ಮನೆ ಬಾಡಿಗೆಗೆ ಕೊಡುವ ಮುನ್ನ ಈ ಮುಖ್ಯ ನಿಯಮಗಳು ತಿಳಿದಿರಿ ! ಇಲ್ಲದಿದ್ದರೆ ಬಾಡಿಗೆದಾರರೇ ಮನೆ ಒಡೆಯರಾಗಬಹುದು !

ವಿದೇಶದಲ್ಲಿ ವಾಸಿಸುವ ಅನೇಕ ಜನರು ಊರಿನಲ್ಲಿರುವ ತಮ್ಮ ಮನೆಗಳನ್ನು ಬಾಡಿಗೆಗೆ ನೀಡುತ್ತಾರೆ. ಬಾಡಿಗೆ ಪಡೆಯುತ್ತಾರೆಯೇ ಹೊರತು ಕಾನೂನು ನಿಯಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಹಾಗೆ ಮಾಡಬಾರದು. ಹೀಗೆ ಮಾಡಿದರೆ ಮನೆ ನಿಮ್ಮ ಕೈ ತಪ್ಪಿ ಹೋಗಬಹುದು.   

Written by - Ranjitha R K | Last Updated : Apr 24, 2023, 02:51 PM IST
  • ಆಸ್ತಿಗೆ ಸಂಬಂಧಿಸಿದಂತೆ ಕೆಲವು ಕಾನೂನು ನಿಬಂಧನೆಗಳಿವೆ.
  • ಬಾಡಿಗೆ ಮನೆ ಬಗ್ಗೆ ಕೂಡಾ ಕೆಲವು ಕಾನೂನುಗಳಿವೆ.
  • ಪ್ರತಿಕೂಲ ಸ್ವಾಧೀನದ ಕಾನೂನು ಎಂದರೇನು ?
ಮನೆ ಬಾಡಿಗೆಗೆ ಕೊಡುವ ಮುನ್ನ ಈ ಮುಖ್ಯ ನಿಯಮಗಳು ತಿಳಿದಿರಿ ! ಇಲ್ಲದಿದ್ದರೆ ಬಾಡಿಗೆದಾರರೇ ಮನೆ ಒಡೆಯರಾಗಬಹುದು ! title=

ಬೆಂಗಳೂರು : ಆಸ್ತಿಗೆ ಸಂಬಂಧಿಸಿದಂತೆ ಕೆಲವು ಕಾನೂನು ನಿಬಂಧನೆಗಳಿವೆ. ಬಾಡಿಗೆ ಮನೆ ಬಗ್ಗೆ ಕೂಡಾ ಕೆಲವು ಕಾನೂನುಗಳಿವೆ. ಬಾಡಿಗೆ ಮನೆ ನೀಡುವಾಗ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುವಾಗ ಈ ಕಾನೂನು ನಿಯಮಗಳನ್ನು ತಿಳಿದುಕೊಂಡಿರಬೇಕು. ಅನೇಕ ದೊಡ್ಡ ನಗರಗಳಲ್ಲಿ, ದೊಡ್ಡ ಮನೆ ಹೊಂದಿರುವ ಅನೇಕ ಜನರು ಖಾಲಿ ಕೋಣೆ ಅಥವಾ ಮನೆಯ ಅರ್ಧ ಭಾಗವನ್ನು ಅಥವಾ ಇಡೀ ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ನೀಡುತ್ತಾರೆ. ಆದಾಯ ಹೆಚ್ಚುತ್ತದೆ ಎನ್ನುವ ಕಾರಣಕ್ಕೆ ಮನೆ ಬಾಡಿಗೆ ನೀಡಲಾಗುತ್ತದೆ. ವಿದೇಶದಲ್ಲಿ ವಾಸಿಸುವ ಅನೇಕ ಜನರು ಊರಿನಲ್ಲಿರುವ ತಮ್ಮ ಮನೆಗಳನ್ನು ಬಾಡಿಗೆಗೆ ನೀಡುತ್ತಾರೆ. ಬಾಡಿಗೆ ಪಡೆಯುತ್ತಾರೆಯೇ ಹೊರತು ಕಾನೂನು ನಿಯಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಹಾಗೆ ಮಾಡಬಾರದು. ಯಾಕೆಂದರೆ ಕಾನೂನಿನ ಪ್ರಕಾರ ನಿರಂತರವಾಗಿ 12 ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ವಾಸಿಸಿದ ನಂತರ, ಆ ಮನೆ ಬಾಡಿಗೆದಾರರದ್ದೇ ಆಗಲಿದೆ.   

ಪ್ರತಿಕೂಲ ಸ್ವಾಧೀನದ ಕಾನೂನು: 
ಪ್ರತಿಕೂಲ ಸ್ವಾಧೀನದ ಕಾನೂನು ಅಂದರೆ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವ ಕಾನೂನನ್ನು ಬ್ರಿಟಿಷರ ಅವಧಿಯಲ್ಲಿ ಪರಿಚಯಿಸಲಾಯಿತು. ಈ ಹಳೆಯ ಕಾನೂನಿನ ಅಡಿಯಲ್ಲಿ ಅನೇಕ ಬಾರಿ ಮಾಲೀಕರು ತಮ್ಮ ಆಸ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ದೀರ್ಘ ಕಾಲದವರೆಗೆ ಬಾಡಿಗೆಗೆ ಕುಳಿತಿರುವ ಜನರು ಈ ಕಾನೂನಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದ್ದರಿಂದ    ಮನೆಮಾಲೀಕರು ಬಹಳ ಜಾಗರೂಕರಾಗಿರಬೇಕು. 

ಇದನ್ನೂ ಓದಿ : Old Pension: ಹಳೆ ಪಿಂಚಣಿ ಯೋಜನೆ ಬಗ್ಗೆ ಬಿಗ್ ಅಪ್ಡೇಟ್! OPS ಜಾರಿ ನಿರ್ಧಾರ ಹಿಂತೆಗೆದುಕೊಳ್ಳುತ್ತಾ ಕೇಂದ್ರ?

ಅಗ್ರಿಮೆಂಟ್ ಇಲ್ಲದೆ ಮನೆ ಬಾಡಿಗೆ ನೀಡಬೇಡಿ : 
ಮನೆಯ ಮಾಲೀಕರು ಮನೆಯನ್ನು ಬಾಡಿಗೆಗೆ ನೀಡುವುದಾದರೆ, ಬಾಡಿಗೆ ಒಪ್ಪಂದವನ್ನು ಮಾಡಿಸಲೇ ಬೇಕು. ಈ ಅಗ್ರಿಮೆಂಟ್ 11 ತಿಂಗಳುಗಳದ್ದಾ ಗಿರುತ್ತದೆ. ಪ್ರತಿ 11 ತಿಂಗಳಿಗೊಮ್ಮೆ ಈ ಒಪ್ಪಂದವನ್ನು ನವೀಕರಿಸಬೇಕು. ಈ ರೀತಿ ಅಗ್ರಿಮೆಂಟ್ ಮಾಡಿಸಿಕೊಂಡಾಗ ನೀವು ಯಾವಾಗ ಬೇಕಾದರೂ ಬಾಡಿಗೆದಾರರನ್ನು ಬದಲಾಯಿಸಬಹುದು.  ಬಾಡಿಗೆದಾರರು ನಿಮ್ಮ ಮನೆಯಲ್ಲಿ ಹಕ್ಕು ಸಾಧಿಸುವುದು ಸಾಧ್ಯವಾಗುವುದಿಲ್ಲ. 

ಮನೆ ಖಾಲಿ ಮಾಡಿಸಲು ಕಾನೂನು ಸಹಾಯ ಮಾಡುತ್ತದೆ : 
ಬಾಡಿಗೆದಾರರು ನಿಮ್ಮ ಆಸ್ತಿಯನ್ನು ಅಕ್ರಮವಾಗಿ ಅತಿಕ್ರಮಿಸಿಲ್ಲ ಎನ್ನುವುದನ್ನು ಪರಿಶೀಲಿಸುತ್ತಾ ಇರಬೇಕು. ನಿಮ್ಮ ಮನೆಯನ್ನು ಬಾಡಿಗೆಗೆ ಪಡೆದವರು ನಿಮ್ಮ ಆಸ್ತಿಯನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಸಣ್ಣ ಸುಳಿವು ಸಿಕ್ಕರೂ ತಕ್ಷಣವೇ ಅವರನ್ನು ಮನೆ ಖಾಲಿ ಮಾಡುವಂತೆ ಹೇಳಿ. ಬಾಡಿಗೆದಾರರು ಬಾಡಿಗೆ ಪಾವತಿಸದಿದ್ದರೆ, ಅವರ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಎಂದಿಗೂ ಕಡಿತಗೊಳಿಸಬಾರದು. ಬಾಡಿಗೆದಾರರನ್ನು ನಿಮ್ಮ ಆಸ್ತಿಯಿಂದ ಹೊರಹಾಕಲು ಕೋರ್ಟ್ ನೋಟೀಸ್ ಕಳುಹಿಸಬಹುದು.  ನೋಟಿಸ್ ಪಡೆದು ಮನೆ ಖಾಲಿ ಮಾಡದಿದ್ದರೆ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ನಿಮ್ಮ ಮನೆಯಿಂದ ಬಾಡಿಗೆದಾರರನ್ನು ಖಾಲಿ ಮಾಡಿಸುವುದು ಕಾನೂನುಬದ್ಧವಾಗಿ ಸುಲಭವಾಗಿ ಸಾಧ್ಯವಾಗುತ್ತದೆ. 

ಇದನ್ನೂ ಓದಿ : Gold Price: ಆಭರಣ ಪ್ರಿಯರಿಗೆ ಸಿಹಿ ಸುದ್ದಿ- ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ! ಎಷ್ಟಿದೆ ತಿಳಿಯಿರಿ 10 ಗ್ರಾಂ ಬಂಗಾರದ ಬೆಲೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News