ದೀಪಾವಳಿಗೆ ಸರ್ಕಾರಿ ನೌಕರರಿಗೆ ಬೋನಸ್ ! ರಾಜ್ಯ ಸರ್ಕಾರದ ಘೋಷಣೆ
Diwali Bonus News :ದೀಪಾವಳಿಗೂ ಮುನ್ನವೇ ದೆಹಲಿ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಬಂದಿದೆ. ಇದೀಗ ದೆಹಲಿ ಸರ್ಕಾರಿ ನೌಕರರಿಗೆ ಬೋನಸ್ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.
Diwali Bonus News : ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ದೀಪಾವಳಿ ಹಬ್ಬವನ್ನು ಸಂತೋಷದ ಹಬ್ಬವೆಂದು ಪರಿಗಣಿಸಲಾಗಿದೆ ಮತ್ತು ಇದನ್ನು ಭಾರತದಲ್ಲಿ ದೊಡ್ಡ ಹಬ್ಬವೆಂದು ಆಚರಿಸಲಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಖಾಸಗಿ ಕಂಪನಿ ನೌಕರರು ಬೋನಸ್ ನೀರೀಕ್ಷೆಯಲ್ಲಿ ಇರುತ್ತಾರೆ. ಇದೀಗ ಸರ್ಕಾರಿ ನೌಕರರಿಗೂ ಬೋನಸ್ ಘೋಷಿಸಲಾಗಿದೆ. ಹೌದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಘೋಷಣೆಯ ಅಡಿಯಲ್ಲಿ, ಈಗ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಬೋನಸ್ ನೀಡಲಾಗುವುದು.
ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ :
ದೀಪಾವಳಿಗೂ ಮುನ್ನವೇ ದೆಹಲಿ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಬಂದಿದೆ. ಇದೀಗ ದೆಹಲಿ ಸರ್ಕಾರಿ ನೌಕರರಿಗೆ ಬೋನಸ್ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಈ ಘೋಷಣೆಯ ಅಡಿಯಲ್ಲಿ, ಉದ್ಯೋಗಿಗಳಿಗೆ 7000 ರೂಪಾಯಿಗಳ ದೀಪಾವಳಿ ಬೋನಸ್ ನೀಡಲಾಗುವುದು. ಈ ವಿಷಯವನ್ನು ಸ್ವತಃ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಇದನ್ನೂ ಓದಿ : ನಿರಂತರ ಇಳಿಯುತ್ತಿರುವ ಬೆಲೆ ! ಹಬ್ಬದ ಹೊಸ್ತಿಲಲ್ಲಿ ಇಷ್ಟು ಕಡಿಮೆಯಾಗಿದೆ ಬಂಗಾರದ ಬೆಲೆ !
ನೌಕರರಿಗೆ ಎಷ್ಟು ಸಿಗಲಿದೆ ಬೋನಸ್ :
'ದೆಹಲಿ ಸರ್ಕಾರದ ಎಲ್ಲಾ ನೌಕರರು ನನ್ನ ಕುಟುಂಬವಿದ್ದಂತೆ. ಹಬ್ಬಗಳ ಈ ತಿಂಗಳಲ್ಲಿ, ದೆಹಲಿ ಸರ್ಕಾರದ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಉದ್ಯೋಗಿಗಳಿಗೆ 7000 ರೂಪಾಯಿಗಳ ಬೋನಸ್ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಎಲ್ಲಾ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ದೀಪಾವಳಿಯ ಶುಭಾಶಯಗಳು ಎಂದಿದ್ದಾರೆ.
ಇಷ್ಟು ಕೋಟಿ ಮೀಸಲಿಡಲಾಗಿದೆ :
ಈ ಬೋನಸ್‌ಗಾಗಿ ದೆಹಲಿ ಸರ್ಕಾರ ಕೋಟ್ಯಂತರ ರೂ. ವ್ಯಯಿಸಲಿದೆ. ಇದರೊಂದಿಗೆ 80 ಸಾವಿರ ಉದ್ಯೋಗಿಗಳಿಗೆ ಬೋನಸ್ ನೀಡಲು 56 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇದರಿಂದ ಉದ್ಯೋಗಿಗಳಿಗೂ ಸಾಕಷ್ಟು ಲಾಭವಾಗಲಿದೆ.
ಇದನ್ನೂ ಓದಿ : ವೇತನ ಪರಿಷ್ಕರಣೆಗೆ ಹೊಸ ನೀತಿ ! 26,000ಕ್ಕೆ ಹೆಚ್ಚುವುದು ಸರ್ಕಾರಿ ನೌಕರರ ವೇತನ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ