ನವದೆಹಲಿ: ಚಾಲನಾ ಪರವಾನಗಿ ಪಡೆಯಲು ನೀವು ಇನ್ನು ಮುಂದೆ ಪ್ರಾದೇಶಿಕ ಸಾರಿಗೆ ಕಚೇರಿ (RTO) ಸುತ್ತುವ ಅಗತ್ಯವಿಲ್ಲ, ಉದ್ದನೆಯ ಸಾಲಿನಲ್ಲಿಯೂ ನಿಲ್ಲಬೇಕಿಲ್ಲ. ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ನಿಯಮ(Driving License Rules)ಗಳನ್ನು ತುಂಬಾ ಸುಲಭ ಮಾಡಿದೆ. ಚಾಲನಾ ಪರವಾನಗಿ ನಿಯಮಗಳಲ್ಲಿ ಮಾಡಲಾಗಿರುವ ತಿದ್ದುಪಡಿಗಳ ಪ್ರಕಾರ, ಈಗ ನೀವು RTOಗೆ ಭೇಟಿ ನೀಡಿ ಯಾವುದೇ ರೀತಿಯ ಡ್ರೈವಿಂಗ್ ಪರೀಕ್ಷೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಈ ಹೊಸ ನಿಯಮಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜಾರಿಗೊಳಿಸಿದೆ. ಇದರಿಂದ ಚಾಲನಾ ಪರವಾನಗಿಗಾಗಿ ಆರ್‌ಟಿಒ ಕಚೇರಿಯಲ್ಲಿ ಗಂಟೆಗಟ್ಟಲೇ ಕಾಯಬೇಕಿದ್ದ ಜನರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಡ್ರೈವಿಂಗ್ ಸ್ಕೂಲ್ ಗೆ ಹೋಗಿ ಟ್ರೈನಿಂಗ್ ತೆಗೆದುಕೊಳ್ಳಬೇಕು
ಸಚಿವಾಲಯವು ನೀಡಿರುವ ಮಾಹಿತಿಯ ಪ್ರಕಾರ ಈಗ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಆರ್‌ಟಿಒದಲ್ಲಿ ಪರೀಕ್ಷೆಗಾಗಿ(Driving License Test) ಕಾಯಬೇಕಾಗಿಲ್ಲ. ಯಾವುದೇ ಮಾನ್ಯತೆ ಪಡೆದ ಡ್ರೈವಿಂಗ್ ತರಬೇತಿ ಶಾಲೆಯಲ್ಲಿ ಡ್ರೈವಿಂಗ್ ಲೈಸೆನ್ಸ್‌ಗಾಗಿ ನೀವೇ ಹೆಸರು ನೋಂದಾಯಿಸಿಕೊಳ್ಳಬಹುದು. ಚಾಲನಾ ಪರವಾನಗಿ ಬೇಕಾದವರು ಡ್ರೈವಿಂಗ್ ಟ್ರೈನಿಂಗ್ ಸ್ಕೂಲ್(Driving Training School)ನಿಂದ ತರಬೇತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಅರ್ಜಿದಾರರಿಗೆ ಶಾಲೆಯಿಂದ ಪ್ರಮಾಣಪತ್ರವನ್ನು ಸಹ ನೀಡಲಾಗುತ್ತದೆ. ಈ ಪ್ರಮಾಣಪತ್ರದ ಆಧಾರದ ಮೇಲೆ ಅರ್ಜಿದಾರರ ಚಾಲನಾ ಪರವಾನಗಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ: Pensioners : ಪಿಂಚಣಿದಾರರೆ ಗಮನಿಸಿ : ನಾಳೆ ಲಾಸ್ಟ್ ಡೇಟ್! ಇಲ್ಲದಿದ್ದರೆ ನಿಮ್ಮಗೆ ಪಿಂಚಣಿ ಬರಲ್ಲ
ಹೊಸ ನಿಯಮಗಳೇನು..?
ತರಬೇತಿ ಕೇಂದ್ರಗಳಿಗೆ ಸಂಬಂಧಿಸಿದಂತೆ ರಸ್ತೆ ಮತ್ತು ಸಾರಿಗೆ ಸಚಿವಾಲಯ(Union Ministry of Road Transport and Highways)ದಿಂದ ಕೆಲವು ಮಾರ್ಗಸೂಚಿಗಳು ಮತ್ತು ಷರತ್ತುಗಳಿವೆ. ಇದು ತರಬೇತಿ ಕೇಂದ್ರಗಳ ಪ್ರದೇಶದಿಂದ ತರಬೇತುದಾರರ ಶಿಕ್ಷಣದವರೆಗೆ ಒಳಗೊಂಡಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಿರಿ.
1. ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಮತ್ತು ಲಘು ಮೋಟಾರು ವಾಹನಗಳ ತರಬೇತಿ ಕೇಂದ್ರಗಳಿಗೆ ಕನಿಷ್ಠ 1 ಎಕರೆ ಭೂಮಿ ಇರುವ ಬಗ್ಗೆ ಅಧಿಕೃತ ಸಂಸ್ಥೆ ಖಚಿತಪಡಿಸಿಕೊಳ್ಳಬೇಕು, ಮಧ್ಯಮ ಮತ್ತು ಭಾರೀ ಪ್ರಯಾಣಿಕ ಸರಕು ವಾಹನಗಳು ಅಥವಾ ಟ್ರೇಲರ್‌ಗಳ ಕೇಂದ್ರಗಳಿಗೆ 2 ಎಕರೆ ಭೂಮಿಯ ಅಗತ್ಯವಿರುತ್ತದೆ.
2. ತರಬೇತುದಾರರು ಕನಿಷ್ಠ 12ನೇ ತರಗತಿ ಉತ್ತೀರ್ಣರಾಗಿರಬೇಕು(New Rules For DL) ಮತ್ತು ಕನಿಷ್ಠ 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು, ಸಂಚಾರ ನಿಯಮಗಳನ್ನು ಚೆನ್ನಾಗಿ ತಿಳಿದಿರಬೇಕು.
3. ಸಚಿವಾಲಯವು ಬೋಧನಾ ಪಠ್ಯಕ್ರಮವನ್ನು ಸಹ ಸೂಚಿಸಿದೆ. ಲಘು ಮೋಟಾರು ವಾಹನಗಳನ್ನು ಚಾಲನೆ ಮಾಡಲು, ಕೋರ್ಸ್‌ನ ಅವಧಿಯು ಗರಿಷ್ಠ 4 ವಾರ 29 ಗಂಟೆಗಳವರೆಗೆ ಇರುತ್ತದೆ. ಈ ಚಾಲನಾ ಕೇಂದ್ರಗಳ ಪಠ್ಯಕ್ರಮವನ್ನು Theory and Practical ಅಂತಾ 2 ಭಾಗಗಳಾಗಿ ವಿಂಗಡಿಸಲಾಗಿದೆ.
4. ಜನರು ಕಚ್ಚಾ ರಸ್ತೆಗಳು, ಗ್ರಾಮೀಣ ರಸ್ತೆಗಳು, ಹೆದ್ದಾರಿಗಳು, ನಗರದ ರಸ್ತೆಗಳು, ಹಿಮ್ಮುಖ ಮತ್ತು ಪಾರ್ಕಿಂಗ್, ಹತ್ತುವಿಕೆ ಮತ್ತು ಇಳಿಜಾರಿನ ಚಾಲನೆ ಇತ್ಯಾದಿಗಳಲ್ಲಿ ಡ್ರೈವಿಂಗ್(Driving License) ಕಲಿಯಲು 21 ಗಂಟೆಗಳ ಕಾಲ ಕಳೆಯಬೇಕು. theory ಭಾಗವು ಸಂಪೂರ್ಣ ಕೋರ್ಸ್‌ನ 8 ಗಂಟೆಗಳ ಅವಧಿಯನ್ನು ಒಳಗೊಂಡಿರುತ್ತದೆ, ಇದು ರಸ್ತೆ ಶಿಷ್ಟಾಚಾರ, ಟ್ರಾಫಿಕ್ ಶಿಕ್ಷಣ, ಅಪಘಾತಗಳ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು, ಪ್ರಥಮ ಚಿಕಿತ್ಸೆ ಮತ್ತು ಚಾಲನೆ, ಇಂಧನ ದಕ್ಷತೆಯನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: 7th Pay Commission : ಕೇಂದ್ರ ನೌಕರರ ಗಮನಕ್ಕೆ : 18 ತಿಂಗಳ ಬಾಕಿ DA ಬಗ್ಗೆ ಮಾಹಿತಿ ನೀಡಿದ ಸರ್ಕಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.