆ. ಲೋಕಸಭೆಯಲ್ಲೂ 18 ತಿಂಗಳ ಡಿಎ ಬಾಕಿ ಇರುವ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ. 48 ಲಕ್ಷ ನೌಕರರು ಮತ್ತು 68 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಡಿಎ ಬಾಕಿ ಹಣವನ್ನು ಶೀಘ್ರದಲ್ಲೇ ಪಡೆಯಬಹುದು. 


COMMERCIAL BREAK
SCROLL TO CONTINUE READING

ತುಟ್ಟಿಭತ್ಯೆಯ 3 ಕಂತುಗಳನ್ನು ತಡೆ ಹಿಡಿಯಲಾಗಿತ್ತು : 
ಡಿಎ ಬಾಕಿಗೆ ಸಂಬಂಧಿಸಿದಂತೆ ಸರ್ಕಾರದ ಕಡೆಯಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಒಮ್ಮತ ಮೂಡಿಲ್ಲ. ಆದರೆ ಸರ್ಕಾರವು 18 ತಿಂಗಳ ಡಿಎ ಬಾಕಿಯ ಬಗ್ಗೆ ಶೀಘ್ರದಲ್ಲೇ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಕರೋನಾ ಕಾಲದಲ್ಲಿ ತುಟ್ಟಿಭತ್ಯೆಯ ಮೂರು ಕಂತುಗಳನ್ನು ಸರ್ಕಾರ ತಡೆ ಹಿಡಿದಿತ್ತು. 2021 ರ ಜೂನ್ ತಿಂಗಳಲ್ಲಿ  ಮತ್ತೆ ತುಟ್ಟಿ ಭತ್ಯೆ ನೀಡುವುದನ್ನು ಆರಂಭಿಸಲಾಯಿತು.  


ಇದನ್ನೂ ಓದಿ : ಮನೆ ಬಾಡಿಗೆಗೆ ಕೊಡುವ ಮುನ್ನ ಈ ಮುಖ್ಯ ನಿಯಮಗಳು ತಿಳಿದಿರಿ ! ಇಲ್ಲದಿದ್ದರೆ ಬಾಡಿಗೆದಾರರೇ ಮನೆ ಒಡೆಯರಾಗಬಹುದು !


ಜುಲೈನಲ್ಲಿ ಮತ್ತೆ ಡಿಎ ಹೆಚ್ಚಳ : 
ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರ ಡಿಎಯನ್ನು ಹೆಚ್ಚಿಸಲಾಗಿದೆ. ಸರ್ಕಾರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಿದ್ದು, ನೌಕರರ ತುಟ್ಟಿಭತ್ಯೆ ಶೇ 42ಕ್ಕೆ ಏರಿದೆ. ಜುಲೈ 2023 ರಲ್ಲಿ, ಉದ್ಯೋಗಿಗಳ ಡಿಎಯನ್ನು ಮತ್ತೆ ಹೆಚ್ಚಿಸಲಾಗುತ್ತದೆ. 


 2 ಲಕ್ಷ ರೂ.ಗಿಂತ ಹೆಚ್ಚು ತುಟ್ಟಿಭತ್ಯೆ : 
ಹಂತ-13ರ ಅಧಿಕಾರಿಗಳು 1,23,100 ರಿಂದ 2,15,900 ರೂ. ಹಂತ-14 ಅ ಅಧಿಕಾರಿಗಳು 1,44,200 ರಿಂದ ರೂ 2,18,200 ರವರೆಗೆ ಬಾಕಿ ಡಿಎ   ಪಡೆಯಲಿದ್ದಾರೆ. ಒಂದು ವೇಳೆ ಈ ಬಾಕಿ ಡಿಎ ನೌಕರರ ಖಾತೆ ಸೇರಿದ್ದಲ್ಲಿ 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಸಂಭ್ರಮದ ಕಡಲಲ್ಲಿ ತೇಲಲಿದ್ದಾರೆ. ಡಿಎ ಬಾಕಿಯ ಹಣವನ್ನು ನೌಕರರಿಗೆ ಅವರ ಸಂಬಳದ ಬ್ಯಾಂಡ್ ಆಧಾರದ ಮೇಲೆ ನೀಡಲಾಗುತ್ತದೆ.  


ಇದನ್ನೂ ಓದಿ : Old Pension: ಹಳೆ ಪಿಂಚಣಿ ಯೋಜನೆ ಬಗ್ಗೆ ಬಿಗ್ ಅಪ್ಡೇಟ್! OPS ಜಾರಿ ನಿರ್ಧಾರ ಹಿಂತೆಗೆದುಕೊಳ್ಳುತ್ತಾ ಕೇಂದ್ರ?


ನೌಕರರಿಂದ ನಿರಂತರ ಒತ್ತಾಯ : 
ಕೇಂದ್ರ ನೌಕರರು ತುಟ್ಟಿಭತ್ಯೆ ನಮ್ಮ ಹಕ್ಕು. ಇದನ್ನು  ತಡೆಹಿಡಿಯಬಾರದು ಎಂದು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಬಾಕಿ ಭತ್ಯೆ ಬೇಡಿಕೆ ಕುರಿತು ನೌಕರರು ನ್ಯಾಯಾಲಯದಲ್ಲಿ  ಕೂಡಾ ಮನವಿ ಸಲ್ಲಿಸಿದ್ದರು. ಈ ಕುರಿತು ಸುಪ್ರೀಂ ಕೋರ್ಟ್, ಇದು ನೌಕರರ ಹಕ್ಕು, ಇದನ್ನು ಸ್ಥಗಿತಗೊಳಿಸಬಹುದು ಆದರೆ ತಡೆ ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿ, ಈ ವಿಚಾರವನ್ನು ಪರಿಗಣಿಸುವಂತೆ  ಸೂಚಿಸಿತ್ತು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ