Honda Activa: ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಆಕ್ಟಿವಾ 125 ಸ್ಕೂಟರ್‌ನಲ್ಲಿ ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಒದಗಿಸಿದೆ. ಹೋಂಡಾ ಘೋಷಿಸಿದ ಈ ಆಫರ್‌ನಲ್ಲಿ ಗ್ರಾಹಕರು ಈ ಸ್ಕೂಟರ್ ಖರೀದಿಯ ಮೇಲೆ 5,000 ರೂ.ವರೆಗೆ ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದಾಗಿದೆ. ಆಯ್ದ ಡೆಬಿಟ್ ಕಾರ್ಡ್‌ಗಳ ಮೂಲಕ EMI ನಲ್ಲಿ ಸ್ಕೂಟರ್ ಖರೀದಿಯ ಮೇಲೆ ಗ್ರಾಹಕರು ಈ ಕೊಡುಗೆಯ ಪ್ರಯೋಜನವನ್ನು ಪಡೆಯುತ್ತಾರೆ. ಕಂಪನಿಯು ಕನಿಷ್ಠ 30,000 ರೂಪಾಯಿಗಳ ವಹಿವಾಟಿನ ಮೇಲೆ 5% ಕ್ಯಾಶ್‌ಬ್ಯಾಕ್ ಅನ್ನು ನೀಡುತ್ತದೆ, ಅಂದರೆ ಗ್ರಾಹಕರು 5,000 ರೂ.,ವರೆಗೆ ಕ್ಯಾಶ್ ಬ್ಯಾಕ್ ಕೊಡುಗೆಯನ್ನೂ ಸಹ ಪಡೆಯಬಹುದು. ಕಂಪನಿಯು ಗ್ರಾಹಕರಿಗೆ ಇನ್ನೂ ಉತ್ತಮವಾದ ಆಫರ್ ಅನ್ನು ನೀಡಿದ್ದು, ಇದರಲ್ಲಿ ಹೋಂಡಾ ಆಕ್ಟಿವಾ 125 ಅನ್ನು ಕೇವಲ 3,999 ರೂಗಳ ಡೌನ್ ಪಾವತಿಯೊಂದಿಗೆ ಖರೀದಿಸಬಹುದು.


COMMERCIAL BREAK
SCROLL TO CONTINUE READING

31ನೇ ಮಾರ್ಚ್ 2022 ರವರೆಗೆ ಆಫರ್:
ಇದಲ್ಲದೇ, ಹೋಂಡಾ (Honda) ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾವು ಗ್ರಾಹಕರ ನೆಚ್ಚಿನ ಆಕ್ಟಿವಾ 125 ಸ್ಕೂಟರ್ ಅನ್ನು ರೂ. 3,999 ಆರಂಭಿಕ ಪಾವತಿಯೊಂದಿಗೆ ನೀಡುತ್ತಿದೆ. ಕಂಪನಿಯು ಈ ಕೊಡುಗೆಯನ್ನು ಗ್ರಾಹಕರಿಗೆ 31 ಮಾರ್ಚ್ 2022 ರವರೆಗೆ ಮಾತ್ರ ನೀಡಿದೆ. ಈ ಕೊಡುಗೆಗಳು ಡೀಲರ್‌ಶಿಪ್ ಮತ್ತು ನಗರವನ್ನು ಅವಲಂಬಿಸಿ ಬದಲಾವಣೆಗೆ ಒಳಪಟ್ಟಿರುತ್ತವೆ, ಆದ್ದರಿಂದ ಉತ್ತಮ ಡೀಲ್‌ಗಾಗಿ ಗ್ರಾಹಕರು ತಮ್ಮ ಹತ್ತಿರದ ಡೀಲರ್‌ಶಿಪ್ ಅನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. 


ಇದನ್ನೂ ಓದಿ- EPFO : UAN ನಂಬರ್ ಇಲ್ಲದೆಯೇ ನೀವು PF ಖಾತೆಯಿಂದ ಹಣ ತೆಗಿಯಬಹುದು! ಹೇಗೆ? ಇಲ್ಲಿದೆ ನೋಡಿ


ಆಕ್ಟಿವಾ 125 ಹೊರತಾಗಿ, ಹೋಂಡಾ ಆಕ್ಟಿವಾ 6G (Honda Activa 6G) ಯಲ್ಲಿಯೂ ಈ ಕೊಡುಗೆಯನ್ನು ಲಭ್ಯವಾಗುವಂತೆ ಮಾಡಿದೆ. ಈ ಸ್ಕೂಟರ್‌ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 74,157 ರೂ ಆಗಿದ್ದು ಅದು 82,820 ರೂ.ವರೆಗೆ ಇರಲಿದೆ. 


ಇದನ್ನೂ ಓದಿ- Driving Licence: ಡ್ರೈವಿಂಗ್ ಲೈಸೆನ್ಸ್ ನಿಯಮಗಳಲ್ಲಿ ಭಾರೀ ಬದಲಾವಣೆ, ಏನೆಂದು ತಿಳಿಯಿರಿ


ಕಂಪನಿಯ ಅತ್ಯುತ್ತಮ ಮಾರಾಟವಾದ ಸ್ಕೂಟರ್:
ಭಾರತೀಯ ಗ್ರಾಹಕರಲ್ಲಿ ಹೋಂಡಾ ಆಕ್ಟಿವಾ 125 ಎಷ್ಟು ಇಷ್ಟವಾಗಿದೆ ಎಂದು ಹೇಳಬೇಕಾಗಿಲ್ಲ. ಈ ಸ್ಕೂಟರ್ ದೀರ್ಘಕಾಲದವರೆಗೆ ಕಂಪನಿಯ ಅತ್ಯುತ್ತಮ ಮಾರಾಟವಾದ ಸ್ಕೂಟರ್ ಆಗಿದೆ. ಹೋಂಡಾ ದ್ವಿಚಕ್ರ ವಾಹನಗಳು ಕೂಡ ಕಳೆದ ತಿಂಗಳು  ಈ ಸ್ಕೂಟರ್‌ನ 1,43,234 ಯುನಿಟ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಿದೆ. ಹೋಂಡಾ ಆಕ್ಟಿವಾವು 124 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 6500 ಆರ್‌ಪಿಎಂನಲ್ಲಿ 8.18 ಬಿಎಚ್‌ಪಿ ಪವರ್ ಮತ್ತು 5000 ಆರ್‌ಪಿಎಂನಲ್ಲಿ 10.3 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ, ಇದು ಸುಜುಕಿ ಆಕ್ಸೆಸ್ 125 ಮತ್ತು ಟಿವಿಎಸ್ ಜುಪಿಟರ್ 125 ರೊಂದಿಗೆ ಸ್ಪರ್ಧಿಸುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.