Pm Kisan Updates : ಭಾರತದ ಲಕ್ಷಗಟ್ಟಲೆ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13 ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಮೂಲಗಳ ಪ್ರಕಾರ, ಶೀಘ್ರದಲ್ಲೇ 2000 ರೂಪಾಯಿ ರೈತರ ಖಾತೆ ಸೇರಲಿದೆ. PM-KISAN ಯೋಜನೆಯಡಿಯಲ್ಲಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳನ್ನು ಅರ್ಹ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.  ಅಂದರೆ ವಾರ್ಷಿಕವಾಗಿ 6,000 ರೂ.ಯನ್ನು ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಪಿಎಂ ಕಿಸಾನ್ :
ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಹಣವನ್ನು ಪ್ರತಿ ವರ್ಷ ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್‌ನಲ್ಲಿ ಮೂರು ಕಂತುಗಳಲ್ಲಿ  ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಆರ್ಥಿಕ ನೆರವು ಅಗತ್ಯವಿರುವ ರೈತ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ 2018 ರ ಡಿಸೆಂಬರ್‌ನಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿ ರೈತರಿಗೆ ನೇರವಾಗಿ ಅವರ ಖಾತೆಗೆ ಹಣ ಬರುತ್ತದೆ.


ಇದನ್ನೂ ಓದಿ : Business Idea: ಈ ವ್ಯವಹಾರ ಪ್ರಾರಂಭಿಸಿದ್ರೆ ಪ್ರತಿ ತಿಂಗಳು ಲಕ್ಷ ಲಕ್ಷ ಗಳಿಸಬಹುದು!


ಪಿಎಂ ಕಿಸಾನ್ ಯೋಜನೆ :
ಪಿಎಂ ಕಿಸಾನ್ ವೆಬ್‌ಸೈಟ್ ಪ್ರಕಾರ, ಇದು ಕೇಂದ್ರ ವಲಯದ ಯೋಜನೆಯಾಗಿದ್ದು, ಭಾರತ ಸರ್ಕಾರದಿಂದ 100 ಪ್ರತಿಶತ ಹಣವನ್ನು  ಬಿಡುಗಡೆ ಮಾಡಲಾಗುತ್ತದೆ. ಆದರೆ ಪಿಎಂ ಕಿಸಾನ್ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳಿವೆ. ಪ್ರತಿಯೊಬ್ಬ ರೈತರು ಈ ಯೋಜನೆಯ ಲಾಭ ಪಡೆಯಲು ಅರ್ಹರಲ್ಲ. ಸಣ್ಣ ಹಿಡುವಳಿ ಹೊಂದಿರುವ ರೈತರಿಗೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ. 


ಸರ್ಕಾರಿ ಯೋಜನೆ :
ಯಾವುದೇ ಸರ್ಕಾರಿ ಯೋಜನೆಯಾದರೂ ಕೆಲವು ಅರ್ಹತಾ ಮಾನದಂಡಗಳನ್ನು ಹೊಂದಿರುತ್ತದೆ. ಅದರ ಆಧಾರದ ಮೇಲೆ ಪ್ರಯೋಜನಗಳನ್ನು ಬಿಡುಗಡೆ ಮಾಡಲಾಗುತ್ತದೆ. ಭಾರತೀಯ ಪ್ರಜೆಗಳಾಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ಅರ್ಹರಾಗಿರುತ್ತಾರೆ. ಇದಲ್ಲದೆ, ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿಯನ್ನು ಹೊಂದಿರುವ ಎಲ್ಲಾ ಭೂಹಿಡುವಳಿ ರೈತ ಕುಟುಂಬಗಳು ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. 


ಇದನ್ನೂ ಓದಿ : Arecanut today price: ರಾಜ್ಯದ ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹೇಗಿದೆ ನೋಡಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.