BPL Card Updates: ಸರ್ಕಾರದ ಗ್ಯಾರಂಟಿ ಸೌಲಭ್ಯಗಳಿಗಾಗಿ ಸುಳ್ಳು ದಾಖಲೆಗಳನ್ನು ನೀಡಿ ಬಹಳಷ್ಟು ಮಂದಿ ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಂಡಿದ್ದಾರೆ. ಅನರ್ಹರು ಕೂಡ ಕಾಂಗ್ರೆಸ್‌ ಸರ್ಕಾರದ ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯನವರು ಅನರ್ಹ ಕಾರ್ಡುಗಳನ್ನು ರದ್ದು ಮಾಡುವಂತೆ ಖಡಕ್ ಸೂಚನೆ‌ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಸರ್ಕಾರಿ ನೌಕರಿ, ತೆರಿಗೆ ಪಾವತಿ ಮಾಡುವವರು & ಹೆಚ್ಚಿನ ಆದಾಯ ಉಳ್ಳವರನ್ನು ಪತ್ತೆ ಹಚ್ಚಲು ಈ ಬಗ್ಗೆ ಮಾಹಿತಿ ಕಲೆ ಹಾಕಲು ಆಹಾರ ಇಲಾಖೆ ಮುಂದಾಗಿದೆ. ಅನರ್ಹ ಕಾರ್ಡ್‌ಗಳ ಪತ್ತೆಗಾಗಿ ಆಹಾರ ಇಲಾಖೆಗೆ ಸಾರಿಗೆ, ಕಂದಾಯ ಮತ್ತಿತರ ಇಲಾಖೆಗಳು ಇತರ ಇಲಾಖೆಯ ಅಧಿಕಾರಿಗಳು ಕೈ ‌ಜೋಡಿಸಲಿದ್ದಾರೆ.


ಇದನ್ನೂ ಓದಿ: Gruha Lakshmi Scheme: ಈ ದಿನ ಜಮೆಯಾಗಲಿದೆ ʼಗೃಹಲಕ್ಷ್ಮೀʼ ಜೂನ್‌ ತಿಂಗಳ ಹಣ!


ನಿಮ್ಮ ಬಿಪಿಎಲ್ ಕಾರ್ಡ್ ರದ್ದಾದರೆ ನೀವು ನಿಮ್ಮ ಪಡಿತರ ಚೀಟಿಯನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಮಾಡಬಹುದು. ದಾಖಲೆಗಳನ್ನು ತಿದ್ದುಪಡಿ ಮಾಡುವ ಮೂಲಕ ಇದನ್ನು ಸರಿಪಡಿಸಬಹುದು‌. ಇನ್ನು ಸರ್ಕಾರ ಹೊಸದಾಗಿ ಹೊಸ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಿದೆ. ಆ ಸಂದರ್ಭದಲ್ಲಿ ನೀವೂ ಸಹ ಅರ್ಜಿ ಹಾಕಬಹುದು.


ಅರ್ಜಿ ಸಲ್ಲಿಸುವುದು ಹೇಗೆ..?


  • ಮೊದಲಿಗೆ ಫಲಾನುಭವಿಗಳು ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://ahara.kar.nic.in ಗೆ ಭೇಟಿ ನೀಡಬೇಕು. 

  • ಬಳಿಕ E-Services ಎಂಬ ಆಪ್ಶನ್ ಕಾಣಲಿದ್ದು ಇದರಲ್ಲಿ ಇ-ರೇಷನ್ ಕಾರ್ಡ್ (e-Ration Card) ಎಂಬ ಆಯ್ಕೆ ಸಹ ಬರಲಿದೆ.

  • ನಂತರ ರದ್ದುಪಡಿಸಿದ ರೇಷನ್ ಕಾರ್ಡ್‌ಗಳ ಪಟ್ಟಿ ಎಂಬ ಆಯ್ಕೆ ಇರಲಿದೆ.

  • ಇದರಲ್ಲಿ ನಿಮ್ಮ ಜಿಲ್ಲೆ, ತಾಲೂಕು, ತಿಂಗಳು ವರ್ಷ ಇತ್ಯಾದಿ ದಾಖಲೆಗಳನ್ನು ನಮೂದಿಸಿ ಆ ಮಾಹಿತಿಗಳನ್ನು Submit ಮಾಡಿದರೆ ಕಾರ್ಡ್ ರದ್ದಾದ ಮಾಹಿತಿ ನಿಮಗೆ ಸಿಗಲಿದೆ.


ಇದನ್ನೂ ಓದಿ: Gruha Lakshmi Scheme: ಇನ್ಮುಂದೆ ಪ್ರತಿ ತಿಂಗಳು ಇದೇ ದಿನ ʼಗೃಹಲಕ್ಷ್ಮಿʼ ಯೋಜನೆಯ ಹಣ ಬರುತ್ತೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.