BMW G 310 RR: ವಿಶ್ವಾದ್ಯಂತ BMW Motorrad ಜನಪ್ರಿಯ ಐಷಾರಾಮಿ ವಾಹನಗಳ ಬ್ರಾಂಡ್ ಎಂದು ಗುರುತಿಸಲ್ಪಟ್ಟಿದೆ. ಈ ಕಂಪನಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಪ್ರೀಮಿಯಂ ಕಾರುಗಳು ಮತ್ತು ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿದೆ. 2 ವರ್ಷಗಳ ಹಿಂದೆ ಕಂಪನಿಯು BMW G 310 RR ಪವರ್ ಪ್ಯಾಕ್ಡ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಬೈಕ್‌ಗೆ ಮಾರುಕಟ್ಟೆಯಲ್ಲಿ ಉತ್ತಮ ಕ್ರೇಜ್ ಸಿಕ್ಕಿತು. BMW ಇತ್ತೀಚೆಗೆ ನವೀಕರಿಸಿದ G 310 RR ಸರಣಿಯನ್ನು ಪ್ರಕಟಿಸಿದೆ.


COMMERCIAL BREAK
SCROLL TO CONTINUE READING

ಕಂಪನಿಯು BMW G 310 RR ಬೈಕ್ ವಿವಿಧ ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ವಾಹನದ ನೋಟವನ್ನು ಸುಧಾರಿಸಲು ಕೆಲವು ಕಾಸ್ಮೆಟಿಕ್ ಬದಲಾವಣೆ ಮಾಡಲಾಗಿದೆ. ಈ ಮೋಟಾರ್‌ಸೈಕಲ್ ಅನ್ನು ಇತ್ತೀಚೆಗೆ ರೇಸಿಂಗ್ ಮೆಟಾಲಿಕ್ ಬ್ಲೂ ಕಲರ್ ಸ್ಕೀಮ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಬೈಕ್ ಕಾಸ್ಮಿಕ್ ಬ್ಲಾಕ್ ಮತ್ತು ಸ್ಟೈಲ್ ಸ್ಪೋರ್ಟ್ ಶೇಡ್‌ಗಳಲ್ಲಿ ಸಹ ಲಭ್ಯವಿದೆ. ಆದರೆ ವಾಹನದ ವೈಶಿಷ್ಟ್ಯಗಳು ಬದಲಾಗಿಲ್ಲ. 


ಇದನ್ನೂ ಓದಿ:Arecanut Price in Karnataka: ಶಿವಮೊಗ್ಗ, ಚಿತ್ರದುರ್ಗ & ದಾವಣಗೆರೆಯಲ್ಲಿ ಇಂದಿನ ಅಡಿಕೆ ಧಾರಣೆ


BMW G 310 RR ಬೈಕ್ 313 cc ಸಿಂಗಲ್ ಸಿಲಿಂಡರ್ ವಾಟರ್ ಕೂಲ್ಡ್ ಎಂಜಿನ್‌ ಹೊಂದಿದೆ. ಇದು 9,700 rpm ನಲ್ಲಿ 33.52 bhp ಯ ಗರಿಷ್ಠ ಶಕ್ತಿಯನ್ನು ಮತ್ತು 7,700 rpm ನಲ್ಲಿ 25.3 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕ್‌ಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಇದೆ. ಗಂಟೆಗೆ 160 ಕಿಮೀ ವೇಗವನ್ನು ಹೊಂದಿದೆ.


ಹಿಂದಿನ ಬೈಕ್‌ಗಳಿಗೆ ಹೋಲಿಸಿದರೆ ಈ ಹೊಸ ಬಣ್ಣದ ಬೈಕ್‌ ಸಕತ್ತಾಗಿದೆ. ಇದು ಹಿಂದಿನ ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್, ಮುಂಭಾಗದಲ್ಲಿ ದೊಡ್ಡ ಪಾರದರ್ಶಕ ವಿಸರ್, ಅದೇ ವಿಶಿಷ್ಟವಾದ ಸ್ಪ್ಲಿಟ್ ಆಸನ ವ್ಯವಸ್ಥೆ ಮತ್ತು ಪಿಲಿಯನ್ ಅಡಿಯಲ್ಲಿ ಎಲ್‌ಇಡಿ ಲೈಟ್ ಅನ್ನು ಒಳಗೊಂಡಿದೆ.


ಇದನ್ನೂ ಓದಿ:ಮೋದಿ ಸರ್ಕಾರದ ಈ ಯೋಜನೆಯಿಂದ ಲಕ್ಷಗಟ್ಟಲೆ ಆದಾಯ.. ಹೀಗೆ ಪಡೆಯಿರಿ!


ಹೊಸ ಆವೃತ್ತಿಯ ಬೆಲೆ ಎಷ್ಟು? : BMW G 310 RR ಬೈಕ್‌ ಹೊಸ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದ್ದು, ಇದರ ಬೆಲೆ 3.05 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಈ ವಾಹನವನ್ನು BMW Motorrad ಅಧಿಕೃತ ಡೀಲರ್‌ಶಿಪ್‌ಗಳಿಂದ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.