Hyundai Creta: ಹೊಸ ಹ್ಯುಂಡೈ ಕ್ರೆಟಾದ ಆರಂಭಿಕ ಬೆಲೆ 10.44 ಲಕ್ಷ ರೂ. ಗಳಾಗಿದ್ದು, ಇದು ಉನ್ನತ ರೂಪಾಂತರದ ಬೆಲೆ 18.24 ಲಕ್ಷ ರೂ.ಗಳಾಗಿದೆ. ಇವು ಕ್ರೆಟಾದ ಎಕ್ಸ್ - ಷೋರೂಮ್ ಬೆಲೆಗಳಾಗಿವೆ. ಓರ್ವ ವ್ಯಕ್ತಿಯು ಈ ಕಾರನ್ನು ಖರೀದಿಸಿದರೆ, ಈ ಬೆಲೆಗಳಿಗಿಂತ ಹೆಚ್ಚಿನ ನೋಂದಣಿ ಶುಲ್ಕ, ರಸ್ತೆ ತೆರಿಗೆ, ವಿಮೆ ಮುಂತಾದ ಎಲ್ಲಾ ಶುಲ್ಕಗಳನ್ನು ಅವನು ಪಾವತಿಸಬೇಕಾಗುತ್ತದೆ, ಇದು ಕಾರನ್ನು ಆನ್ ರೋಡ್  ಬೆಲೆಯಲ್ಲಿರಿಸುತ್ತದೆ, ಎಕ್ಸ್-ಶೋರೂಮ್ ಬೆಲೆ ಗ್ರಾಹಕರ ಆನ್-ರೋಡ್ ಬೆಲೆಗಿಂತ ಹೆಚ್ಚಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ, ಓರ್ವ ವ್ಯಕ್ತಿಯು ಹಳೆಯ ಕಾರು ಖರೀದಿಸಲು ಬಯಸಿದಾಗ, ಅವನು ರಸ್ತೆ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಆದ್ದರಿಂದ ಇಂದು ಕೆಲವು ಹಳೆಯ ಹ್ಯುಂಡೈ ಕ್ರೆಟಾ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಇದು ಸುಮಾರು 8 ಲಕ್ಷ ರೂಪಾಯಿಗಳಿಗೆ ಮಾರಾಟಕ್ಕೆ ಲಭ್ಯವಿದೆ. ನಾವು ಈ ಕಾರುಗಳನ್ನು ಕಾರ್ಸ್ 24 ರ ವೆಬ್‌ಸೈಟ್‌ನಲ್ಲಿ ಗಮನಿಸಿದ್ದೇವೆ.


COMMERCIAL BREAK
SCROLL TO CONTINUE READING

ಇಲ್ಲಿ ಪಟ್ಟಿ ಮಾಡಲಾದ 2015 ರ ಹ್ಯುಂಡೈ ಕ್ರೆಟಾ 1.6 ಎಸ್‌ಎಕ್ಸ್ (ಒ) ಸಿಆರ್‌ಡಿಐ ಮ್ಯಾನುವಲ್ 56,027 ಕಿ.ಮೀ. ಚಲಿಸಿದೆ. ಡೀಸೆಲ್ ಎಂಜಿನ್ ಹೊಂದಿರುವ ಈ ಕಾರು ಫಸ್ಟ್ ಓನರ್ ಕಾರ್ ಆಗಿದೆ. ಇದರ ಸಂಖ್ಯೆ ಡಿಎಲ್ -8 ಸಿ ಯಿಂದ ಪ್ರಾರಂಭವಾಗುತ್ತದೆ ಮತ್ತು ಅದಕ್ಕಾಗಿ 7,72,000 ರೂ. ನಿಗದಿಪಡಿಸಲಾಗಿದೆ. ಕಾರು ನೋಯ್ಡಾದಲ್ಲಿ ಮಾರಾಟಕ್ಕೆ ಲಭ್ಯವಿದೆ.


ಇಲ್ಲಿ ಪಟ್ಟಿ ಮಾಡಲಾದ ಮತ್ತೊಂದು 2015 ಸಾಲಿನ ಹ್ಯುಂಡೈ ಕ್ರೆಟಾ 1.6 ಎಸ್ ಮ್ಯಾನುವಲ್ 49,909 ಕಿ.ಮೀ. ಚಲಿಸಿದೆ. ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು ಸಹ ಸಿಂಗಲ್ ಓನರ್ ಕಾರ್ ಯಾಗಿದೆ. ಇದರ ಸಂಖ್ಯೆ ಡಿಎಲ್ -1 ಸಿ ಯಿಂದ ಪ್ರಾರಂಭವಾಗುತ್ತದೆ ಮತ್ತು ಇದಕ್ಕಾಗಿ  7,81,000 ರೂ. ಡಿಮಾಂಡ್ ಮಾಡಲಾಗಿದೆ. ಇದು ಸಹ ನೋಯ್ಡಾದಲ್ಲಿ ಮಾರಾಟಕ್ಕೆ ಲಭ್ಯವಿದೆ.


ಇದನ್ನೂ ಓದಿ-ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್, ಬೆಲೆ ಕೇವಲ ಇಷ್ಟೇ!


ಮತ್ತೊಂದು 2015 ರ ಹ್ಯುಂಡೈ ಕ್ರೆಟಾ 1.6 ಎಸ್ ಮ್ಯಾನುಅಲ್ ಸಹ ಇಲ್ಲಿ ಪಟ್ಟಿ ಮಾಡಲಾಗಿದೆ, ಇದು 27,923 ಕಿ.ಮೀ. ಚಲಿಸಿದೆ. ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು ಸಹ ಸಿಂಗಲ್ ಓನರ್ ಕಾರ್ ಆಗಿದೆ. ಇದರ ಸಂಖ್ಯೆ ಯುಪಿ-32 ಯಿಂದ ಪ್ರಾರಂಭವಾಗುತ್ತದೆ ಮತ್ತು ಅದಕ್ಕಾಗಿ 8,47,000 ರೂ. ಡಿಮಾಂಡ್ ಮಾಡಲಾಗಿದೆ. ನೋಯ್ಡಾದಲ್ಲಿ ಕಾರು ಮಾರಾಟಕ್ಕೆ ಇದೆ.


ಇದನ್ನೂ ಓದಿ-ರೈತ ಬಾಂಧವರಿಗೊಂದು ಭಾರಿ ಸಂತಸದ ಸುದ್ದಿ, ಪಿಎಂ ಕಿಸಾನ್ ಅಡಿ ಇನ್ಮುಂದೆ ವಾರ್ಷಿಕವಾಗಿ ಇಷ್ಟು ಹಣ ವರ್ಗಾವಣೆ!


ಸಿಆರ್ಡಿಐ ಮ್ಯಾನುವಲ್ ಗಾಗಿ ಇಲ್ಲಿ ಪಟ್ಟಿ ಮಾಡಲಾದ 2018 ರ ಹ್ಯುಂಡೈ ಕ್ರೆಟಾವನ್ನು 8,48,000 ರೂ. ಡಿಮಾಂಡ್ ಮಾಡಲಾಗಿದೆ. ಕಾರು ನೋಯ್ಡಾದಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದರ ಸಂಖ್ಯೆ ಯುಪಿ -16 ನಿಂದ  ಪ್ರಾರಂಭವಾಗುತ್ತದೆ ಮತ್ತು ಇದು 84,661 ಕಿ.ಮೀ. ಅಂತರ ಕ್ರಮಿಸಿದೆ. ಇದು ಡೀಸೆಲ್ ಎಂಜಿನ್ ಹೊಂದಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.