ನಾಳೆ ಅಪ್ಗ್ರೇಡ್ ಆಗಲಿದೆ ಈ ಬ್ಯಾಂಕಿನ ಸಿಸ್ಟಮ್ !ಗ್ರಾಹಕರಿಗೆ ಸಿಗುವುದಿಲ್ಲ ಸರ್ವಿಸ್

ಶನಿವಾರ ಅಂದರೆ ಜುಲೈ 13 ರಂದು ಮುಂಜಾನೆ 3 ರಿಂದ ಸಂಜೆ 4:30 ರವರೆಗೆ ಈ ಅಪ್ಗ್ರೆಡೆಶನ್ ಕೆಲಸ ನಡೆಯಲಿದೆ. ಈ ಅವಧಿಯಲ್ಲಿ,ಕೆಲವು ಗ್ರಾಹಕರಿಗೆ ಕೆಲವು ಸೇವೆಗಳನ್ನು ಒದಗಿಸಲಾಗುವುದಿಲ್ಲ.

Written by - Ranjitha R K | Last Updated : Jul 12, 2024, 03:53 PM IST
  • ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ
  • ತನ್ನ ಸಿಸ್ಟಮ್ ಅನ್ನು ಅಪ್ಗ್ರೇಡ್ ಮಾಡುತ್ತಿದೆ.
  • ವಿವರವಾದ ಮಾಹಿತಿಗಾಗಿ ಬ್ಯಾಂಕಿನ ವೆಬ್‌ಸೈಟ್ ನೋಡಿ
ನಾಳೆ ಅಪ್ಗ್ರೇಡ್ ಆಗಲಿದೆ ಈ ಬ್ಯಾಂಕಿನ  ಸಿಸ್ಟಮ್ !ಗ್ರಾಹಕರಿಗೆ ಸಿಗುವುದಿಲ್ಲ ಸರ್ವಿಸ್ title=

ಬೆಂಗಳೂರು : ನೀವು ಸಹ HDFC ಬ್ಯಾಂಕ್‌ನ ಗ್ರಾಹಕರಾಗಿದ್ದರೆ,ಈ ಸುದ್ದಿ ನಿಮಗೆ ಉಪಯುಕ್ತವಾಗಿರಲಿದೆ. ಹೌದು,ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ತನ್ನ ಸಿಸ್ಟಮ್ ಅನ್ನು ಅಪ್ಗ್ರೇಡ್ ಮಾಡುತ್ತಿದೆ.ಸಿಸ್ಟಮ್ ಅಪ್ಗ್ರೇಡ್ ನಂತರ ಬ್ಯಾಂಕಿಂಗ್ ಕಾರ್ಯಾಚರಣೆಗಳ ಸ್ಪೀಡ್ ಮೊದಲಿಗಿಂತ ಹೆಚ್ಚಾಗಿರುತ್ತದೆ.ಶನಿವಾರ ಅಂದರೆ ಜುಲೈ 13 ರಂದು ಮುಂಜಾನೆ 3 ರಿಂದ ಸಂಜೆ 4:30 ರವರೆಗೆ ಈ ಅಪ್ಗ್ರೆಡೆಶನ್ ಕೆಲಸ ನಡೆಯಲಿದೆ.ಈ ಅವಧಿಯಲ್ಲಿ,ಕೆಲವು ಗ್ರಾಹಕರಿಗೆ ಕೆಲವು ಸೇವೆಗಳನ್ನು ಒದಗಿಸಲಾಗುವುದಿಲ್ಲ.

ವಿವರವಾದ ಮಾಹಿತಿಗಾಗಿ ಬ್ಯಾಂಕಿನ ವೆಬ್‌ಸೈಟ್ ನೋಡಿ :
ಬ್ಯಾಂಕ್‌ನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಅವಧಿಯಲ್ಲಿ ಯಾವ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಸ್ಟಮ್ ಅಪ್ಗ್ರೇಡ್ ಕಾರ್ಯದಿಂದ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗದೆ ಇರುವಂತೆ ನೋಡಿಕೊಳ್ಳಲು ಜುಲೈ 12 ಅಂದರೆ ಇಂದು ರಾತ್ರಿ 7:30ರ ಮೊದಲು ಅಗತ್ಯ ಇರುವಷ್ಟು ಹಣವನ್ನು ವಿಡ್ರಾ ಮಾಡುವಂತೆ ಸೂಚಿಸಿದೆ. ಅಥವಾ ಯಾರಿಗಾದರೂ ಹಣ ಕಳುಹಿಸಬೇಕು ಎಂದಾದರೆ ಮೊದಲೇ ಆ ಕೆಲಸವನ್ನು ಮಾಡಿ ಮುಗಿಸುವಂತೆ ಹೇಳಿದೆ. 

ಇದನ್ನೂ ಓದಿ : ITR 2024: ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ 7 ನಮೂನೆಗಳಲ್ಲಿ ನೀವು ಯಾವುದನ್ನು ಆರಿಸಬೇಕು?

ಕಾರ್ಡ್ ರಹಿತವಾಗಿ ನಗದು ಹಿಂಪಡೆಯುವ ಸೌಲಭ್ಯವನ್ನು ನೀಡಲಾಗುವುದಿಲ್ಲ : 
ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಪ್ಗ್ರೇಡ್  ಕಾರ್ಯವನ್ನು ರಜಾದಿನಗಳಲ್ಲಿ ಮಾಡಲಾಗುತ್ತಿದೆ ಎಂದು ಬ್ಯಾಂಕ್ ತಿಳಿಸಿದೆ.ಎಚ್‌ಡಿಎಫ್‌ಸಿ ಬ್ಯಾಂಕ್ ನೀಡಿದ ಮಾಹಿತಿಯಲ್ಲಿ,ಜುಲೈ 13, 2024ರಂದು ಬೆಳಿಗ್ಗೆ 3ರಿಂದ ಸಂಜೆ 4:30 ರವರೆಗೆ ನಡೆಯುವ ಸಿಸ್ಟಮ್  ಅಪ್ಗ್ರೇಡ್ ಕಾರ್ಯದಲ್ಲಿ ಠೇವಣಿ, ಹಣ ವರ್ಗಾವಣೆ,ಮಿನಿ ಸ್ಟೇಟ್‌ಮೆಂಟ್, ವಿಚಾರಣೆ/ಬಿಲ್‌ಪೇ ಸೇವೆ ಮತ್ತು ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆ ಸೌಲಭ್ಯ ದೊರೆಯುವುದಿಲ್ಲ.

ಇದಲ್ಲದೇ, ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವು ಸಿಸ್ಟಮ್ ನವೀಕರಣದ ಸಮಯದಲ್ಲಿ ಲಭ್ಯವಿರುತ್ತದೆ.ಹಣ ವರ್ಗಾವಣೆಗಾಗಿ, IMPS, NEFT, RTGS, HDFC ಬ್ಯಾಂಕ್ ಖಾತೆಯಿಂದ ಖಾತೆಗೆ ಆನ್‌ಲೈನ್ ವರ್ಗಾವಣೆ ಮತ್ತು ಶಾಖೆ ವರ್ಗಾವಣೆ ಸೇರಿದಂತೆ ಎಲ್ಲಾ ಹಣ ವರ್ಗಾವಣೆ ಸೌಲಭ್ಯಗಳು ಈ ಅವಧಿಯಲ್ಲಿ ಲಭ್ಯವಿರುವುದಿಲ್ಲ.

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಟ್ರಿಪಲ್ ಧಮಾಕ ! ಮಾಸಿಕ ವೇತನದಲ್ಲಿ ಭಾರೀ ಹೆಚ್ಚಳ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News