LPG Cylinder Price : ಡಿಸೆಂಬರ್ 1 ರಿಂದ ಹೊಸ ನಿಯಮವನ್ನು ಜಾರಿಗೆ ತಂದ ನಂತರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 21 ರೂಪಾಯಿಗಳಷ್ಟು ಹೆಚ್ಚಾಗಿದೆ. ಗೃಹ  ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎಲ್.ಪಿ.ಜಿ. ಬೆಲೆಯಲ್ಲಿನ ಏರಿಳಿತದ ಪರಿಣಾಮ  ನೇರವಾಗಿ ಜನ ಸಾಮಾನ್ಯರ ಮೇಲೆಯೇ ಬೀಳುತ್ತದೆ. ಆದರೆ ಸಿಲಿಂಡರ್ ಬುಕ್ ಮಾಡುವಾಗ ಈ ವಿಧಾನವನ್ನು ಅನುಸರಿಸಿದರೆ ಗ್ಯಾಸ್ ಸಿಲಿಂಡರ್ ಮೇಲೆ ರಿಯಾಯಿತಿ ಸಿಗುವುದು.  ಹೌದು , ಈ ಕೆಳಗೆ ಹೇಳಲಾದ ವಿಧಾನದಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ  50 ರೂಪಾಯಿಗಳ ರಿಯಾಯಿತಿ ಪಡೆಯಬಹುದು. 


COMMERCIAL BREAK
SCROLL TO CONTINUE READING

ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಲು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅನ್ನು ಹೇಗೆ ಬುಕ್ ಮಾಡಬೇಕು ಎನ್ನುವುದನ್ನು ತಿಳಿದಿರಬೇಕು. ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಈ ಪ್ರಕ್ರಿಯೆಯನ್ನು  ಅನುಸರಿಸಬೇಕು. ಹೀಗೆ ಬುಕ್ ಮಾಡಿದಾಗ ಮಾತ್ರ  ಎಲ್ಪಿಜಿ ದರದ ಮೇಲೆ ರಿಯಾಯಿತಿ ಸಿಗುತ್ತದೆ. 


ಇದನ್ನೂ ಓದಿ : ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಮೂರು ಗಿಫ್ಟ್ ನೀಡಲು ಸಜ್ಜಾದ ಕೇಂದ್ರ ಸರ್ಕಾರ ! ವೇತನ 63,000ಕ್ಕೆ ಏರಿಕೆ !


LPG ಸಿಲಿಂಡರ್ ಅನ್ನು ಬುಕ್ ಮಾಡಲು ಮೊದಲು Amazon Pay ಗೆ ಹೋಗಬೇಕು. ಇದಕ್ಕಾಗಿ ನೀವು Amazon ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ.
-ಇದರ ನಂತರ, ನೀವು ಗ್ಯಾಸ್ ಸಿಲಿಂಡರ್ ಆಯ್ಕೆಗೆ ಹೋದಾಗ,  ಅಲ್ಲಿ  ಮೂರು ಆಯ್ಕೆಗಳು ಕಾಣಿಸುತ್ತದೆ. ಇಂಡಿಯನ್ ಗ್ಯಾಸ್, HP ಮತ್ತು ಭಾರತ್  ಎನ್ನುವ ಮೂರು ಆಯ್ಕೆಗಳು ಕಾಣಿಸುತ್ತದೆ. 
-ನಿಮ್ಮ  ಸಿಲಿಂಡರ್ ಯಾವುದು ಎನ್ನುವುದರ ಪ್ರಕಾರ ಇಲ್ಲಿ ನೀವು  ಆಯ್ಕೆ ಮಾಡಬಹುದು.
-ಈಗ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಅದರ ನಂತರ ಸಂಪೂರ್ಣ ಖಾತೆ ಮಾಹಿತಿಯು ಕಾಣಿಸುತ್ತದೆ. 
-ಇದರ ನಂತರ, ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಓದಿ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ. 
-ಪಾವತಿ ಮಾಡಲು ಡೆಬಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು ಬಳಸುವಂತೆ  ಇಲ್ಲಿ ಕೇಳಲಾಗುತ್ತದೆ. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ  ಅದನ್ನು ಇಲ್ಲಿ ಆಯ್ಕೆ ಮಾಡಬಹುದು.
-ಇದರ ನಂತರ ನೀವು ಪೇಮೆಂಟ್ ಮಾಡಬಹುದು. ಹೀಗೆ ಮಾಡಿದಾಗ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಕಡಿತ ಮಾಡಲಾಗುವುದು. ಅಂದರೆ ನೀವು 50 ರೂಪಾಯಿ ಕಡಿಮೆ ಬೆಲೆಯಲ್ಲಿ ಸಿಲಿಂಡರ್ ಬುಕ್ ಮಾಡಬಹುದು.  


ಇದನ್ನೂ ಓದಿ : Arecanut today priceರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.