Maruti 7 Seater SUV: ಮಾರುತಿ ಸುಜುಕಿ ಆಟೋ ಏಕ್ಪೋನಲ್ಲಿ ತನ್ನ 5-ಡೋರ್ ಲೈಫ್‌ಸ್ಟೈಲ್ ಎಸ್‌ಯುವಿ ಜಿಮ್ನಿ ಮತ್ತು ಫ್ರಾಂಕ್ಸ್ ಕ್ರಾಸ್‌ಒವರ್ ಕಾರುಗಳನ್ನು ಪರಿಚಯಿಸಿತ್ತು. ಈ ವರ್ಷದ ಮೊದಲಾರ್ಧದಲ್ಲಿ ಅವುಗಳನ್ನು ಬಿಡುಗಡೆ ಮಾಡಲಾಗುವದು ಎನ್ನಲಾಗಿದೆ. ಈ ಅವಧಿಯಲ್ಲಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ SUV ಅನ್ನು ಪರಿಚಯಿಸಲಿದೆ. ಈ ಎಲೆಕ್ಟ್ರಿಕ್ SUV ಯ ಉತ್ಪಾದನಾ ಆವೃತ್ತಿಯನ್ನು 2024-25 ರಲ್ಲಿ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಇದರ ಹೊರತಾಗಿ, ಕಂಪನಿಯು ಮೂರು ರೋ ಹೊಂದಿರುವ SUV ಗಳ ಮೇಲೂ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕೆ Y17 ಎಂಬ ಕೋಡ್ ನೇಮ್ ನೀಡಲಾಗಿದೆ. SUV ಮಹೀಂದ್ರ XUV700 ಮತ್ತು ಟಾಟಾ ಸಫಾರಿಯೊಂದಿಗೆ ಕಂಪನಿ ನೇರ ಸ್ಪರ್ಧಿಸಲಿದೆ.
ಮಾರುತಿ ಗ್ರ್ಯಾಂಡ್ ವಿಟಾರಾಗೆ ಹೋಲಿಸಿದರೆ ಈ ಹೊಸ ಎಸ್‌ಯುವಿಯ ವ್ಹೀಲ್‌ಬೇಸ್ ಉದ್ದವಾಗಿದೆ. ಉದ್ದವಾದ ವೀಲ್‌ಬೇಸ್ ಮತ್ತು ಕಾರಿನ ಉದ್ದದ ಕಾರಣ, ಮಾರುತಿ ಸುಜುಕಿ ಮೂರನೇ ಸಾಲಿಗೆ ಹೊಂದಿಕೊಳ್ಳಲು ಅನುವಾಗಲಿದೆ. ಗ್ರ್ಯಾಂಡ್ ವಿಟಾರಾದಿಂದ ವಿಭಿನ್ನವಾಗಿಸಲು, ವಿನ್ಯಾಸದಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ-ಅತ್ಯಂತ ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾದ ಬೆಸ್ಟ್ ಮೈಲೇಜ್ ನೀಡುವ ಬೈಕ್ ಗಳಿವು
ಈ SUV ಯಲ್ಲಿ ಕಂಪನಿ ಎರಡು ಎಂಜಿನ್ ಆಯ್ಕೆಗಳನ್ನು ನೀಡುವ ಸಾಧ್ಯತೆಯಿದೆ. ಮೊದಲ ಎಂಜಿನ್ 1.5-ಲೀಟರ್ NA ಪೆಟ್ರೋಲ್ ಆಗಿರುತ್ತದೆ. ಎರಡನೆಯ ಆಯ್ಕೆಯು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಟೊಯೋಟಾ ಮೂಲದ 1.5L 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಇರಲಿದೆ. ಕಂಪನಿಯು ಟೊಯೋಟಾದಿಂದ 2.0 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಹೈಬ್ರಿಡ್ ತಂತ್ರಜ್ಞಾನದೊಂದಿಗೆ 2.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಸಹ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಈ ಎಂಜಿನ್‌ಗಳನ್ನು ಪ್ರಸ್ತುತ ಹೊಸ ಇನ್ನೋವಾ ಹೈಕ್ರಾಸ್‌ನಲ್ಲಿ ನೀಡಲಾಗಿದೆ.
ಇದನ್ನೂ ಓದಿ-RX100 ಲುಕ್ ಇರುವ ಅಗ್ಗದ 150ಸಿಸಿ ಬೈಕ್ ಬಿಡುಗಡೆ ಮಾಡಿದ ಯಮಾಹಾ!
ಮಾರಾಟ ಯಾವಾಗ ಪ್ರಾರಂಭ?
ಇದನ್ನು 2025 ರಲ್ಲಿ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಈ ಮಾರುತಿ ಎಸ್‌ಯುವಿ ಸುಜುಕಿಯ ಗ್ಲೋಬಲ್-ಸಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಪ್ಲಾಟ್‌ಫಾರ್ಮ್ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ನಲ್ಲಿಯೂ ನೀಡಲಾಗಿದೆ. ವರದಿಗಳನ್ನು ನಂಬುವುದಾದರೆ, ಹೊಸ ಮಾರುತಿ ಎಸ್‌ಯುವಿ ಉತ್ಪಾದನೆಯು ಹರಿಯಾಣದ ಖಾರ್ಖೋಡಾದಲ್ಲಿ ನಡೆಯಲಿದೆ. ಈ ಹೊಸ ಪ್ಲಾಂಟ್ 2025 ರ ವೇಳೆಗೆ ಕಾರ್ಯನಿರ್ವಹಿಸಲಿದೆ ಮತ್ತು ಈ ಪ್ಲಾಂಟ್ ನಿಂದ ಹೊರಬರುವ ಮೊದಲ ಮಾದರಿಯು ಈ 7-ಆಸನಗಳ SUV ಆಗಿರಲಿದೆ ಎನ್ನಲಾಗಿದೆ. ಈ ಪ್ಲಾಂಟ್ ನ ವಾರ್ಷಿಕ ಉತ್ಪಾದನಾ ಸಾಮರ್ಥ್ಯ 2.5 ಲಕ್ಷ ಯೂನಿಟ್ ಆಗಿರುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.