Bike Under 60000 Rupees: 60 ಸಾವಿರಕ್ಕೂ ಕಡಿಮೆ ಬೆಲೆಗೆ ಸಿಗುವ ಈ ಬೈಕ್ ಗಳು 60 kmpl ಗಿಂತಲೂ ಹೆಚ್ಚು ಮೈಲೇಜ್ ನೀಡುತ್ತವೆ
Best Mileage Bike: ಭಾರತೀಯ ಬೈಕ್ ಮಾರುಕಟ್ಟೆಯಲ್ಲಿ 60 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗುವ ಕೆಲ ಮೋಟಾರ್‌ಸೈಕಲ್ ಗಳಿದ್ದು, ಅವು ಪ್ರತಿ ಲೀಟರ್ ಪೆಟ್ರೋಲ್ ಗೆ 60 ಕಿಲೋ ಮೀಟರ್ ಗಿಂತಲು ಹೆಚ್ಚು ಮೈಲೇಜ್ ನೀಡುತ್ತವೆ.
Best Mileage Bike At Low Price: ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಜನಸಾಮಾನ್ಯರನ್ನು ಕಂಗಾಲಾಗಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಬಿಟ್ಟು, ಪರ್ಯಾಯಗಳನ್ನು ಹುಡುಕುತ್ತಿದ್ದಾರೆ ಅಥವಾ ಉತ್ತಮ ಮೈಲೇಜ್ ಹೊಂದಿರುವ ಪೆಟ್ರೋಲ್-ಡೀಸೆಲ್ ವಾಹನಗಳನ್ನು ಹುಡುಕುತ್ತಿದ್ದಾರೆ. ನಾವು ದ್ವಿಚಕ್ರ ವಾಹನಗಳ ಬಗ್ಗೆ ಮಾತನಾಡುವುದಾದರೆ, ಮಾರುಕಟ್ಟೆಯಲ್ಲಿ ಅಂತಹ ಹಲವು ಮೋಟಾರ್‌ಸೈಕಲ್ (Best Mileage Bikes) ಗಳಿದ್ದು, ಅವುಗಳ ಮೈಲೇಜ್ ಕೂಡ ಜಬರ್ದಸ್ತ್ ಆಗಿವೆ. ನೀವೂ ಕೂಡ ಅಂತಹ ಮೋಟಾರ್‌ಸೈಕಲ್ ಹುಡುಕಾಟದಲ್ಲಿದ್ದರೆ. ಈ ಲೇಖನವನ್ನು ತಪ್ಪದೆ ಓದಿ.
ಇಂದು ನಾವು ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತವಾಗಿರುವ ಅಂತಹ ಕೆಲವು ಮೋಟಾರ್‌ಸೈಕಲ್‌ಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ, ಈ ಬೈಕ್ ಗಳ ಬೆಲೆ 60 ಸಾವಿರ ರೂಪಾಯಿಗಳಿಗಿಂತಲೋ ಕಡಿಮೆ ಆದರೆ ಅವುಗಳ ಮೈಲೇಜ್ ಲೀಟರ್‌ಗೆ 60 ಕಿಲೋ ಮೀಟರ್ ಗಳಿಗಿಂತ ಹೆಚ್ಚು.
TVS Sport
ದೆಹಲಿಯಲ್ಲಿ TVS Sport ಎಕ್ಸ್ ಶೋ ರೂಂ ಬೆಲೆ ರೂ.57 ಸಾವಿರ. ಇದು ಟಿವಿಎಸ್‌ನ ಹೆಚ್ಚು ಮಾರಾಟವಾಗುವ ಬೈಕ್‌ಗಳಲ್ಲಿ ಒಂದಾಗಿದೆ. ಬೈಕಿನ ನಿರ್ವಹಣಾ ವೆಚ್ಚವೂ ತುಂಬಾ ಕಡಿಮೆ. ಜನ ಇದನ್ನು ತುಂಬಾ ಇಷ್ಟಪಡುತ್ತಾರೆ. ಕಂಪನಿಯು ಈ ಬೈಕ್‌ನಲ್ಲಿ 109 ಸಿಸಿ ಎಂಜಿನ್ ಅನ್ನು ನೀಡಿದ್ದು, ಇದು 8.18 ಬಿಹೆಚ್‌ಪಿ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಬೈಕ್ 75 ಕಿಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
Bajaj CT100
ಬಜಾಜ್ CT100 ಬೆಲೆ 52 ಸಾವಿರ ರೂಪಾಯಿಗಳು (ಎಕ್ಸ್ ಶೋ ರೂಂ). ಇದು 102 cc 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ, ಇದು 5.81 kW ಗರಿಷ್ಠ ಶಕ್ತಿ ಮತ್ತು 8.34 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಕಂಪನಿಯು 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ನೀಡಿದೆ. ಈ ಬೈಕ್ ಗಂಟೆಗೆ 80 ಕಿ.ಮೀ.ಗೂ ಹೆಚ್ಚು ಮೈಲೇಜ್ ನೀಡುತ್ತದೆ.
ಇದನ್ನೂ ಓದಿ-Budget 2022: ತೆರಿಗೆ ಪಾವತಿದಾರರಿಗೊಂದು ಸಂತಸದ ಸುದ್ದಿ, 8 ವರ್ಷಗಳ ಬಳಿಕ ಸಿಗಲಿದೆ ಈ ಲಾಭ!
Hero HF DELUXE
Hero MotoCorp ಕಂಪನಿಯ Hero HF DELUXE ನ ಲುಕ್ ಮತ್ತು ಕಂಫ಼ರ್ಟ್ ತುಂಬಾ ಚೆನ್ನಾಗಿದೆ. ದೆಹಲಿಯಲ್ಲಿ ಇದರ ಮೂಲ ರೂಪಾಂತರದ ಎಕ್ಸ್ ಶೋ ರೂಂ ಬೆಲೆ ರೂ 53 ಸಾವಿರದಿಂದ ಪ್ರಾರಂಭವಾಗುತ್ತದೆ. ಇದು 97.2cc ಎಂಜಿನ್ ಹೊಂದಿದ್ದು 5.9kw ಪವರ್ ಮತ್ತು 8.5Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ 60 ರಿಂದ 70 kmpl ಮೈಲೇಜ್ ನೀಡುತ್ತದೆ.
ಇದನ್ನೂ ಓದಿ-Post Office ನಿಯಮಗಳಲ್ಲಿ ಬದಲಾವಣೆ, ಇನ್ಮುಂದೆ ಕೇವಲ ಪಾಸ್ಬುಕ್ ನಿಂದ ನೀವು ಈ ಕೆಲಸ ಮಾಡಲು ಸಾಧ್ಯವಿಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.