IRCTC Refund Rules : ಭಾರತೀಯ ರೈಲ್ವೆ ಪ್ರಕಾರ (IRCTC), ಚಾರ್ಟ್ ಸಿದ್ಧವಾದ ನಂತರ ಇಂಟರ್ನೆಟ್ ಟಿಕೆಟ್ ಅನ್ನು ರದ್ದುಗೊಳಿಸಲಾಗುವುದಿಲ್ಲ. ಆಗ ಬಳಕೆದಾರರು ಆನ್‌ಲೈನ್‌ನಲ್ಲಿ TDR ಅನ್ನು ಫೈಲ್ ಮಾಡಬಹುದು. IRCTC ಒದಗಿಸಿದ ಟ್ರ್ಯಾಕಿಂಗ್ ಸೇವೆಯ ಮೂಲಕ ಮರುಪಾವತಿ ಸ್ಥಿತಿಯನ್ನು ಚೆಕ್ ಮಾಡಬೇಕು. ರೈಲ್ವೆ ನಿಯಮಗಳ ಪ್ರಕಾರ ನೀವು ಟಿಡಿಆರ್ (TDR - Ticket Deposit Receipt) ಅನ್ನು ಸಲ್ಲಿಸಬಹುದು. ಹೆಚ್ಚಿನ ಜನರು ರೈಲಿನ ಮೂಲಕವೇ ಪ್ರಯಾಣಿಸಲು ಇಷ್ಟ ಪಡುತ್ತಾರೆ. ರೈಲ್ವೆಯನ್ನು ಭಾರತದ ಸಾರಿಗೆಯ ಬೆನ್ನೆಲುಬು ಎಂದು ಕರೆಯಲಾಗುತ್ತದೆ.
ನಿಮ್ಮ ಬಳಿ ರೈಲಿನ ಕಂಫರ್ಮ್ ಟಿಕೆಟ್ ಇದ್ದು, ನೀವು ಆ ರೈಲಿನ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಬೇಕಾದರೆ ರೈಲಿನ ಚಾರ್ಟ್ ಸಿದ್ದಗೊಳಿಸುವ ಮೊದಲೇ ಮಾಡಬೇಕು. ಒಮ್ಮೆ ರೈಲಿನ ಚಾರ್ಟ್ ಸಿದ್ದವಾದ ಮೇಲೆ ಮತ್ತೆ ಟಿಕೆಟ್ ಕ್ಯಾನ್ಸಲ್ ಮಾಡುವುದು ಸಾಧ್ಯವಾಗುವುದಿಲ್ಲ. ಆದರೆ ನೀವು ಮರುಪಾವತಿಗೆ ಅರ್ಹರಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನೀವು ಟಿಕೆಟ್ ಠೇವಣಿ ರಸೀದಿಯನ್ನು (ಟಿಡಿಆರ್) ಸಲ್ಲಿಸಬಹುದು. ಅಂತಹ ಸಂದರ್ಭಗಳಲ್ಲಿ, ಮರುಪಾವತಿಯು ವಲಯ ರೈಲ್ವೆ ವಿಭಾಗವನ್ನು ಅವಲಂಬಿಸಿರುತ್ತದೆ. TDR ಕ್ಲೈಮ್ ಅನ್ನು ಸಲ್ಲಿಸುವ ಕಾರಣವನ್ನು ಅವರು ಸ್ವೀಕರಿಸುತ್ತಾರೆಯೇ ಅಥವಾ ಇಲ್ಲವೇ ಎನ್ನುವುದರ ಮೇಲೆ ನಿಮಗೆ ರಿ ಫಂಡ್ ಆಗುತ್ತದೆಯೇ ಎನ್ನುವುದು ಕೂಡಾ ನಿರ್ಧಾರವಾಗುತ್ತದೆ.
ಇದನ್ನೂ ಓದಿ : ಸ್ವಂತ ಉದ್ಯಮ ಆರಂಭಿಸಬೇಕೆ? ಮೋದಿ ಸರ್ಕಾರ ನೀಡುತ್ತೇ 10 ಲಕ್ಷ ರೂ.ಗಳು, ಹೀಗೆ ಅರ್ಜಿ ಸಲ್ಲಿಸಿ!
ಏನು ಹೇಳುತ್ತದೆ ರೈಲ್ವೆ ನಿಯಮ ? :
“ಬಳಕೆದಾರರು ಆನ್‌ಲೈನ್ ಟಿಡಿಆರ್ ಫೈಲ್ ಮಾಡಲು ಮತ್ತು IRCTC ಒದಗಿಸಿದ ಟ್ರ್ಯಾಕಿಂಗ್ ಸೇವೆಯ ಮೂಲಕ ಮರುಪಾವತಿ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ಸೂಚಿಸುತ್ತದೆ. ರೈಲ್ವೆ ನಿಯಮಗಳ ಪ್ರಕಾರ ನೀವು ಯಾವ ಪರಿಸ್ಥಿತಿಯಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಿದರೂ ಡಿಟಿಆರ್ ಸಲ್ಲಿಸಬಹುದು. ಆದರೆ ನಿಮ್ಮ ಟಿಡಿಆರ್ ಸ್ವೀಕಾರ/ನಿರಾಕರಣೆ ಅಥವಾ ಮರುಪಾವತಿಗೆ ಸಂಬಂಧಿಸಿದ ನಿರ್ಧಾರವನ್ನು ಭಾರತೀಯ ರೈಲ್ವೇಯ ಚಾಲ್ತಿಯಲ್ಲಿರುವ ಮರುಪಾವತಿ ನಿಯಮಗಳ ಪ್ರಕಾರವೇ ತೆಗೆದುಕೊಳ್ಳಲಾಗುವುದು. ಸಂಬಂಧಪಟ್ಟ ವಲಯ ರೈಲ್ವೆ ಈ ನಿರ್ಧಾರ ತೆಗೆದುಕೊಳ್ಳುತ್ತದೆ.
ದೃಢೀಕರಿಸಿದ ರೈಲ್ವೇ ಟಿಕೆಟ್ ಅನ್ನು ರದ್ದುಗೊಳಿಸಿದ ನಂತರವಷ್ಟೇ TDR ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ನೀವು ಇ-ಟಿಕೆಟ್ ಅನ್ನು ಆನ್‌ಲೈನ್‌ನಲ್ಲಿ ರದ್ದುಗೊಳಿಸಬಹುದು ಮತ್ತು TDR ಅನ್ನು ನೋಂದಾಯಿಸಬಹುದು. ರೈಲ್ವೇ ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಿದ್ದರೆ, ಮೊದಲು ನಿಮ್ಮ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಿ ನಂತರ TDR ಅನ್ನು ನೋಂದಾಯಿಸಿಕೊಳ್ಳಬೇಕು. ನಿಮ್ಮ ಟಿಕೆಟ್ ಅನ್ನು ರದ್ದುಗೊಳಿಸಲು, ಹತ್ತಿರದ ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್‌ಗೆ ಭೇಟಿ ನೀಡಬಹುದು. "ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲು ಟಿಡಿಆರ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸದ ಹೊರತು ಕನ್ಫರ್ಮ್ ಆದ ಟಿಕೆಟ್‌ಗಳಿಗೆ ಯಾವುದೇ ಮರುಪಾವತಿ ಇರುವುದಿಲ್ಲ. ಆದರೆ, RAC ಟಿಕೆಟ್‌ಗಳಿಗಾಗಿ, ರೈಲು ಹೊರಡುವ 30 ನಿಮಿಷಗಳ ಮೊದಲು ಟಿಕೆಟ್ ಅನ್ನು ರದ್ದುಗೊಳಿಸಿ, TDR ಅನ್ನು ಸಲ್ಲಿಸಬೇಕು" ಚಾರ್ಟ್ ಸಿದ್ಧಪಡಿಸಿದ ನಂತರ, ರೈಲು ಟಿಕೆಟ್‌ಗಳ ರದ್ದತಿಯ ಸಂದರ್ಭದಲ್ಲಿ ಮರುಪಾವತಿಗಾಗಿ TDR ಅನ್ನು ಮಾತ್ರ ಬಳಸಬೇಕು. ಚಾರ್ಟ್ ಸಿದ್ಧಪಡಿಸುವ ಮೊದಲು ರೈಲ್ವೆ ಟಿಕೆಟ್ ರದ್ದುಗೊಳಿಸಿದರೆ, TDR ಅನ್ನು ಸಲ್ಲಿಸಬೇಕಾಗಿಲ್ಲ.
ಇದನ್ನೂ ಓದಿ : ವಿಮಾ ಪಾಲಸಿ ಧಾರಕರಿಗೊಂದು ಮಹತ್ವದ ಮಾಹಿತಿ ಪ್ರಕಟ, ವಿಮಾ ನಿಯಂತ್ರಕ ಪ್ರಾಧಿಕಾರ ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ