7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ. ನೌಕರರ ತುಟ್ಟಿಭತ್ಯೆಯನ್ನು ಮತ್ತೆ ಹೆಚ್ಚಿಸಲಾಗುವುದು. ಇತ್ತೀಚೆಗಷ್ಟೇ ಈ ವರ್ಷದ ತುಟ್ಟಿಭತ್ಯೆಯನ್ನು ಏರಿಸಲಾಗಿದೆ. ವೆಚ್ಚಕ್ಕೆ ಅನುಗುಣವಾಗಿ ಶೇ.4 ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಉದ್ಯೋಗಿಗಳ ಡಿಎ ಶೇ.38ರಿಂದ ಶೇ.42ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಪಿಂಚಣಿದಾರರ  ಡಿ ಆರ್ ಕೂಡಾ ಶೇ 4ರಷ್ಟು ಹೆಚ್ಚಿಸಲಾಗಿದೆ. ಇದೀಗ ಮತ್ತೊಮ್ಮೆ ತುಟ್ಟಿ ಭತ್ಯೆ ಹೆಚ್ಚಿಸಲು ಸರ್ಕಾರ ಸಿದ್ಧತೆ ನಡೆಸಿದೆ.


COMMERCIAL BREAK
SCROLL TO CONTINUE READING

 ಮತ್ತೆ ಹೆಚ್ಚಾಗಲಿದೆ ಡಿಎ : 
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜುಲೈನಲ್ಲಿ ಮತ್ತೊಮ್ಮೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಲಿದೆ. ಇದೀಗ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು 42%ಕ್ಕೆ ಏರಿಸಲಾಗಿದೆ. ಜುಲೈನಿಂದ ಮತ್ತೆ ಡಿಎ ಹೆಚ್ಚಳವಾದರೆ ಡಿಎ  ಶೇ 42 ರಿಂದ 46% ಕ್ಕೆ ಏರಲಿದೆ. ಈ ಬಗ್ಗೆ  ಅಕ್ಟೋಬರ್‌ನಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. 


ಇದನ್ನೂ ಓದಿ : ಹೊಸ ರಜಾ ನೀತಿಯನ್ನು ಜಾರಿಗೊಳಿಸಿದ ಸರ್ಕಾರ ! ಸರ್ಕಾರಿ ನೌಕರರಿಗೆ ಇನ್ನು ಇಷ್ಟು ದಿನ ಸಿಗಲಿದೆ Special Casual Leave


ವರ್ಷಕ್ಕೆ ಎರಡು ಬಾರಿ ಏರಿಕೆಯಾಗುತ್ತದೆ ಡಿಎ  :
ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ನೌಕರರು ಮತ್ತು ಪಿಂಚಣಿದಾರರಿಗೆ ಅರ್ಧ-ವಾರ್ಷಿಕ ಆಧಾರದ ಮೇಲೆ DA ಮತ್ತು DR ಅನ್ನು ಹೆಚ್ಚಿಸಲಾಗುತ್ತದೆ. 2023 ರ ತುಟ್ಟಿಭತ್ಯೆ ದರವನ್ನು ಜನವರಿಯಲ್ಲಿ ಹೆಚ್ಚಿಸಲಾಗಿದೆ. ಎಐಸಿಪಿಐ ದತ್ತಾಂಶವನ್ನು ಆಧರಿಸಿ ಸರ್ಕಾರವು ಡಿಎ ಹೆಚ್ಚಳವನ್ನು ನಿರ್ಧರಿಸುತ್ತದೆ.


AICPI ಅಂಕಿಅಂಶಗಳು :
ಏಪ್ರಿಲ್‌ನ ಲಾಸ್ಟ್ ವರ್ಕಿಂಗ್ ಡೇಯಂದು, ಮಾರ್ಚ್‌ನ ಎಐಸಿಪಿಐ ಅಂಕಿಅಂಶಗಳು ಬಿಡುಗಡೆಯಾಗಲಿವೆ.  ಅಂದಾಜಿನ ಪ್ರಕಾರ ಈ ಬಾರಿಯೂ ಕೂಡಾ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆಯಾಗಲಿದೆ ಎನ್ನಲಾಗಿದೆ.  ಫೆಬ್ರವರಿಯಲ್ಲಿ ಎಐಸಿಪಿಐ ಅಂಕಿ ಅಂಶದಲ್ಲಿ 0.1 ಪಾಯಿಂಟ್ ಇಳಿಕೆಯಾಗಿದ್ದು,  ಈ ಅಂಕ 132.7 ಕ್ಕೆ ಇಳಿದಿದೆ. ಜನವರಿಯಲ್ಲಿ ಈ ಅಂಕಿ ಅಂಶ 132.8 ಆಗಿತ್ತು.  ಈ ಅಂಕಿ ಅಂಶ ಮಾರ್ಚ್ ನಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ. ಇದರೊಂದಿಗೆ ಜುಲೈನಲ್ಲಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್‌ನಲ್ಲಿ ಶೇಕಡಾ 3 ರಿಂದ 4 ರಷ್ಟು  ಏರಿಕೆಯಾಗುವುದು ಖಚಿತ ಎನ್ನಲಾಗಿದೆ.


ಇದನ್ನೂ ಓದಿ : Vodafone-Idea ನಿರ್ದೇಶಕರ ಮಂಡಳಿಗೆ ಕುಮಾರ್ ಮಂಗಲಮ್ ಬಿರ್ಲಾ ರೀಎಂಟ್ರಿ


ಹೆಚ್ಚಾಗುವುದು ವೇತನ : 
ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇ.46ಕ್ಕೆ ಹೆಚ್ಚಿಸಿದರೆ, ವೇತನದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಉದಾಹರಣೆಗೆ, ಉದ್ಯೋಗಿಯ ಮೂಲ ವೇತನ 18000 ರೂ ಆಗಿದ್ದರೆ, 42%  ದರಡ ಅನ್ವಯ 7,560 ರೂ. ಡಿಎ ಪಡೆಯಲಿದ್ದಾರೆ. ಇನ್ನು ಡಿಎ 46% ಕ್ಕೆ ಏರಿಕೆಯಾದರೆ ಉದ್ಯೋಗಿಗಳ ಡಿಎ 8,280 ರೂಪಾಯಿಗೆ ಏರಿಕೆಯಾದಂತೆ ಆಗುತ್ತದೆ. ಈ ಮೂಲಕ ಉದ್ಯೋಗಿಗಳ ವೇತನ ತಿಂಗಳಿಗೆ 720 ರೂ.ಯಷ್ಟು  ಹೆಚ್ಚಳವಾಗಿದೆ. 


18 ತಿಂಗಳ ಬಾಕಿ ಯಾವಾಗ ಬರುವುದು ಖಾತೆಗೆ : 
ಸದ್ಯ ನೌಕರರ 18 ತಿಂಗಳ ಬಾಕಿ ಡಿಎ ವಿಚಾರದಲ್ಲಿ ಯಾವುದೇ ಚರ್ಚೆ  ನಡೆದಿಲ್ಲ. ಕೊರೊನಾ ಅವಧಿಯಲ್ಲಿ ತಫೆ ಹಿಡಿಯಲಾಗಿರುವ ತುಟ್ಟಿಭತ್ಯೆ  ಪಾವತಿ ಮಾಡುವಂತೆ ನೌಕರರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಆದರೆ ತಮ್ಮ 18 ತಿಂಗಳ ಬಾಕಿ ಡಿಎ ಪಡೆಯಲು  ಉದ್ಯೋಗಿಗಳು ಇನ್ನಷ್ಟು ದಿನ ಕಾಯಬೇಕಾಗಬಹುದು. 


ಇದನ್ನೂ ಓದಿ ಬಂಪರ್ ಮಾಸಿಕ ಆದಾಯಕ್ಕಾಗಿ ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ


ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ನೌಕರರ ತುಟ್ಟಿಭತ್ಯೆಯನ್ನು  ತಡೆ ಹಿಡಿದಿದ್ದ ಸರ್ಕಾರಕ್ಕೆ  34402.32 ಕೋಟಿ ರೂ.ಗಳ ಲಾಭವಾಗಿದೆ. ಪ್ರಸ್ತುತ 48 ಲಕ್ಷ ನೌಕರರು ಮತ್ತು 68 ಲಕ್ಷ ಪಿಂಚಣಿದಾರರು ಡಿಎ ಬಾಕಿ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನವೇ ಸರ್ಕಾರ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.