Boeing CEO Dave Calhoun met PM Narendra Modi:  ವಾಷಿಂಗ್ಟನ್ ಡಿ.ಸಿ. ಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬೋಯಿಂಗ್  ಅಧ್ಯಕ್ಷ ಹಾಗೂ ಸಿಇಓ ಡೇವಿಡ್ ಕಲ್ಹೌನ್ ಅವರು ಮಹತ್ವದ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರು  ಭಾರತದೊಂದಿಗೆ ಬೋಯಿಂಗ್‍ ನ ಸುಮಾರು ಎಂಟು ದಶಕಗಳ ಏರೋಸ್ಪೇಸ್ ಸಹಯೋಗದ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದರು. 


COMMERCIAL BREAK
SCROLL TO CONTINUE READING

ಭಾರತದ ವಾಣಿಜ್ಯಾತ್ಮಕ ವಾಯುಯಾನ ಮಾರುಕಟ್ಟೆಯ ತ್ವರಿತ ವಿಸ್ತರಣೆಯಲ್ಲಿ ಮತ್ತು ರಾಷ್ಟ್ರದ ರಕ್ಷಣಾ ಪಡೆಗಳ ಆಧುನೀಕರಣ ಮತ್ತು ಕಾರ್ಯಸಿದ್ಧವಾಗಿರುವಂತೆ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದು ಬೋಯಿಂಗ್ ಗೆ ಹೆಮ್ಮೆಯಾಗಿದೆ ಎಂದು ತಿಳಿಸಿದ, ಬೋಯಿಂಗ್  ಅಧ್ಯಕ್ಷ ಹಾಗೂ ಸಿಇಓ ಡೇವಿಡ್ ಕಲ್ಹೌನ್, ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ,  ಉಪಕ್ರಮವನ್ನು ನಾವು ಬೆಂಬಲಿಸುತ್ತೇವೆ ಎಂದು ಡೇವಿಡ್ ಕಲ್ಹೌನ್ ತಿಳಿಸಿದರು. 


ಇದನ್ನೂ ಓದಿ- PM Modi in Egypt: 26 ವರ್ಷದ ಬಳಿಕ ಈಜಿಪ್ಟ್‌ಗೆ ಭಾರತದ ಪ್ರಧಾನಿಯ ಮೊದಲ ಭೇಟಿ!  


ಈ ಕುರಿತಂತೆ ಮಾತನಾಡಿರುವ ಅವರು, ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ  ಉಪಕ್ರಮವನ್ನು ನಾವು ಬೆಂಬಲಿಸುತ್ತೇವೆ . ಈ ಸಲುವಾಗಿ, ಬೋಯಿಂಗ್ ತಂಡದ ಮೇಲೆ ವಿನೂತನ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಉತ್ಕೃಷ್ಟ ವೃತ್ತಿ ಅನುಸರಿಸಿ ಭಾರತದಲ್ಲಿ 5000 ಕ್ಕೂ ಅಧಿಕ ಮಂದಿ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಭಾರತದಲ್ಲಿ ಬೋಯಿಂಗ್‌ನ ಬೆಳೆಯುತ್ತಿರುವ ಹೂಡಿಕೆಗಳು ದೇಶದೊಂದಿಗಿನ ಕಂಪನಿಯ ಪಾಲುದಾರಿಕೆಯ ಬಲವನ್ನು ಮಾತ್ರವಲ್ಲದೆ ವಿಶಾಲವಾದ ಯುಎಸ್-ಭಾರತ ಆರ್ಥಿಕ ಸಂಬಂಧದ ಸಕಾರಾತ್ಮಕ ಪಥವನ್ನು ಒತ್ತಿಹೇಳುತ್ತದೆ ಎಂದವರು ಹೇಳಿದರು. 


ಪ್ಯಾರಿಸ್ ಏರ್ ಶೋ ನಲ್ಲಿ ಭಾರತದಲ್ಲಿ ಹೊಸ ಸೇವಾ ಒಪ್ಪಂದಗಳನ್ನು ಪ್ರಕಟಿಸಿದ ಬೋಯಿಂಗ್: 
ಇನ್ನು, ಭಾರತದ ವಾಣಿಜ್ಯಾತ್ಮಕ ವಾಯುಯಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ  ಬೋಯಿಂಗ್ ತನ್ನ ದೀರ್ಘಕಾಲದ ಬದ್ಧತೆಯನ್ನು ಮುಂದುವರಿಸಿದೆ. ಕಳೆದ ವಾರ ಜರುಗಿದ ಪ್ಯಾರಿಸ್ ಏರ್ ಶೋ ನಲ್ಲಿ ಭಾರತದಲ್ಲಿ ಹೊಸ ಸೇವಾ ಒಪ್ಪಂದಗಳನ್ನು ಬೋಯಿಂಗ್ ಪ್ರಕಟಿಸಿದ್ದು 290 ಹೊಸ ಬೋಯಿಂಗ್ ಜೆಟ್ ಗಳಿಗೆ ಏರಿ ಇಂಡಿಯಾದ ಬೇಡಿಕೆಯನ್ನು ಅದು ಅಂತಿಮಗೊಳಿಸಿದೆ. 


ಇದನ್ನೂ ಓದಿ- ಯುಎಸ್,ಈಜಿಪ್ಟ್ ನ ಐತಿಹಾಸಿಕ ಪ್ರವಾಸ ಮುಗಿಸಿ ಭಾರತಕ್ಕೆ ಆಗಮಿಸಿದ ಪ್ರಧಾನಿ ಮೋದಿ


ಬೋಯಿಂಗ್ ಸಂಸ್ಥೆಯ ಬದ್ದತೆಯ ಬಗ್ಗೆಯೂ ಪ್ರಸ್ತಾಪಿಸಿರುವ ಅವರು,  ಜಾಗತಿಕ ಏರೋಸ್ಪೇಸ್ ಸಂಸ್ಥೆಯಾಗಿ ಮುಂಚೂಣಿಯಲ್ಲಿರುವ ಬೋಯಿಂಗ್, ಸರಿ ಸುಮಾರು 150 ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಗ್ರಾಹಕರಿಗೆ ವಾಣಿಜ್ಯ ವಿಮಾನಗಳನ್ನು, ರಕ್ಷಣಾ ಉತ್ಪನ್ನಗಳನ್ನು ಹಾಗೂ ಸ್ಪೇಸ್ ಸಿಸ್ಟಮ್ ಗಳನ್ನು ಅಭಿವೃದ್ಧಿಪಡಿಸಿ, ತಯಾರಿಸಿ ಸೇವೆ ಒದಗಿಸುತ್ತಿದೆ. ಯು.ಎಸ್. ನ ಮುಂಚೂಣಿ ರಫ್ತುದಾರನಾಗಿರುವ ಸಂಸ್ಥೆ, ಆರ್ಥಿಕ ಅವಕಾಶ, ಊರ್ಜಿತತೆ ಮತ್ತು ಸಾಮುದಾಯಿಕ ಪ್ರಭಾವಗಳನ್ನು ಹೆಚ್ಚಿಸಲು ಜಾಗತಿಕ ಸರಬರಾಜುದಾರರ ಪ್ರತಿಭೆಗಳನ್ನು ವರ್ಧಿಸುತ್ತದೆ. ಬೋಯಿಂಗ್ ನ ವೈವಿಧ್ಯ ತಂಡವು ಭವಿಷ್ಯಕ್ಕಾಗಿ ವಿನೂತನ ಪ್ರಯೋಗಗಳನ್ನು ಕೈಗೊಳ್ಳುತ್ತ ಊರ್ಜಿತತೆಯನ್ನು ಕಾಪಾಡಿಕೊಳ್ಳುತ್ತ ಕಂಪನಿಯ ಮೂಲ ಮೌಲ್ಯಗಳಾದ ಸುರಕ್ಷತೆ, ಗುಣಮಟ್ಟ ಮತ್ತು ಪ್ರಾಮಾಣಿಕತೆಗಳನ್ನಾಧರಿಸಿ ಒಂದು ಕಾರ್ಯ ಸಂಸ್ಕೃತಿಯನ್ನು ಬೆಳೆಸುತ್ತದೆ ಎಂದು ತಿಳಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.