PM Modi Egypt Visit: ಕೈರೋ ತಲುಪಿದ ಪ್ರಧಾನಿ ಮೋದಿ, ಈಜಿಪ್ಟ್ ಪ್ರಧಾನಿ ಮದ್ಬೌಲಿಯಿಂದ ಸ್ವಾಗತ

PM Modi Egypt Visit: 26 ವರ್ಷಗಳ ಸುದೀರ್ಘ ಅವಧಿಯ ಬಳಿಕ ಭಾರತದ ಪ್ರಧಾನಿಯೊಬ್ಬರು ಮೊದಲ ದ್ವಿಪಕ್ಷೀಯ ಭೇಟಿಗಾಗಿ ಈಜಿಪ್ಟ್‌ಗೆ ತಲುಪಿದ್ದಾರೆ. ಈಜಿಪ್ಟ್ ಪ್ರಧಾನಿ ಮುಸ್ತಫಾ ಬದ್ಬೌಲಿ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ್ದಾರೆ.  

Written by - Nitin Tabib | Last Updated : Jun 24, 2023, 07:38 PM IST
  • ಪ್ರಧಾನಿ ನರೇಂದ್ರ ಮೋದಿ ಅವರು ಕೈರೋ ತಲುಪಿದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ
  • ಅವರು ಈಜಿಪ್ಟ್‌ಗೆ ಪ್ರಧಾನಿ ಮೋದಿಯವರ ಮೊದಲ ದ್ವಿಪಕ್ಷೀಯ ಭೇಟಿಯ ಬಗ್ಗೆ ವಿವರವಾಗಿ ವಿವರಿಸಿದ್ದಾರೆ.
  • ಈಜಿಪ್ಟ್ ಪ್ರಧಾನಿಯೊಂದಿಗೆ ಪ್ರಧಾನಿ ಮೋದಿ ದುಂಡು ಮೇಜಿನ ಸಭೆ ನಡೆಸಲಿದ್ದಾರೆ ಮತ್ತು ಅಧ್ಯಕ್ಷ ಎಲ್-ಸಿಸಿ ಅವರನ್ನು ಭೇಟಿಯಾಗಲಿದ್ದಾರೆ.
PM Modi Egypt Visit: ಕೈರೋ ತಲುಪಿದ ಪ್ರಧಾನಿ ಮೋದಿ, ಈಜಿಪ್ಟ್ ಪ್ರಧಾನಿ ಮದ್ಬೌಲಿಯಿಂದ ಸ್ವಾಗತ title=

PM Modi Egypt Visit: ಈಜಿಪ್ಟ್‌ಗೆ ತಮ್ಮ ಮೊದಲ ಎರಡು ದಿನಗಳ ದ್ವಿಪಕ್ಷೀಯ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾಜಧಾನಿ ಕೈರೋ ತಲುಪಿದ್ದಾರೆ. 26 ವರ್ಷಗಳ ಸುದೀರ್ಘ ಅವಧಿಯ ಬಳಿಕ ಭಾರತದ ಪ್ರಧಾನಿಯೊಬ್ಬರು ಮೊದಲ ದ್ವಿಪಕ್ಷೀಯ ಭೇಟಿಗಾಗಿ ಈಜಿಪ್ಟ್‌ಗೆ ತಲುಪಿದ್ದಾರೆ. ಈಜಿಪ್ಟ್ ಪ್ರಧಾನಿ ಮುಸ್ತಫಾ ಬದ್ಬೌಲಿ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ್ದಾರೆ. ವಿಶೇಷ ಗೌರವಾರ್ಥವಾಗಿ ಈಜಿಪ್ಟ್ ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಆಗಮನದ ವೇಳೆ ಪ್ರಧಾನಿ ಮೋದಿ ಅವರು ಗಾರ್ಡ್ ಆಫ್ ಹಾನರ್ ಅನ್ನು ಸಹ ಪಡೆದಿದ್ದಾರೆ.

ಇದನ್ನೂ ಓದಿ-Yevgeny Prigozhin ಯಾರು? ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ನೇರ ಚಾಲೆಂಜ್!

ಪ್ರಧಾನಿ ನರೇಂದ್ರ ಮೋದಿ ಅವರು ಕೈರೋ ತಲುಪಿದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಈಜಿಪ್ಟ್‌ಗೆ ಪ್ರಧಾನಿ ಮೋದಿಯವರ ಮೊದಲ ದ್ವಿಪಕ್ಷೀಯ ಭೇಟಿಯ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ಈಜಿಪ್ಟ್ ಪ್ರಧಾನಿಯೊಂದಿಗೆ  ಪ್ರಧಾನಿ ಮೋದಿ ದುಂಡು ಮೇಜಿನ ಸಭೆ ನಡೆಸಲಿದ್ದಾರೆ ಮತ್ತು ಅಧ್ಯಕ್ಷ ಎಲ್-ಸಿಸಿ ಅವರನ್ನು ಭೇಟಿಯಾಗಲಿದ್ದಾರೆ.

ಇದನ್ನೂ ಓದಿ-Wagner Group Mutiny: ವ್ಯಾಗನರ್ ಗುಂಪಿನ ದಂಗೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಷ್ಯಾ, ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ಎಂದ ಪುಟಿನ್

ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಭಾರತ ಭೇಟಿಯ ಚಿತ್ರಗಳನ್ನು ಕೈರೋದಲ್ಲಿನ ಹೋಟೆಲ್‌ನಲ್ಲಿ ಪ್ರದರ್ಶಿಸಲಾಗಿದೆ, ಅಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಎರಡು ದಿನಗಳ ಈಜಿಪ್ಟ್ ಪ್ರವಾಸದ ಸಂದರ್ಭದಲ್ಲಿ ಹೊಟೇಲ್ ಗೆ ಆಗಮಿಸಿದ್ದಾರೆ. ಪ್ರಧಾನಿ ಆಗಮಿಸಿದ ನಂತರ ಅವರನ್ನು ಸ್ವಾಗತಿಸಲು ಭಾರತೀಯ ಸಮುದಾಯದ ಹಲವಾರು ಸದಸ್ಯರು ಹೋಟೆಲ್‌ನಲ್ಲಿ ಉಪಸ್ಥಿತರಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News