Cheapest Top 3 e-Bikes: ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆ ಹಿನ್ನೆಲೆ, ಅದರಲೂ ವಿಶೇಷವಾಗಿ ದ್ವಿಚಕ್ರ ವಾಹನ ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತಮ ಆಯ್ಕೆಯಾಗಿ ಪರಿಗಣಿಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ಒಂದಕ್ಕಿಂತ ಅದ್ಭುತ ಮತ್ತೊಂದು ಎನ್ನುವಂತೆ ಎಲೆಕ್ಟ್ರಿಕ್ ಬೈಕುಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದೆ.
Cheapest Top 3 e-Bikes: ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆ ಹಿನ್ನೆಲೆ, ಅದರಲೂ ವಿಶೇಷವಾಗಿ ದ್ವಿಚಕ್ರ ವಾಹನ ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತಮ ಆಯ್ಕೆಯಾಗಿ ಪರಿಗಣಿಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ಒಂದಕ್ಕಿಂತ ಅದ್ಭುತ ಮತ್ತೊಂದು ಎನ್ನುವಂತೆ ಎಲೆಕ್ಟ್ರಿಕ್ ಬೈಕುಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದೆ. ಇವು ಕೇವಲ ಅಗ್ಗದ ದರದ ಬೈಕ್ ಗಳಷ್ಟೇ ಆಗಿರದೆ ಉತ್ತಮ ಡ್ರೈವಿಂಗ್ ರೇಂಜ್ ಕೂಡ ಹೊಂದಿವೆ.
ಇಲೆಕ್ಟ್ರಿಕ್ ವಾಹನ ಸೆಗ್ಮೆಂಟ್ ನಲ್ಲಿ ಹಲವು ದಿಗ್ಗಜ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಪರಿಚಯಿಸುತ್ತಿದ್ದರೆ, ಇನ್ನೊಂದೆಡೆ ಕೆಲ ಹೊಸ ಸ್ಟಾರ್ಟ್ ಆಪ್ ಕಂಪನಿಗಳೂ ಕೂಡ ಮಾರುಕಟ್ಟೆಯಲ್ಲಿ ತನ್ನದೇ ಆದ ಹವಾ ಸೃಷ್ಟಿಸಿವೆ. ಹಾಗಾದರೆ ಬನ್ನಿ ದೇಶದಲ್ಲಿ ಹವಾ ಸೃಷ್ಟಿಸಿದ ಇಂತಹುದೇ ಮೂರು ಅಗ್ಗದ ಹಾಗೂ ಬೆಸ್ಟ್ ಡ್ರೈವಿಂಗ್ ರೇಂಜ್ ಹೊಂದಿರುವ ಇ-ಬೈಕ್ಸ್ ಗಳ ಕುರಿತು ಮಾಹಿತಿ ಪಡೆಯೋಣ.
ಇದನ್ನೂ ಓದಿ-Bajaj Chetak Electric Scooter ಬುಕಿಂಗ್ ಆರಂಭ, ಹೊಸ ಅವತಾರದಲ್ಲಿ ಅತ್ಯಂತ ಜನಪ್ರಿಯ ಸ್ಕೂಟರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. Joy E- Monster ಗುಜರಾತ್ ಮೂಲದ ಸ್ಟಾರ್ಟ್ಅಪ್ ಕಂಪನಿಯಾಗಿರುವ ಜಾಯ್ ಇ-ಬೈಕ್‌ನ ಈ ಸ್ಪೋರ್ಟ್ಸ್ ಲುಕಿಂಗ್ ಬೈಕ್ ನಿಮಗೆ ಉತ್ತಮ ಆಯ್ಕೆ ಸಾಬೀತಾಗಲಿದೆ.. ಕಂಪನಿಯ ಈ ಬೈಕನ್ನು ಹೋಂಡಾ ಗ್ರೋಮ್ 125 ನಿಂದ ಸ್ಫೂರ್ತಿ ಪಡೆದಿದೆ. ಇದರಲ್ಲಿ ಕಂಪನಿಯು 250W ಸಾಮರ್ಥ್ಯದ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟರ್ ಮತ್ತು 72 ವಿ, 39 ಎಹೆಚ್‌ನ ಲಿಥಿಯಂ ಬ್ಯಾಟರಿ ಪ್ಯಾಕ್ ಅನ್ನು ಬಳಸಿದೆ. ಈ ಬೈಕು ಗಂಟೆಗೆ ಗರಿಷ್ಠ 25 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದು. ಈ ಬೈಕು ಒಂದೇ ಚಾರ್ಜ್‌ನಲ್ಲಿ 100 ಕಿ.ಮೀ ವರೆಗೆ ಡ್ರೈವಿಂಗ್ ರೇಂಜ್ ನೀಡುತ್ತದೆ ಮತ್ತು ಅದನ್ನು ಚಲಾಯಿಸುವ ವೆಚ್ಚವು ಪ್ರತಿ ಕಿ.ಮೀ.ಗೆ ಕೇವಲ 25ಪೈಸೆ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 5 ರಿಂದ 5.30 ಗಂಟೆಗಳ ಸಮಯಾವಕಾಸ ಬೇಕಾಗುತ್ತದೆ. - ಬೆಲೆ: 98,999 ರೂ.(ದೆಹಲಿ ಎಕ್ಸ್ ಷೋ ರೂಮ್ ಬೆಲೆ). - ಡ್ರೈವಿಂಗ್ ರೇಂಜ್: 100 ಕಿ.ಮೀ.
2. Revolt RV400 - ರಿವಾಲ್ಟ್ ಮೋಟಾರ್ಸ್ ಈ ಬೈಕನ್ನು ದೇಶೀಯ ಮಾರುಕಟ್ಟೆಯಲ್ಲಿ 2019 ರಲ್ಲಿ ಬಿಡುಗಡೆ ಮಾಡಿದೆ. ಈ ಬೈಕು ಒಂದು ಬಾರಿ ಪಾವತಿ ಮತ್ತು ಚಂದಾದಾರಿಕೆ ಯೋಜನೆಯಡಿ ಕೂಡ ಮಾರಾಟಕ್ಕೆ ಲಭ್ಯವಿದೆ. ಈ ಬೈಕ್‌ನಲ್ಲಿ ಕಂಪನಿಯು 5 ಕಿ.ವ್ಯಾ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟರ್ ಮತ್ತು 3.24 ಕಿ.ವ್ಯಾ ಸ್ವಾಪ್ ಮಾಡಬಹುದಾದ ಬ್ಯಾಟರಿ ಪ್ಯಾಕ್ ನೀಡಿದೆ. ಈ ಬೈಕ್‌ನೊಂದಿಗೆ ಕಂಪನಿಯು 8 ವರ್ಷ ಅಥವಾ 1.5 ಲಕ್ಷ ಕಿಲೋಮೀಟರ್ ವಾರಂಟಿ ನೀಡುತ್ತಿದೆ. ಈ ಬೈಕು ಒಂದೇ ಚಾರ್ಜ್‌ನಲ್ಲಿ 156 ಕಿಲೋಮೀಟರ್‌ಗಳಷ್ಟು ಡ್ರೈವಿಂಗ್ ರೇಂಜ್ ನೀಡುತ್ತದೆ, ಈ ಬೈಕ್‌ನ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4.5 ರಿಂದ 5 ಗಂಟೆಗಳ ಸಮಯ ಬೇಕಾಗುತ್ತದೆ. ಚಂದಾದಾರಿಕೆ ಯೋಜನೆಯಡಿ, ಈ ಬೈಕು ಮಾಸಿಕ ಕಂತು 6,075 ಮತ್ತು ತಿಂಗಳಿಗೆ 4,399 ರೂಗಳಲ್ಲಿ ಲಭ್ಯವಿದೆ. ಇದರ ಟೆನ್ಯೋರ್ ಕ್ರಮವಾಗಿ 24 ಮತ್ತು 36 ತಿಂಗಳುಗಳು ಇರಲಿವೆ. ಇತ್ತೀಚೆಗೆ, ಕಂಪನಿಯು ಹೆಚ್ಚಿನ ಬೇಡಿಕೆಯಿಂದಾಗಿ ಈ ಬೈಕು ಕಾಯ್ದಿರಿಸುವಿಕೆಯನ್ನು ನಿಲ್ಲಿಸಿದೆ, ಆದರೆ ಶೀಘ್ರದಲ್ಲೇ ಅದನ್ನು ಮತ್ತೆ ಆರಂಭಿಸಲು ಕಂಪನಿ ಯೋಜನೆ ರೂಪಿಸುತ್ತಿದೆ. - ಬೆಲೆ: 1.03 ಲಕ್ಷ ರೂ.ಗಳಿಂದ 1.18 ಲಕ್ಷ ರೂ.ಗಳವರೆಗೆ (ದೆಹಲಿ ಎಕ್ಸ್ ಶೂ ರೂಮ್ ಬೆಲೆ ) - ಡ್ರೈವಿಂಗ್ ರೇಂಜ್: 156 ಕಿ.ಮೀ.
3. Atum 1.0 - ಹೈದರಾಬಾದ್ ಮೂಲದ ಸ್ಟಾರ್ಟ್ -ಅಪ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಹೊಸ ಎಲೆಕ್ಟ್ರಿಕ್ ಬೈಕು ಅಟಮ್ 1.0 ಅನ್ನು ಮಾರುಕಟ್ಟೆಯಲ್ಲಿ ವಿತರಿಸಲು ಪ್ರಾರಂಭಿಸಿದೆ. ಇದು ಕೆಫೆ ರೇಸರ್ ಶೈಲಿಯ ಎಲೆಕ್ಟ್ರಿಕ್ ಬೈಕ್ ಆಗಿದ್ದು, ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ICAT) ಮೂಲಕ ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಎಂದು ಪ್ರಮಾಣೀಕೃತಗೊಂಡಿದೆ. ಕಂಪನಿಯು ತನ್ನ ಬೈಕ್ ನಲ್ಲಿ 48 ವಿ ಸಾಮರ್ಥ್ಯದ 250 ಡಬ್ಲ್ಯೂ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಿದೆ. ಇದು ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತದೆ. ಈ ಬೈಕು ಒಂದೇ ಚಾರ್ಜ್‌ನಲ್ಲಿ 100 ಕಿ.ಮೀ ವರೆಗೆ ಡ್ರೈವಿಂಗ್ ರೇಂಜ್ ಹೊಂದಿದೆ ಮತ್ತು ಈ ಬೈಕು ಗಂಟೆಗೆ ಗರಿಷ್ಠ 25 ಕಿ.ಮೀ ವೇಗದಲ್ಲಿ ಚಲಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. - ಬೆಲೆ: 50,000 ರೂ.(ಎಕ್ಸ್ ಷೋ ರೂಮ್ ಬೆಲೆ) - ಡ್ರೈವಿಂಗ್ ರೇಂಜ್: 100 ಕಿ.ಮೀ.